ಮಾತೃನ೦ದಿನಿ 167 ಸಾಕ್ಷಾತ್ಕಾರವಾದಂತೆ, ಆ ತಾಯ್ತಂದೆಗಳ ಸುಶಿಕ್ಷಣೆಯಿಂದ ಸರಿಪೋಷಿತ ರಾಗಿ, ದೇಶಕಾಲ ವಸ್ತುಸ್ಥಿತಿಗಳನ್ನು ತಕ್ಕಮಟ್ಟಿಗೆ ತಿಳಿದು, ಜಗನ್ನಿಯಂತನ ಉದ್ದೆಶವನ್ನರಿತುಕೊಳ್ಳುವ ಅದೃಷ್ಟವನ್ನು ಹೊಂದಿ, ಇಂದು ಈ ಮಾತೃ ಭೂಮಿಕೆಯಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿರುತ್ತೇವೆ. ಇಂದಿನ ನಮ್ಮ ಸುಖ ಸಮಾಗಮದ ಸುಯೋಗವು ಎಂದಿಗೂ ವ್ಯರ್ಥವೆನ್ಸಿ ಬವದಿಲ್ಲ. ( ಸಾಧು ಸಾಧು ) . ಮಾನವ ಜನ್ಮವನ್ನೆತ್ತಿದ ಪ್ರತಿಯೊಬ್ಬನೂ ಮಾತೃಸೇವೆಯನ್ನು ಮಾಡಿಯೇ ಋಣವಿಮುಕ್ತನಾಗಬೇಕು. ಮಾತೃ ಸೇವೆಯನ್ನು ಮಾಡದೆ, ಮತ್ತಾವ ಸತ್ಕಾರ್ಯವನ್ನೆ ಮಾಡಿದೆವೆಂದರೂ ನಮಗೆ ಬಂಧವಿಮೋಚನ ವಾಗಲಾರದು. ಮಾತೃಕೃಪೆಗೆ ಪಾತ್ರರಾಗದೆ. ನಮ್ಮ ಜನ್ಮಧಾರಣೆಯ ಪರಮೋದ್ದೆಶವನ್ನು ನಾವು ತಿಳಿಯಲಾರೆವ, ಯಾವ ಪುತ್ರನು ಮಾತೃ ಸೇವೆಯನ್ನು ಮನಃಪೂರ್ವಕವಾಗಿ ಮಾಡುವನೋ, ಆತನೇ ದೇಶಮಾತೆಯ ಅನುಗ್ರಹಪಾತ್ರನಾದ ಸತ್ಪುತ್ರನು. ಆತನೇ ದೇಶಮಾತೆಯ ಅಭ್ಯುದಯ ಅಥವಾ ಕ್ಷೇಮಲಾಭವನ್ನು ತಿಳಿದುಕೊಳ್ಳುವ ಮಹಾತ್ಮನು. ಅಂತಹ ಸತ್ಪುತ್ರನಲ್ಲಿಯೇ ಉಮಾದೇವಿಯಾದ ದೇಶಮಾತೆಯ ನಿರತಿಶಯಪ್ರೇಮವೂ ಜಗತನ ಪ್ರಸಾದವ ಸಾಕ್ಷಾತ್ಕಾರವಾಗಿರುವುದು. ಇದಕ್ಕೆ ನಿದರ್ಶನ ವೆನಂದರೆ, ಸತ್ಯವಾನ-ಶ್ರೀರಾಮಚಂದ್ರ ಮೊದಲಾದವರನ್ನು ನೋಡಿದರೆ ಸಾಕು; ಅವರು, ತಮ್ಮ ತಾಯ್ತಂದೆಗಳ ಮತ್ತು ತಮ್ಮ ದೇಶಮಾತೆಯ ಕ್ಷೇಮ-ಅಭ್ಯುದಯ-ಕೀರ್ತಿಗಳ ಮೇಲೆ ತಮಗಿದ್ದ ನೈಸರ್ಗಿಕಪ್ರೇಮದಿಂದ ಎಂತಹ ತಪಃಕ್ಷೇಶಗಳನ್ನು ಸಹಿಸಿದರೆಂಬುದನ್ನೂ, ಅವರ ಶ್ರಮಸಹಿಷ್ಣುತೆ, ಕರ್ತವ್ಯತತ್ಪರತೆ, ಪ್ರೇಮಪರಾಕಾಷ್ಟತೆಗಳ ಮಹತ್ಪಲದಿಂದ ಅವರಿಗುಂಟಾದ ಶಾಶ್ವತಸುಖವೈಭವವನ್ನೂ ವಿಚಾರಕ್ಕೆ ತಂದುಕೊಳ್ಳುವುದಾದರೆ ಸಾಕು.
- ಪುರುಷನು ಹೀಗೆ ತನ್ನ ಕರ್ತವ್ಯವನ್ನು ಚೆನ್ನಾಗಿ ಗಮನಿಸುತ್ತಿದ್ದರೆ, ಸ್ತ್ರೀಯು, ತನ್ನ ಪತಿಯ ಸೇವೆಯೇ ಮುಖ್ಯವಾಗಿ ತನ್ನ ಸತೀಕರ್ತವ್ಯವನ್ನು
ಸಾರ್ಥಕಪಡಿಸುವಂತೆ, ತನ್ನ ಪುರುಷನಿಗೆ ಸಹಚಾರಿಣಿಯಂತಿದ್ದು ಸಹಕರಿಸ ಬೇಕು. ತಮ್ಮ ಪತಿಗಳು ಮಾತಾಪಿತೃ ಸೇವೆಯೇ ಅತ್ಯುತ್ತಮವಾದ ತಪಸ್ಸು ದು ತಿಳಿದು, ಅವರನ್ನು ಸೇವಿಸಿ ಅವರ ಮನಸ್ಸಮಾಧಾನವಾಗುವಂತೆ, ಸರ್ವ