ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಃಕಲತ. ೪೩ ತಕ್ಕದ್ದು. ನಿಮ್ಮಲ್ಲಿಯ ಅಂತಃಕಲಹವನ್ನು ಮೇಲಾಟದಿಂದ ಶತ್ರುಗಳ ಹಣಿಯುವದರಲ್ಲಿ ಉಪಯೋಗಿಸಿಕೊಳ್ಳುವದು ನನಗೆ ನೆಟ್ಟಗೆ ಕಾಣುತ್ತದೆ. ಈರೇಚ್ಛೆಯಿದ್ದಂತಾಗು ವದು; ಆದರೆ ಹೀಗೆ ಒಂದೇ ಸ್ಥಳದಲ್ಲಿ ಕೊಳೆಯುತ್ತ ಬಿದುಕೊಳ್ಳುವದು ನನ್ನ ಮನ ಸಿಗೆ ಸರ್ವಥಾ ಬರುವದಿಲ್ಲ. ಒಂದು ಕಡತ ಎರಡು ತುಂಡು' ಎನ್ನುವಹಾಗೆ ಈಗ ಮಾಡಬೇಕು. ಈ ಯುದ್ಧದ ಸಂಬಂಧದಿಂದ ಎರಡರಲ್ಲಿ ಒಂದರ ನಿರ್ಣಯವು ಬೇಗನೆ ಆಗುವದು ನನಗೆ ನೆಟ್ಟಗೆ ಕಾಣುತ್ತದೆ,” ಎಂದು ನುಡಿಯಲು, ಮಹದಾಜಿಸಿಂದೆಯು ಎದ್ದು ನಿಂತು ಆವೇಶದಿಂದ-ವೀರರೇ, ನಿಮ್ಮ ಬಾಹುಗಳಿಗೆ ಯುದ್ಧ ಮಾಡುವ ತಿಂಡೆ ಯಿಟ್ಟಿದ್ದರೆ, ಅದನ್ನು ಶತ್ರುಗಳೊಡನೆ ಕಾದಿ ಕಳೆದುಕೊಳ್ಳಿರಿ. ಹೀಗೆ ನಮ್ಮ ನಮ್ಮ ಳಗೆ ಕಾದಾಡುವದರಲ್ಲಿ ಪೌರುಷವೇನು? ಈಗ ನಾನು ಎಲ್ಲರನ್ನು ಪ್ರಾರ್ಥಿಸುವೆನೇನಂ ದರೆ, ನೀವು ಶಿವಛತ್ರಪತಿಯ ಅನುಯಾಯಿಗಳಾಗಿದ್ದರೆ, ಸ್ವರಾಜ್ಯದ ಅಭಿಮಾನವು ನಿಮ್ಮ ಗಿದ್ದರೆ, ನೀವು ಪ್ರಜನನಿಯರ ಪತ್ರ-- ವೀರಪತ್ನಿಯರ ಸತಿಗಳೂ-ವೀರಕುಮಾರರ ತಂದೆಗಳೂ ಆಗಿದ್ದ ಮಹೇಂದಳೆಯವರ ಅಭಿಪ್ರಾಯದಂತೆ ಸರಕ್ಕನೆ ಶಸ್ತ್ರಗಳನ್ನು, ಒರೆಗಳಿಂದ ಹಿಡಿದು ಶತುಗಳಮೇಲೆ ಮನುಕಲಿಕ್ಕೆ ತಟ್ಟನೆ ಸಿದ್ಧರಾಗಿರಿ. ಸದ ಹೊಡೆದು ದುರಾಣಿಕರನನ್ನು ಬರಮಾಡಿಕೊಂಡು ಮರಾಟರ ಕೈಯನ್ನು ಆತನಿಗೆ ಚನ್ನಾಗಿ ತೋರಿಸಿ, ಈ ಮಹದಾಜಿಯ ಕುದುರೆಯು ಹೊರಗೆ ಬೀನು ಕಾಕಿ ಸಿದ್ದ ವಾಗಿ ನಿಂತಿರುವದು, ಬೀನು ಇಳಿಸದೆ ಹಾಗೆಯೇ ಆತನು ಸ್ವಾಮಿ ಕಾರ್ಯಕ್ರಿ. ರಣಕ್ಕೆ ಹೊರಡಲು ಸಿದ್ಧನಾಗಿರುವನೆಂಬುದನ್ನು ಚನ್ನಾಗಿ ನೆನಪಿನಲ್ಲಿಡಿರಿ,” ಎಂದು ನುಡಿದು, ಆತನು ತನ್ನ ತೃವನ್ನು ಹಿಂದು-“ಜಯಜಗದಂಬೆ, ಜಯತುಳಜಾ ಭವಾನಿ” ಎಂದು ಗರ್ಜಿಸಿದನು. - ಹೀಗೆ ಸಿಂದೆಯು ತನ್ನ ಮನೆತನಕ್ಕೆ ಒಪ್ಪುವಂತೆ ಆಡಿದ ನೀರಾಲಾವಗಳನ್ನು ಕೇಳಿ ಧರ್ಬಾರದ ಸರದಾರರೂ ಆವೇಶಗೊಂಡು ತಮ್ಮ ಖತೃಗಳನ್ನು ಒರೆಯಿಂದ ಒರಿದರು. ಆಗ ಮಾರಾವಳಕರನು ಎದ್ದು ನಿಂತು ಖಡ್ವೆ-4 ಶಾಬಾಸ, ಮಹದಾಜೀ, ಶಾಬಾಸ! ನಿಮ್ಮ ಮಾತುಗಳು ನಿಮ್ಮ ಶೌರ್ಯಕ್ಕೆ ಒಪ್ಪವಾಗಿವೆ. ಮೇಡೇಂದಳೆಯ ಮರ ವಿಚಾರವು ನನಗೆ ಸಮ್ಮತವದೆ, ಇಂದೇ ಮಾಣಿಶಹನಮೇಲೆ ದಂಡೆತ್ತಿ ಹೋಗ ಲಿಕ್ಕೆ ನಾನು ಸಿದ್ಧನಿರುತ್ತೇನೆ. ನಮಗೆ ನಾಶಪ್ರಸಂಗವು ಒದಗಿರುವದೆಂಬದೇನೊ ನಿಜ; ಆದರೆ ಆ ಪ್ರಸಂಗಕ್ಕೆ ನನ್ನ ಚಂಡನ್ನು ಮೊದಲು ಮುಂದೆಮಾಡುವನು. ನಾನೂ, ಯಶವಂತರಾವಸವಾರನೂ ಕೂಡಿ ಸೈನಮೊಡನೆ ಇಂದು ರಾತ್ರಿ ದುರ್ರಾಣಿಯಮೇಲೆ ಸಾಗಿಹೋಗುವೆವು. ಸಮರಬಹದ್ದರನೂ, ವಿಠಲರಾವ ವಿಂಚ್ರಕರನೂ ನಮ್ಮ ದಂಡಿನಿಂದ ಒಂದು ಕೂಗಳತೆಯ ಅಂತರದಲ್ಲಿದ್ದು, ನಮ್ಮ ಸೈನ್ಯದ ಹಿಂಭಾಗವನ್ನು ರಕ್ಷಿ ಸುತ್ತಿರಲಿ. ಜನರೊಜೆಸಿಂದೆ, ಮಹದಾಜಿಸಿಂದೆ ಇವರು ತಮ್ಮ ಸೈನ್ಯದೊಡನೆ ದುರಾ ಣಿಯ ಛಾವಣಿಯ ಸಂರಕ್ಷಕಸೈನ್ಯದಮೇಲೆ ಅಕಸ್ಮಾತಾಗಿ ಬಿದ್ದು ಅದನ್ನು ತುಂಡರಿ ಸಲಿ, ಇಬ್ರಾಹಿಮಖಾನರು ನಮ್ಮ ಛಾವಣಿಯನ್ನು ರಕ್ಷಿಸಲಿ. ನಾನು ಹುರಾಣಿಯ