ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 135 ಹೊರಳಿಯ ತೇರುಗಳ ತೆರಳ್ಳೆಯ 9 ಕುದುರೆಗಳ ಜಂಗುಳಿಯ ಕಾಲಾಳುಗಳ ಸಂದ ಣಿಯ ನೆಲವದುರುವಂತೆ ನುಗ್ಗಿ ಬಂದಿತು. ಆಗ ಆ ರಥದ ಉಭಯ ಪಾರ್ಶ್ವಗಳಲ್ಲೂ ವಂದಿಮಾಗದರು-ಧೀರುರೇ ! ಜೀಯಾ, ಪಾಯ ವಾಧಾರೂ! ರಕ್ಕಸರರಸಾ! ಹಳು! ಹಳು ! ನೀತಿವನಕುಠಾರಾ! ಯಜ್ಞಾರಣ್ಯದವಾನಲಾ ! ಬಾಳು !* ಬಾಳು ! ಎಂದು ಹೊಗಳುತ್ತ ಬರುತ್ತಿದ್ದರು, ಅವರ ಮಸೆದ ಕೈಗತ್ತಿಯ ಡಾಳವು ಸೂರ್ಯನ ಬೆಳಕನ್ನು ಬೆದರಿಸಿತು. ಅವನ ಕೋರೆದಾಡೆಗಳ ಹೊಳಪು ಕಲ್ಲಾಂತಭೈರವನ ಅಟ್ಟಹಾಸದ ಸಿರಿ ಯನ್ನು ಅಣಕಿಸಿತು. ಅವನ ಮೈಗಪ್ಪ ಮಸಗಿ ಹಗಲು ಇರುಳಾಯಿತು. ಆ ಕುಂಭಕರ್ಣನನ್ನು ನೋಡಿ ಸುಗ್ರೀವನು ಅಂಚೆದನು. ಹನುಮಲರು ಮುಂದುಗೆಟ್ಟರು, ಜಾಂಬವತ್ತು ಷೇಣಗವಾಕ್ಷಾದಿ ಮಹಾ ಬಲಿಷ್ಟರ ಮೊಗದಾವ ರೆಗಳು ಕ೦ದಿದುವು. ಮಿಕ್ಕ ಕಪಿವೀರರ ದುರವಸ್ಥೆಯನ್ನು ಹೇಳತಕ್ಕುದೇನು ? ದೆಸೆ ದೆಸೆಗೆ ಮುರಿದೋಡುತ್ತಿರುವ ಕಪಿಗಳಲ್ಲಿ ಹಿಂದಕ್ಕಿಣಿ ಕಿನೋಡಿ ಓಡುವೆ ಕಪಿಯೇ ಧೈ ರ್ಯವುಳ್ಳುದು ಎಂದು ಹೇಳಿಸಿಕೊಂಡಿತು, ಆಗ ಧೀರೋದಾತ್ತ ನಾಯಕನಾದ ರಾಘ ವನು ರಕ್ಕಸನನ್ನು ನೋಡಿದುದರಿಂದಲೇ ನೆಗೆದೋಡುತ್ತಿರುವ ಕಪಿಗಳ ಮೊಗ್ಗರವನ್ನು ನೋಡಿ ನಗುತ್ತ ಸಮಿಾಪಸ್ಸನಾದ ವಿಭೀಷಣನನ್ನು ಕುರಿತು--ಇವನು ಯಾರು ? ಎಂದು ಬೆಸಗೊಳ್ಳಲು; ಅವನು-ಜೀಯಾ, ಲಾಲಿಸು. ಇವನು ದಶಕಂಠನ ತಮ್ಮ ನು. ನನ್ನ ಅಣ್ಣನು, `ಪ್ರಲಸ್ಯನ ಮೊಮ್ಮಗನು, ವಿಶ್ರವಸ್ಸಿನ ಮಗನು, ಇವನಿಗೆ ಕುಂಭ ಕರ್ಣನೆಂದು ಹೆಸರು. ಪೂರ್ವದಲ್ಲಿ ಇವನು ಮಾಡಿದ ಅದ್ಭುತ ಕೃತ್ಯಗಳನ್ನು ಕೇಳಿದರೆ ನಿಜವಾಗಿಯೂ ನೀನೂ ಬೆರಗಾಗುವಿ, ಹುಟ್ಟಿದ ಏಳನೆಯ ದಿನದಲ್ಲಿ ಈ ಜಗದ್ದೀವಿಗೆ ಳನ್ನು ಅಟ್ಟಿ ಯೋಡಿಸಿ ಹಿಡಿದು ತಿಂದನು, ಅದರಿಂದ ಬ್ರಹ್ಮನು ಇವನನ್ನು ಯಾವಾಗಲೂ ನಿದ್ದೆಯಲ್ಲಿರುವಂತೆ ಮಾಡಿ ಆರು ತಿಂಗಳಿಗೊಂದುಸಾರಿ ಎದ್ದು ಆಹಾರವನ್ನು ತೆಗೆದು ಕೊಂಡು ಪುನಃ ಬಿದ್ದು ನಿದ್ರಿಸುವಂತೆಮಾಡಿ ಲೋಕತ್ರಯವನ್ನೂ ಕಾಪಾಡಿದನು. ಇವನು ಧುರದಲ್ಲಿ ಮೈದೋರಿ ಮಾರ್ಮಲೆತು ನಿಂತರೆ ಪ್ರಖ್ಯಾತರಾದ ನರನಿರ್ಜರೋರಗ ಭಟರೊಳಗೆ ಎದುರಿನಲ್ಲಿ ನಿಲ್ಲುವವರಾರನ್ನೂ ಕಾಣೆನು. ಇವನು ಪರಹರಣದ ಪಾಪದ ದೆಸೆಯಿಂದ ಸತ್ತರೆ ಸಾಯಬೇಕು. ಅದಿಲ್ಲವಾದರೆ ಇವನು ಸಾಯುವ ಕನ್ನ ವನ್ನು ಕಾಣೆನು, ಜೀಯಾ, ನಮ್ಮ ಬಲದ ಪಲಾಯನವನ್ನು ನೋಡು, ಮೇಲೆ ಆಕಾಶಮಂಡಲವನ್ನೀಕ್ಷಿಸು, ನೆರೆದಿದ್ದ ಬಿಡುಗಣ್ಣರಲ್ಲಿ ಒಬ್ಬರಾದರೂ ಕಾಣುವುದಿಲ್ಲ. ಅವರೆಲ್ಲರೂ ಇವನ ವಿಜೃಂಭಣೆಗೆ ಬೆದರಿ ಮರೆಯಾಗಿಹೋದರು. ಇವನು ಕಾಳೆಗದ ಕಣವನ್ನು ಹೋಗುವುದಕ್ಕೆ ಮೊದಲೇ ನಮ್ಮ ಬಲಕ್ಕೆ ಈ ಅವಸ್ಥೆಯಾಯಿತು. ಮುಂದೆ ಇವನಿರಿತದಿಂದ ನಾವೇನಾಗುವೆವೋ ತಿಳಿಯದು, ಎಲೈ ರಾಜೇಂದ್ರನೇ, ಅವಧರಿಸು. ನಮ್ಮ ವನ ಹೆಗಲಿನಲ್ಲಿರುವ ಶೂಲಾಯುಧದ ತೋರವನ್ನು ನೋಡು, ಅದು ಹಾಗಿರಲಿ. ಅದರ ಮೊನೆಯಲ್ಲಿ ಜವನೆದೆಯ ರಕ್ತವೂ ಎಳೆದೇರನ ಕೆಳೆಯನ ಮಾಂಸವೂ ಇತರ ದಿಕೃತಿಗಳ ಮಜೆಯ ಇವೆ, ಇವನೊಡನೆ ಈ ನೆರೆದ ಮರಗೈದುಗಳ ಮರ್ಕಟವೀ ರರು ಕಾದಿ ಮುಗಿಸಲಾರರು. ಅದು ಕಾರಣ ನೀನೇ ಇವನೊಡನೆ ಕೊಳುಗುಳಕ್ಕೆ ನಿಲ್ಲ