ಪುಟ:ಪ್ರಬಂಧಮಂಜರಿ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇಶಾಟನೆ. ೧೩೭ ಕೊಳ್ಳುವುದು ತುಂಬಾ ಆವಶ್ಯಕ. ಎಚ್ಚರಿಕೆಯಿಂದ ಹೀಗೆ ಆರಿಸಿಕೊಂಡು ಓದಿದಹೊರತು ಪುಸ್ತಕಗಳಿಂದಾಗುವ ಪ್ರಯೋಜನಗಳೆಲ್ಲ ಆಗಲಾರವು. 46. ದೇಶಾಟನೆ. ಸಲುಗಳಲ್ಲಿಯೂ ಕಾಲೇಜುಗಳಲ್ಲಿಯೂ ಗೊತ್ತು ಮಾಡಿರುವವು ಕಗಳ ಅರ್ಥವನ್ನು ಕಲಿತುಪರೀಕ್ಷೆಗಳಲ್ಲಿ ತೇರ್ಗಡೆಯನ್ನು ಪಡೆವುದೇ ವಿದ್ಯಾಬ್ಯಾ ಸವೆಂದು ಅನೇಕರು ತಿಳಿದಿರುವರು. ಸ್ವಲ್ಪ ಯೋಚಿಸಿ ನೋಡಿದರೆ, ಇದು ತಪ್ಪು ತಿಳಿವಳಿಕೆಯೆಂದು ವ್ಯಕ್ತವಾಗುವುದು. ಹೀಗೆ ಸ್ಕೂಲುಗಳಲ್ಲಿ ಓದಿ ಪರೀಕ್ಷೆ ಮಾಡದೆಯೇ ಅನೇಕರು ಘನಪಂಡಿತರಾಗಿರುವರಲ್ಲದೆ ಅನೇಕ ಪರೀಕ್ಷೆಗಳನ್ನು ಕೊಟ್ಟಿರುವರಿಗಿಂತ ಲೌಕಿಕಜ್ಞಾನದಲ್ಲಿಯೂ, ಬುದ್ದಿಯಲ್ಲಿಯೂ ಉತ್ತಮರಾಗಿದ್ದಾರೆ. ನಾವು ಸ್ಕೂಲುಗಳಲ್ಲಿಯೂ ಕಾಲೇಜುಗಳಲ್ಲಿಯೂ ಕಲಿವುದು ಸ್ವಲ್ಪ. ಇವುಗಳಲ್ಲೊದಿದ ಮೇಲೆ, ದೇಶಸಂಚಾರ ಮಾಡಿ ನಮ್ಮ ವಿದ್ಯಾಭ್ಯಾಸವನ್ನು ಮುಗಿಸಿಕೊಳ್ಳಬೇಕು. ಯೂರೋಪಿನಲ್ಲಿ ಸ್ಕೂಲು ಕಾಲೇಜುಗಳಲ್ಲಿ ಮಾಡಿದ ವಿದ್ಯಾಭ್ಯಾಸವನ್ನು ದೇಶಸಂಚಾರ ಮಾಡಿದಹೊ ರತು ಮುಗಿದಂತೆ ಭಾವಿಸುವುದಿಲ್ಲ. ಇಂಗ್ಲೆಂಡಿನಲ್ಲಿ ಪರೀಕ್ಷೆಗಳನ್ನು ಕೊಟ್ಟ - ಮೇಲೆ ಯೂರೋಪಿನಲ್ಲೆಲ್ಲಾ ಸಂಚಾರಮಾಡಿಕೊಂಡು ಬರುವ ವಾಡಿಕೆಯಿದೆ. ನಮ್ಮಲ್ಲಿಯೂ ಪೂರ್ವದಲ್ಲಿ ಬ್ರಹ್ಮಚಾರಿಗಳು ವಿದ್ಯಾಭ್ಯಾಸವಾದಮೇಲೆ ದೇಶಯಾತ್ರೆ ಮಾಡುತ್ತಿದ್ದರೆಂದು ಈಗಿನ ವಿವಾಹಕಾಲದ ಕಾಶೀ ಜಾತ್ರೆಯ ಕ್ರಮದಿಂದ ಊಹಿಸಬಹುದು. ವಿದ್ಯಾರ್ಥಿಗಳ ತಿಳಿವಳಿಕೆಯು ಹಲವು ಬಗೆಗಳಲ್ಲಿ ಹೆಚ್ಚುವುದಕ್ಕೆ ದೇಶಾಟನೆಯು ಕಾರಣವಾಗಿದೆ ದೇಶಾಟನೆಯೆಂದು ನಾಯಿಯಂತೆ ಓಡಿ ಹೋಗಿ ಪರದೇಶಗಳಲ್ಲಿ ಸುಮ್ಮನೆ ಅಲೆದುಕೊಂಡುಬರುವುದರಿಂದ ಜ್ಞಾನವು ಹೆಚ್ಚು ವುದಿಲ್ಲ. ಜ್ಞಾನಾಭಿವೃದ್ಧಿ. ಯಾಗಬೇಕಾದರೆ, ಇತರ ದೆ ಪ್ರದರ್ಶನಶಾಲೆ ಪುಸ್ತಕಭಂಡಾರ, ಇವೇ ಮುಂತಾದ ಪ್ರಸಿದ್ದ ವಸ್ತುಗಳನ್ನೆಲ್ಲ ನಮ್ಮ ಕಣ್ಣಾರ ಚೆನ್ನಾಗಿ ಪರೀಕ್ಷಿಸಿ ನೋಡಬೇಕು, ಅಲ್ಲಿಯ ಜನರ ನಡೆನುಡಿಗಳು, ವಿದ್ಯೆ, ಕಲಾಕೌಶಲ, ಮುಂತಾದುವನ್ನು ಪರಿಶೀಲಿಸಿಕೊಳ್ಳಬೇಕು. ಇದರಿಂದ ನಮ್ಮ ಬುದ್ದಿಯು ವಿಕಾಸವನ್ನು ಹೊಂದುವುದು. ಪ್ರತಿಯೊಂದು ದೇಶದ ಜನರೂ ಅವರವರದಾರಿಯಲ್ಲಿಯೇ ಹೋಗುತ್ತಾರೆ, ಅವರ ಸುತ್ತ