೧೦೬ಕೃಷ್ಣಲೀಲೆ
ರಾಗ - ಮೋಹನ - ಜಂಪೆ.
ಶ್ರೀಕೃಷ್ಣ:- ಪಾಲ್ಬೆಣ್ಣೆಗಳು ನನ್ನ ಪಾಲು!
ಉದ್ದವ:- ಏಕೆ ಗೋಕುಲವೇ ನಿನ್ನ ಪಾಲು!
ಶ್ರೀಕೃಷ್ಣ:- ಗೋಪಾಲಕರಿಗೆ ನಾನರಸ!
ಉದ್ದವ:- ಏಕೆ ಬ್ರಹ್ಮಾಂಡಗಳಿಗೆ ನೀನರಸ!
ಶ್ರೀಕೃಷ್ಣ:- ನಂದ ಗೋಪಗೆ ನಾನು ಕಂದ!
ಉದ್ದವ:- ಆಹಾ ಇಂದಿರಾರಮಣ ಗೋವಿಂದ!
ಶ್ರೀಕೃಷ್ಣ:- ಗೋವುಗಳ ನಾನು ಪಾಲಿಸುವೆ!
ಉದ್ದವ:- ಏಕೆ ಬ್ರಹ್ಮಾದಿಗಳನೆ ಪಾಲಿಸುವೆ!
(ಉದ್ಧವನು ಕೃಷ್ಣನಿಗೆ ಸಾಷ್ಟಾಂಗ ನಮಸ್ಕಾರವನ್ನಾಚರಿ
ಸುವನು.
ಶ್ರೀ ಕೃಷ್ಣ:- ಉದ್ದವಾ! ನೀನು ನನ್ನಂತರಂಗವನ್ನರಿತವನು.
ಈ ಗೋಕುಲದಲ್ಲಿ ಕೆಲವರು ನನ್ನನ್ನು ಪುತ್ರನೆಂತಲೂ, ಕೆಲವರು ಅಳಿ
ಯನೆಂತಲೂ, ಕೆಲವರು ಭಾವನೆಂತಲೂ, ಹಲವರು ಅಣ್ಣನೆಂತಲೂ, ಕೆಲ
ವರು ತಮ್ಮನೆಂತಲೂ ಭಾವಿಸುವರು. ನೀನೂ, ಅಕ್ರೂರನೂ,
ಗೋಪಿಯರೂ, ರಾಧೆಯೂ ನನ್ನಂತರಂಗವನ್ನು ಚನ್ನಾಗಿ ತಿಳಿದಿ
ರುವಿರಿ.
ಉದ್ದವ:- ಷಡ್ಗುಣೈಶ್ವರ್ಯ ಸಂಪನ್ನನಾದ ಭಗವಂತನೇ! ನಿನ್ನ
ಅಂತರಂಗವನ್ನು ಚನ್ನಾಗಿ ತಿಳಿಯಲು ಯಾರಿಗೆ ಸಾಧ್ಯವು?
ಶ್ರುತಿ|| ಯತೋವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹಾ|| ಎಂತಲೂ,
"ಯತೋವಾಇ ಮಾನಿ ಭೂತಾ ನಿಜಾಯಂತೇ| ಏನ ಜಾತಾನಿ ಜೀವಂ
ತಿ ಯತ್ಪ್ರಯಂತ್ಯಭಿ ಸಂವಿಶಂತಿತ ದ್ವಿಜಿಜ್ಞಾಸಸ್ಯ ತದ್ಬ್ರಹ್ಮ||
ಎಂತಲೂ, ಶ್ರುತಿ ವಚನಗಳು ಯಾರನ್ನು ಕುರಿತು ಬಣ್ಣಿಸುತ್ತಿ
ರುವುವೋ ಅಂತಹ ಸರ್ವೇಶ್ವರನಾದ ನೀನು ದುಷ್ಟ ಶಿಕ್ಷಣ ಶಿಷ್ಟ ರಕ್ಷಣ
ರೂಪವಾದ ಲೋಕಾನುಗ್ರಹಾರ್ಥವಾಗಿ, ಗೋಕುಲದಲ್ಲಿ ಕೃಷ್ಣನಾಗಿ
ಅವತರಿಸಿರುವೆ. ಎಲೈ ಪ್ರಭುವೇ! ನೀನು ಸಾಕ್ಷಾತ್ಪರ ಬ್ರಹ್ಮ ಮೂರ್ತಿ
ಯಾದ ನಾರಾಯಣನೆಂಬ ರಹಸ್ಯವನ್ನೂ, ಗೋಪಿಯರು ಬ್ರಹ್ಮ
ನಿಷ್ಠರಾದ ಮಹರ್ಷಿಗಳೆಂಬುದನ್ನೂ ನಿನ್ನ ನುಗ್ರಹ ವಿಶೇಷದಿಂದಲೇ
ಪುಟ:ಶ್ರೀ ಕೃಷ್ಣ ಲೀಲೆ.djvu/೧೨೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ