ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 145 8, THE BATTLE OF LANKA ; DEATH OF INDRAJITU. ೮, ಇಂದ್ರಜಿತ್ಸ೦ಹಾರ. ಇತ್ತ ಲಂಕಾದುರ್ಗದಲ್ಲಿ ನಕ್ತಂಚರ ಚಕ್ರೇಶ್ವರನಾದ ರಾವಣನು ತನ್ನ ಪ್ರಿಯ ಸಹೋದರನೂ ಅಸಹಾಯ ಶೂರನೂ ಆದ ಕುಂಭಕರ್ಣನು ಯುದ್ದ ರಂಗದಲ್ಲಿ ಮಡಿದು ಹೋದನೆಂಬ ಸುದ್ದಿಯನ್ನು ಕೇಳಿ ಅನಿವಾರ್ಯ ದುಃಖದಿಂದ ಕೂಡಿ ಹಾಸಿಗೆಯ ಮೇಲೆ ಬಿದ್ದು ಹೊರಳುತ್ತ ಚಿಂತೋ ದಧಿಯಲ್ಲಿ ಬಿದ್ದು ದಡವನ್ನು ಕಾಣದೆ ಕಂಗೆಟ್ಟು ಹರವಸಂಗೊಂಡನು, ಆ ಕಾಲದಲ್ಲಿ ಶೂರನಾದ ಇಂದ್ರಜಿತ್ ಮೊದಲಾದ ರಾಕ್ಷಸ ನಾಯಕರು ಬಂದು ನೋಡಿ ವ್ಯಸನಾಗ್ನಿ ತಪ್ತರಾದರೂ ಮುಂಗೆಡದೆ ರಾವಣನಿಗೆ ಶೈತ್ಯೋಪಚಾರವನ್ನು ಮಾಡಿದುದರಿಂದ ಅವನು ಮರ್ಛತಿಳಿದೆದ್ದು ಕುಳಿತು ಹಾ ! ಕುಂಭಕರ್ಣನೇ, ನನ್ನ ಮದಿಸಿದ ಪಟ್ಟದಾನೆಯೇ ! ಸಾಮಾನ್ಯರಾದ ನರರಿಗೂ ಕಪಿಭಟರಿಗೂ ಸೋತು ಮಡಿದು ಹೋದೆಯಾ ! ಈ ನಿಶಾಚರ ಚಕ್ರವು ಸಲಗನಿಲ್ಲದ ಆನೆಗಳ ತಂಡದಂತಾಯಿತು. ವಿಭೀಷಣನು ಶತ್ರು ಪಕ್ಷವನ್ನು ವಹಿಸಿದಾಗಲೇ ನನ್ನೆಡದ ಭುಜಬಲವು ಬಯಲಾಯಿತೆಂದು ತಿಳಿದಿದ್ದರೂ ನಿನ್ನ ತ್ರಿಲೋಕಾದ್ಭುತ ಬಲಾ ತಿಶಯವನ್ನು ನೆನಸಿ ಧೈರ್ಯಗೊಂಡಿದ್ದೆನು, ದುರ್ವಿಧಿಯು ನಿನ್ನ ನ್ಯೂ ಮುರಿದುಹಾ ಕಿತೇ ! ನಿನ್ನ ಬಲದಿಂದ ಲೋಕತ್ರಯದ ವೀರರನ್ನೂ ತೃಣಕ್ಕೆ ಣೆಯಾಗಿ ತಿಳಿದಿದ್ದೆ ನಲ್ಲಾ ! ಈ ಲಂಕಾನಗರದ ಅರಮನೆಯಲ್ಲಿ ನೀನು ಮಲಗಿದ್ದುದರಿಂದ ಸುರನರೋ ರಗನಾಯಕರೆಲ್ಲರೂ ಲಂಕೆಯೆಂಬ ಹೆಸರನ್ನು ಕೇಳಿದ ಮಾತ್ರದಿಂದಲೇ ಬೆಚ್ಚಿ ಬಿದ್ದು ಮರ್ಲೆಹೊಂದುತ್ತಿದ್ದರಲ್ಲಾ! ಲಂಕಾನಗರದ ಒಡೆಯ ತನದ ಬಲವು ಬಯಲಾ ದಂತೆ ನೀನು ಮಡಿದು ಮಾಯವಾದಿಯಾ ! ಅಯ್ಯೋ ! ನನ್ನ ಭು ಚಒಲವೇ, ನಿನಗೆ ಅಂತ್ಯ ಕಾಲವು ಒದಗಿ ತೇ ! ಇದು ವರೆಗೂ ಯುದ್ದ ರಂಗದಲ್ಲಿ ನಿನಗೆದುರಾಗಿ ಹಿಂದಿ ರುಗಿದ ವೀರರಿಲ್ಲವಲ್ಲಾ ! ಅರಿವೀರರು ನಿನ್ನನ್ನು ಸ್ವಷ್ಟ ದಲ್ಲಿ ನೋಡಿ ಆರ್ತಧ್ವನಿಯಿಂದ ಮೃತಿಹೊಂದುತ್ತಿದ್ದರಲ್ಲಾ ! ನಮ್ಮ ಕುಲವಿರೋಧಿಗಳಾದ ದೇವತೆಗಳಿಗೆ ತೃಪ್ತಿ ಕರ ವಾದ ಯಜ್ಞ ಕ್ರಿಯೆಗಳು ರಾಕ್ಷ ಸಕುಲೋದ್ಧಾರಕನಾದ ನಿನ್ನಿ೦ದ ಪ್ರಳಯವನ್ನು ಹೊಂದಿದ್ದವಲ್ಲಾ ! ಹಾ ! ವೀರಭಾತೃವಿಹೀನನಾದೆನೇ ! ಎಂದು ಪುನಃ ಮರ್ಥೆ ಹೊಂದಿದನು, ಆ ಮೇಲೆ ಸ್ವಲ್ಪ ಹೊತ್ತಿನ ಮೇಲೆ ಮರ್ಛ ತಿಳಿದೆದ್ದು ಕುಂಭ ಕರ್ಣನನ್ನು ನೆನೆನೆನೆದು ಮರುಗಿ ಹಂಬಲಿಸುತ್ತಿರುವ ತಂದೆಯ ಬಳಿಗೆ ಬಂದು ಇಂದ್ರ ಚಿತ್ತುಎಲೆ ತಂದೆಯೇ, ಲಾಲಿಸು, ಲೋಕದ ಜೀವಿಗಳಿಗೆ ಜನನವು ಹೇಗೆ ಸ್ವಭಾ ವವೋ ಹಾಗೇ ಮರಣವೂ ಸ್ವಭಾವವಾದುದು, ಇಷ್ಟು ಮಾತ್ರಕ್ಕಾಗಿ ಸರ್ವವಿ ದ್ಯಾವಿಶಾರದನಾದ ನೀನು ಮರುಗುವುದು ಚಿತವೇ ? ಅದರಲ್ಲಿ ನಮ್ಮ ರಾಕ್ಷಸಕುಲದ ವರು ಇರುವ ವರೆಗೂ ಜಗದೀಕರತೆಯಿಂದ ಬದುಕಿ ವೀರರೊಡನೆ ಕಾದಿ ಮಡಿಯು ವುದು ಶ್ರೇಯಸ್ಕರವು, ಅದರಂತೆ ನನ್ನ ಚಿಕ್ಕಪ್ಪನಾದ ಕುಂಭಕರ್ಣನು ಅಸಂಖ್ಯಾತ ರಾದ ಅರಿಭಟರನ್ನು ಬಡಿದುರುಳಿಸಿ ಹಿಂದೆಗೆಯದೆ ಕಾದಿ ಶತ್ರು ಕುಲದವರ ಎದೆಗು ಬೃಸವನ್ನುಂಟುಮಾಡಿ ಮಡಿದುಹೋದನು. ಇದಕ್ಕೆ ನೀನು ವ್ಯಸನಪಡುವುದರಿಂದ 10