ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರೀಕ್ಷೆಯಲ್ಲಿ ವಿಶೇಷವಿಧಿಗಳು, ೪೧ ಲ್ಲೊಂದು ಸಾಲಿನಲ್ಲಿ ಯೋಚಿಸಿ, ಹಿಂದೆ ಕೊಟ್ಟಿರುವ ಮಾದರಿಗಳಂತೆ, ತೋರಿದ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಪಟ್ಟಿಯ ರೂಪದಲ್ಲಿ ಬರೆದುಕೊಳ್ಳಬೇಕು. ಕೊಟ್ಟ ಕಾಲದ ಕೊನೆಯ ಆರರಲ್ಲೊಂದು ಭಾಗದಲ್ಲಿ, ಬರೆದ ಪ್ರಬಂಧವನ್ನು ತಿದ್ದುವುದು. (3) ಕೊಟ್ಟ ವಿಷಯವನ್ನು ಪುಟದ ಮೇಲ್ಗಡೆ ನಡುವೆ ದಪ್ಪಕ್ಷರಗಳಲ್ಲಿ ಬರೆವುದು. ಪ್ರತಿ ಪುಟದಲ್ಲಿಯೂ ಎಡಗಡೆ ಒಂದೂವರೆಯಂಗುಲದಷ್ಟು ಮಡಿಸಿ ಅಲ್ಲಿ ಏನನ್ನೂ ಬರೆಯದೆ ಬರಿದಾಗಿ ಬಿಡಬೇಕು. ಪ್ರತಿಯೊಂದು ವಾಕ್ಯವೃಂದದ ಮೊದಲನೆಯ ಸಬ್ಸಿಯನ್ನು ಮಿಕ್ಕ ಪಬ್ ಗಳಿಗಿಂತ ಒಂದೆರಡಂಗುಲದಷ್ಟು ಬಲಕ್ಕೆ ಪ್ರಾರಂಭಿಸಬೇಕು. ಪ್ರತಿಪಜ್ಗೂ ಸುಮಾರು ಅರ್ಧ ಅಂಗುಲದ ಅಂತರವನ್ನು ಬಿಡಬೇಕು. (4) ಹುಟ್ಟಕ್ಷರದಲ್ಲಿ ಬರೆವುದು. ಎಂದಿಗೂ ಮೋಡಿಯಲ್ಲಿ ಬರೆಯಬಾರದು, ಚಿತ್ತು ಮಾಡಬಾರದು. ಅಕ್ಷರಸಂಯೋಜನವು ತಪ್ಪಿಲ್ಲದಿರಬೇಕು. ವಿದ್ಯಾರ್ಥಿಗಳು ತಾವು ಬರೆದುದನ್ನು ತಾವು ಮಾತ್ರ ಓದುವುದಕ್ಯಾಗುವಂತೆ ಬರೆದರೆ ಸಾಲದು: ಅವರ ಬರಹವು ಇತರರು ಸಾಧಾರಣವಾಗಿ ಓದುವಂತಿರಬೇಕು. (5) ಕ್ರೈಸ್ತವಾದ ಪುಟಸಂಖ್ಯೆಯನ್ನು ಮೀರಬಾರದು. ಅಷ್ಟರಲ್ಲಿಯೇ ಬರೆಯಬೇಕಾದುದನ್ನೆಲ್ಲಾ ಸಂಗ್ರಹಿಸಿ ಬರೆಯಬೇಕು. ತಪ್ಪು ತಪ್ಪಾಗಿ ಹನ್ನೆರಡು ಪುಟಗಳವರೆಗೆ ಮನಸ್ಸು ಬಂದಂತೆ ಗೀಚುವುದಕ್ಕಿಂತ ಎರಡು ಮೂರು ಪುಟಗಳಲ್ಲಿಯೇ ಹೇಳಬೇಕಾದುದನ್ನೆಲ್ಲ ಗರ್ಭಿಕರಿಸಿ ತಪ್ಪಿಲ್ಲ. ದೆಯೂ ವಿಶದವಾಗಿಯೂ ಬರೆವುದು ಲೇಸು. (6) ಶಬ್ದ ಸೌಷ್ಟವ, ಲಾಲಿತ್ಯ, ವಾಕ್ಯ, ವಾಕ್ಯವೃಂದ ಇವುಗಳ ವಿಧಿಗಳನ್ನೆಲ್ಲ ನೆನಪಿನಲ್ಲಿಟ್ಟು ಅನುಸರಿಸಬೇಕು, (7) ಲೇಖನ ಚಿಹ್ನೆಗಳನ್ನು ಪಯೋಗಿಸಬೇಕು. (8) ಇಸವಿ, ದೊಡ್ಡ ಸಂಖ್ಯೆ, ಇವುಗಳನ್ನು ಬಿಟ್ಟು, ಬೇರೆ ಯಾವ ಸಂಖ್ಯೆಯನ್ನಾಗಲಿ ಅಕ್ಷಗದಲ್ಲಿ ಬರೆಯಬೇಕು.