ವಿಷಯಕ್ಕೆ ಹೋಗು

ಕವಿರತ್ನ ಕಾಳಿದಾಸ - ಬೆಳ್ಳಿಮೂಡಿತೂ ಕೋಳಿ ಕೂಗಿತೂ

ವಿಕಿಸೋರ್ಸ್ದಿಂದ

ಚಿತ್ರ: ಕವಿರತ್ನ ಕಾಳಿದಾಸ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ: ಡಾ. ರಾಜ್‍ಕುಮಾರ್




ಟುರ್ರ್‌ರ್ರ್‌ರ್ರ್‌ರ್ರಾ..
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ

ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಎಳೆ ಬಿಸಿಲು ಎಲ್ಲೆಲ್ಲು ಚೆಲ್ಲಾಡೈತೆ
ಎಲೆ ಮ್ಯಾಗಿನ ಮಂಜು ಅನಿ ಪಳ್ಗುಟ್ಟ್‍ತೈತೆ
ಎಳೆ ಬಿಸಿಲು ಎಲ್ಲೆಲ್ಲು ಚೆಲ್ಲಾಡೈತೆ
ಎಲೆ ಮ್ಯಾಗಿನ ಮಂಜು ಅನಿ ಪಳ್ಗುಟ್ಟ್‍ತೈತೆ

ಅಕ್ಕಿ ಹಾರುತಿದೆ ಕಿಚಿಪಿಚಿ ಎನ್ನುತಿದೆ
ಅಕ್ಕಿ ಹಾರುತಿದೆ ಕಿಚಿಪಿಚಿ ಎನ್ನುತಿದೆ
ಮಂಗ ಮರ ಏರುತಿದೆ
ಆ ಕೊಂಬೆ ಈ ಕೊಂಬೆ ಎಗರುತಿದೆ
ಯಾಕ್ಲೇ ಹನ್‍ಮಂತಣ್ಣ ಗುರ್‌ಗುಡ್ತೀಯಾ
ಮಂಗ ಮರ ಏರುತಿದೆ

ಆ ಕೊಂಬೆ ಈ ಕೊಂಬೆ ಎಗರುತಿದೆ
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೂ ಕೋಳಿ ಕೂಗಿತು

ಆಕಾಸ್ದಾಗೆ ಬಣ್ಣ ಬಳಿದೋನ್ಯಾರು

ಈ ಬೆಟ್ಟ ಗುಡ್ಡಗಳ ಮಡುಗ್ದೋನ್ಯಾರು
ಮರದ ಮ್ಯಾಗೆ ಅಣ್ಣಾ ಇಟ್ಟೋನ್ಯಾರು
ಅಣ್ಣಾ ಒಳ್ಗೆ ರುಚಿಯ ತುಂಬ್ದೋನ್ಯಾರು
ಓಹೋಹೋ...ಹೋ ಆಹಾಹಾ...ಹಾಹಾ..ಹಾಹಾ..ಹಾ
ಓ ಕಾಳ....? ಬ್ಯಾಹ್
ಓ ಕರಿಯ...? ಬ್ಯಾಹ್

ಓ ಮುನಿಯ... ಓ ಮರಿಯ...
ಓ ಕೆಂಚ.... ಓ ಜವರ...
ಇಂದು ಈ ಭೂಮಿ ಮ್ಯಾಗೆ ನನ್ನಾ ನಿಮ್ಮಾ ತಂದೋರ್‍ಯಾರು
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹಾ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ

ಬೆಳ್ಳಿ ಮೂಡಿತೂ ಕೋಳಿ ಕೂಗಿತು

ಬೀರಪ್ಪನು ಕುಂತಾನೆ ಗುಡಿಯಾ ಒಳಗೆ
ಬೇಡಿದ ವರ್‌ದಾನ ಕೊಡುವ ನಮಗೆ
ಬಕುತಾರನು ಕಂಡಾರೆ ಆಸೆ ಅವಗೆ
ಕೆಟ್ಟೋರ ಕಂಡಾರೆ ರೋಸ ಅವಗೆ
ಓಹೋಹೋ.. ಹೋಹೋ.. ಆಹಾಹಾ...ಹಾಹಾ..ಹಾಹಾ..ಹಾ

ಓ ಬೀರಾ...? ಬ್ಯಾಹ್
ಓ ಮಾರಾ...? ಬ್ಯಾಹ್
ಓ ನಂಜ.... ಓ ಕೆಂಪಾ....
ಬರ್ರೊಲೆ ಒತ್ತಾಯ್ತು
ಹೊಟ್ಟೆ ಚುರುಗುಟ್ಟ್‍ತೈತೆ ರಾಗಿಮುದ್ದೆ ಉಣ್ಣೋ ಒತ್ತು
ಬೆಳ್ಳಿ ಮೂಡಿತೂ ಕೋಳಿ ಕೂಗಿತು

ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ
ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಅಹ ಬೆಳ್ಳಿ ಮೂಡಿತೂ ಕೋಳಿ ಕೂಗಿತು
ಬಾ... ಬಾ... ಟುರ್ರ್ ಟುರ್ರ್
ಏಯ್ ಸಂದಿಗೊಂದಿಯೊಳ್ಗೆಲ್ಲಾ ನುಗ್ತವಲ್ಲಪ್ಪಾ ಇವೂ..

ಏ ಬರ್ರೊಲೇ...ಏಯ್
ಟುರ್ರ ಟುರ್ರ ಟುರ್ರ್‌ರ್ರ್‌ರ್ರ್‌ರ್ರಾ
ಬಾ ಬಾ ಬಾ..


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ