ಪುಟ:ಪ್ರಬಂಧಮಂಜರಿ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಗದಗಳ ಬರವಣಿಗೆ ೧SH ಕಾಗದಗಳ ಬರವಣಿಗೆ, 1. ಕ್ಷೇಮಸಮಾಚಾರವೇ ಮೊದಲಾದ ವಿಷಯಗಳನ್ನು ಗ್ರಾಮಾಂತರದಲ್ಲಿರುವ ಬಂಧುಮಿತ್ರರಿಗೆ ತಿಳಿಯಪಡಿಸುವುದಕ್ಕೆ ನಾಗರಿಕ ದೇಶದ ಜನರು ಕಾಗದಗಳನ್ನು ಬರೆಯುವರು. ಕಾಗದಗಳನ್ನು ಬರೆಯುವುದು ಎಲ್ಲರಿಗೂ ಬರಬೇಕು. ವಾಕ್ಯ ರಚನೆಯ ವಿಷಯದಲ್ಲಿ ಹಿಂದೆ ವಿವರಿಸಿರುವ ವಿಧಿಗಳನ್ನೆ ಕಾಗದ ಬರೆವಾಗಲೂ ಅನುಸರಿಸಬೇಕು. ಆದರೆ ಕಾಗದವನ್ನು ಬರೆಯತಕ್ಕ ಕ್ರಮ ಒಂದೊಂದು ಭಾಷೆಯಲ್ಲಿ ಒಂದೊಂದು ಬಗೆಯಾಗಿದೆ ಕನ್ನಡದಲ್ಲಿ ಬಹುಕಾಲದಿಂದಲೂ ವಾಡಿಕೆಯಲ್ಲಿರುವ ಕ್ರಮವನ್ನು ಇಲ್ಲಿ ಸಂಕ್ಷೇಪವಾಗಿ ವಿವರಿಸಿದೆ. 2 ಪ್ರಬಂಧದಲ್ಲಿ ಹೇಗೋ ಹಾಗೆ ಕಾಗದದಲ್ಲೂ ಆದಿ, ಮಧ್ಯ, ಅಂತ ಎಂಬಮೂರು ಮುಖ್ಯ ಭಾಗಗಳುಂಟು. ಆದ್ಯಂತಗಳು ಕಾಗದದ ಕಠಿನಭಾಗಗಳು, ಇವುಗಳಲ್ಲಿ ಕಾಗದವನು ಯಾರಿಗೆ ಬರೆಯಬೇಕೋ ಅವರಿಗೂ ಅದನ್ನು ಬರೆಯುವವರಿಗೂ ಇರುವ ಬಂಧುತ್ವ, ಸ್ನೇಹ, ಬಳಕೆ ಮೊದಲಾದುವುಗಳಿಗೆ ತಕ್ಕಂತಮರ್ಯಾದೆಯನ್ನು ತೋರಿಸುವ ಕೆಲವು ಮಾತುಗಳನ್ನು (ಒಕ್ಕಣೆ) ಬರೆಯುವರು. ಕಾಗದದ ಪ್ರಾರಂಭದಲ್ಲಿ ಈ ಒಕ್ಕಣೆ ಅತಿದೀರ್ಘವಾಗಿ ಬರೆಯುವುದು ಪೂರ್ವ ಪದ್ಧತಿಯಾಗಿದ್ದಿತು. ಈಚೆಗೆ ಇಂಗ್ಲಿಷ್ ಭಾಷೆಯ ಸಂಪ್ರದಾಯವನ್ನನುಸರಿಸಿ ಈಒಕ್ಕಣೆ ಬಲುಮಟ್ಟಿಗೆ ಸಂಕುಚಿತವಾಗಿದೆ. ಈ ಆದಿಭಾಗವು ಕಾಗದವನ್ನು ಯಾರಿಗೆ ಬರೆದಿದೆಯೋ ಅವರ ಮತ್ತು ಬರೆಯುವವರ ಹೆಸರುಗಳು, ಬರೆಯುವ ಸ್ಥಳ ದಿನ ಇವುಗಳನ್ನು ಒಳಗೊ೦ಡಿರುತ್ತದೆ, ಬರೆಯುವ ಸ್ಥಳ, ದಿನಗಳನ್ನು ಕಾಗದದ ಕೊನೆಯಲ್ಲಿ ಎಡಗಡೆ ಸೂಚಿಸುವುದೂ ಉಂಟು, 3, ಬಂಧುಗಳಲ್ಲಿ:-ಹಿರಿಯವರಿಗೆ ಗಂಡಸರಾಗಿದ್ದರೆ, ತೀರ್ಥರೂಪರೆಂ- ತಲೂ, ಹೆಂಗಸರಾಗಿದ್ದರೆ ಮಾತೃಶ್ರೀ' ಎಂತಲೂ, ಕಿರಿಯವರಿಗೆಲ್ಲಾ ««ಚಿರಾಯು' ಅಥವಾ ಚಿರಂಜೀವಿ ಎಂದೂ ಹೆಸರುಗಳ ಹಿಂದೆ ಬರೆಯಬೇಕು. ಕೆಲವರು ತೀರ್ಥರೂಪ ತಂದೆಯವರಿಗೆ ಎಂದು ಬರೆಯುತ್ತಾರೆ. ಅದು ತಪ್ಪು. ಸುಮ್ಮನೆ ««ತೀರ್ಥರೂ ಪರವರಿಗೆ ಎಂದರೆ ಸಾಕು. . ದೊಡ್ಡವರಿಗೆಲ್ಲಾ ಸನ್ನಿಧಾನಕ್ಕೆ ಅಥವಾ ಸಮಕ್ಷಮಕ್ಕೆ' ಎಂಬು