ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೫೨ ನಡೆದದ್ದೇ ದಾರ
ಇಲ್ಲ್ಯಾಕ ಇರೂದಿಲ್ಲ, ಹಾಂಗ್ಯಾಕ ಮಾಡೂದಿಲ್ಲ, ಹಿಂಗ್ಯಾಕ ಮಾಡೂದಿಲ್ಲ ಅಂತ ಕೇಳಬ್ಯಾಡ.ಏನು ಮಾಡಬೇಕು, ಯಾರ ಸಲುವಾಗಿ ಎಷ್ಟು ಮಾಡಬೇಕು ಅಂತ ನನಗೆ ಪೂರಾ ಗೊತ್ತದ. ನಾ ಏನು ಮಾಡ್ತೀನೋ ಅದನ್ನ ಬರೋಬ್ಬರೀನೇ ಮಾಡ್ತೀನಿ. ನಿನಗ ಕಡೀ ಸಲ ಹೇಳತೀನಿ. ನಿನ್ನ ಎಲ್ಲಾ ಬುದ್ಧೀ ಉಪಯೋಗಿಸಿ ತಿಳಕೋ. ತಿಳಕೊಂಡು ನೆನಪಿನ್ಯಾಗಿಟಕೋ.ಒಂದನೇ ಮಾತು: ನನಗ ನಿನ್ನ ಬೇಕು-ಬೇಡ, ಆಶಾ-ಆಕಾಂಕ್ಷಾ,ಸುಖಾ-ದುಃಖಾ ಈ ಎಲ್ಲಾಕ್ಕಿಂತಾ ಆ ಮನೀ ಏನದ ಅಲ್ಲಾ,ಅಲ್ಲಿಯ ಶಾಂತಿ-ಸಮಾಧಾನ ಹೆಚ್ಚು ಮುಖ್ಯ. ಆ ಮನ್ಯಾಗ ಯಾರಿಗೂ ಅಸಂತೋಷ-ಅಸಮಾಧಾನ ಆಗಧಾಂಗ ನೋಡಿಕೊಳ್ಳೂದು ನನ್ನ ಮೊದಲ್ನೇ ಕರ್ತವ್ಯ ಪೂರೈಸಿ ಆದ ಮ್ಯಾಲೆ ನಿನ್ನ ಸುಖ-ಸಂತೋಷದ ಕಡೆ ಲಕ್ಷ್ಯ ಕೊಡೋದು ಎರಡನೇ ಕರ್ತವ್ಯ . ಈ ಎರಡೂ ಕರ್ತವ್ಯ ನಾ ಶಕ್ತ್ಯಾನುಸಾರ ನಿಭಾಯಿಸಿಗೋತ ಹೊಂಟೀನಿ.ತಿಳೀತ.
ಇನ್ನ ಎರಡನೇ ಮಾತು ಅಂದರ ಪ್ರತಿಯೊಂದಕ್ಕೂ 'ನನಗ ಹಕ್ಕು ಇಲ್ಲೇನು, ನನಗ ಅಧಿಕಾರ ಇಲ್ಲೇನು'-ಅಂತ ಕೇಳವ್ಯಾಡ. ನಾ ನಿನ್ನ ಪ್ರೀತಿ ಮಾಡೇನಿ.ಲಗ್ನಾ ಮಾಡಿಕೊಂಡೇನಿ. ನಿನಗ ನನ್ನ ಮ್ಯಾಲೆ ಹಕ್ಕು ಅದ. ಅಧಿಕಾರ ಅದ. ಇಲ್ಲ ಅನ್ನೋದಿಲ್ಲ. ಅದರ ಅದು ೧೦% ಮಾತ್ರ, ಭಾಳಾದರ ೧೫% ಅಂತಿಟ್ಟುಕೋ. ನಿನ್ನ ವ್ಯವಹಾರ ಯಾವಾಗಲೂ ಈ ಪರ್ಸೆಂಟೇಜ್ ದ ಮಿತಿಯೊಳಗ ಇರಲಿ. -ನಾ ಮೂಕಳಾಗಿದ್ದೆ. ಬಹುಶಃ ಆಗಲೇ ಸತ್ತೇಹೋದೆ. *** ಬಹಳ ವರ್ಷಗಳ ನಂತರ ನನ್ನ ಕಣ್ಣು ತೆರೆದಿವೆ.ನಾನು ಎಚ್ಚತ್ತಿದ್ದೇನೆ.ಸತ್ಯವನ್ನು,ವಾಸ್ತವಿಕತೆಅನ್ನು ಕಾಣುತ್ತಿದ್ದೇನೆ.ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅರಗಿಸಿಕೊಳ್ಳಲು ವ್ಯರ್ಥ ಹೆಣಗುತ್ತಿದ್ದೇನೆ. ಯಾರು ಇಹಪರಳಲ್ಲಿ ನನ್ನ ಸರ್ವಸ್ವವೋಯಾರಿಗಾಗಿ ನಾನು ಮನೆ-ಮಠ-ಮರ್ಯಾದೆ-ಆಸೆ-ಆದರ್ಶ ಎಲ್ಲ-ಎಲ್ಲ ತೊರೆದೆನೋ,ಯಾರ ಭೆಟ್ಟಿಯಿಂದ ನನ್ನ ಜನ್ಮ ಸಾರ್ಥಕವೆಂದು ತಿಳಿದದ್ದೆನೋ, ಯಾರ ಅನ್ಯಾಯ - ಅತ್ಯಾಚಾರ- ಅಪಮಾನ ಅಲಕ್ಷ್ಯಗಳನ್ನು ತುಟಿಮುಚ್ಚಿ ಸಹಿಸಿದೆನೋ,ಯಾರ ಪ್ರೀತಿಯಲ್ಲಿ ಸ್ವರ್ಗ ಕಾಣಲು ಬಯಸಿದೆನೋ, ಯಾರು ದೊರಕಿದ್ದು ಈ