ನಾಲ್ಕು ದಿನ ರಜೆಯ ಮೇಲೆ ಹೋಗಿದ್ದಳು ಮಿಸೆಸ್ ವರ್ಮಾ.
ಸ್ಟಾಫ್ ರೂಮಿನಲ್ಲಿ ನಿಶ್ಶಬ್ದತೆ. ಮೂವತ್ತಕ್ಕೂ ಮಿಕ್ಕಿ ಶಿಕ್ಚಕ-ಶಿಕ್ಬಕಿಯರಿದ್ದರೂ
ವಿಶೇಷವಾಗಿ ಮಾತೇ ಇಲ್ಲ. ತನಗಾದರೂ ಏನಾಯಿತು ? ಯಾವಾಗಲೂ ಅರಳು
ಹುರಿದಂತೆ ಮಾತಾಡುತ್ತ ನೂರು ಜನರ ಕುತೂಹಲ - ಆಸಕ್ತಿಗಳನ್ನು ತಾಸುಗಟ್ಟಲೆ
ಹಿಡಿದಿಟ್ಟುಕೊಳ್ಳುತ್ತಿದ್ದೆನಲ್ಲ. ಈಗೇಕೆ ಮಾತೇ ಬರಲೊಲ್ಲವು ? ವರ್ಮಾ ಇಲ್ಲದ್ದಕ್ಕೆ
ಒಂದು ರೀತಿ ಹಾಯೆನಿಸಿದರೂ, ಯಾವ ರೀತಿಯಿಂದಲೂ ಸೋತುಹೋದದ್ದನ್ನು
ಗೆದ್ದುಕೊಳ್ಳಲಾಗುತ್ತಿಲ್ಲವಲ್ಲ. ಟೀಚರ್‍ಸೆಲ್ಲಾ ಮೌನವಾಗಿ ಕ್ಲಾಸಿಗೆ ಹೋಗಿ-ಬಂದು
ಮಾಡುತ್ತಿದ್ದಾರೆ. ಎಲ್ಲರನ್ನೂ ಬಹುಶಃ ಇಲ್ಲದ ವರ್ಮಾನ ಭೂತ
ಹಿಡಿದುಕೊಂಡಿದೆ... ತನ್ನ ಸಾಹಸ ಸಾಮರ್ಥ್ಯ ಪರೀಕ್ಬೆಯ ಕನಸುಗಳೆಲ್ಲಾ ಒಡೆದು
ಹೋಗುತ್ತಿವೆ. ತನ್ನ ಇಷ್ಟು ವರ್ಷಗಳ ಆತ್ಮವಿಶ್ವಾಸ ಹನಿಹನಿಯಾಗಿ
ಸೋರಿಹೋಗುತ್ತಿದೆ. ಈ ಊರಿನ ಹವಾಗುಣದಿಂದಲೋ ಏನೋ. ಒಂದು ರೀತಿಯ
ಜಡತ್ವ ಬರುತ್ತಿದೆ - ಮಾನಸಿಕವಾಗಿ, ದೈಹಿಕವಾಗಿ.
“ಏನು ರಜನೀ, ಬಂದಾಗ ಎಷ್ಟು ಹುರುಪಿನಿಂದಿದ್ದಿ. ಈಗ್ಯಾಕೋ ಸಪ್ಪಗೆ
ಕಾಣತೊಡಗಿರುವಿಯಲ್ಲ. ಗಂಡನ್ನ ಬಿಟ್ಟಿರೂದಾಗೂದಿಲ್ಲೇನು ?" -ಮಾವಶಿ
ಚೇಷ್ಟೆ ಮಾಡಿದ್ದಳು.
“ಯಾಕೋ, ಒಂದು ನಮೂನೆ ಜಡ್ಡು ಬಂದ್ಹಾಂಗ ಆಗೇದ. ಇಲ್ಲೀ ಹೈಸ್ಕೂಲೇ
ಸೇರ್ಲಿಲ್ಲ ನನಗ."
“ಅದ್ಯಾಕ ಸೇರ್ಲಿಲ್ಲ ? ಭಾಳ ಚಲೋ ರೆಪ್ಯುಟೇಶನ್ ಅದ ನಿಮ್ಮ ಹೈಸ್ಕೂಲಿಗೆ.
ಕ್ವಾಲಿಫಾಯ್ಡ್ ಟೀಚರು ಇದ್ದಾರ. ಪ್ರತೀ ವರ್ಷ ಪಬ್ಲಿಕ್ ಪರೀಕ್ಷಾದಾಗ ರ್‍ಯಾಂಕು
ತಪ್ಪಿದ್ದಲ್ಲ. ನಮ್ಮ ಹುಡುಗ್ರೆಲ್ಲಾ ಅಲ್ಲೇ ಕಲ್ತಾರ. ಆ ವರ್ಮಾ ಅಂತ ಬಾಯೀ
ಇದ್ದಾಳಲ್ಲ, ಉತ್ತರದಿಂದ ಬಂದಾಳ ನೋಡು ಎರಡು ವರ್ಷಾತು, ಆಕೆ
ಬಂದಾಗಿನಿಂದಂತೂ ಎಲ್ಲಾ ಆ್ಯಕ್ಟಿವ್ದಿಟೀಜ್‌ನ್ಯಾಗೂ ನಿಮ್ಮ ಸ್ಕೂಲಿನದೇ ಮೇಲುಗೈ.
ಊರಾಗೆಲ್ಲಾ ನಿಮ್ಮ ಸ್ಕೂಲಿಂದೇ ಮಾತು. ಮತ್ತ ನೋಡಲಿಕ್ಕನೂ ಎಷ್ಟ ಛೆಂದ
ಇದ್ದಾಳಲ್ಲ ಆಕಿ ?..."
ಮಿಸೆಸ್ ವರ್ಮಾ ರಜೆ ಮುಗಿಸಿ ತಿರುಗಿ ಬಂದಾಗ ಸ್ಟಾಫ್ ರೂಮಿನಲ್ಲಿ ಹಬ್ಬದ
ವಾತಾವರಣ. ಯಾವ ಊರಿಗೆ ಹೋಗಿದ್ದಳೋ, ಯಾಕೆ ಹೋಗಿದ್ದಳೋ, ಏನು ಮಾಡಿ
ಬಂದಳೋ, ಯಾರಿಗೆ ಗೊತ್ತು ? ಯಾರಿಗೂ ಅದರ ಬಗ್ಗೆ ಕುತೂಹಲವಿದ್ದ ಹಾಗೆ
ಕಾಣಲಿಲ್ಲ. ಎಲ್ಲರೂ ಅವಳನ್ನು ಸುತ್ತುವರಿದು ಕೂತುಬಿಟ್ಟಿದ್ದರು.