ಪುಟ:ಪ್ರಬಂಧಮಂಜರಿ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ತ್ರೀವಿದ್ಯಾಭ್ಯಾಸ, ೧೫೩ ಎಲ್ಲಾ ಹೆಂಗಸರಿಗೂ ವಿದ್ಯೆ ಕಲಿಸಿದರೆಗರ್ವಕ್ಕೆ ಅವಕಾಶವೇ ಇರುವುದಿಲ್ಲ. ಇನ್ನು ಕೆಲವರು ಹೆಂಗಸರಿಗೆ ವಿದ್ಯೆ ಕಲಿಸುವುದರಿಂದ, ಸಂಸಾರದ ಕೆಲಸಗಳು ಸರಿಯಾಗಿನಡೆಯದೆಸಂಸಾರಕ್ಕೆ ಕುಂದು ಬರುವುದು” ಎಂದು ಹೇಳುವರು; ಇದುಸರಿಯಲ್ಲ. ವಿದ್ಯಾವತಿಯರಿರುವ ರಾಜ್ಯಗಳಲ್ಲಿ ಅವರು ಮಾಡಬೇಕಾದ ಕೆಲಸಗಳಿಗೆ ವಿದ್ಯೆ ಎಂದಿಗೂ ಕುಂದನ್ನು ತಂದಿಲ್ಲ; ಅವುಗಳನ್ನು ಚೆನ್ನಾಗಿ ಮಾಡುವಂತೆ ಬುದ್ದಿ ಕುಶಲತೆಯನ್ನು ಂಟುಮಾಡಿದೆ. ಮತ್ತೆ ಕೆಲವರು ಸ್ತ್ರೀಯರಿಗೆ ವಿದ್ಯೆಯನ್ನು ಹೇಳಿ ಕೊಡುವುದರಿಂದ ಅವರು ಪುರುಷರಿಗೆಮರ್ಯಾದೆ ತೋರಿಸದೆ, ಇದಿರುಬಿದ್ದು ಅವರನ್ನು ಲಕ್ಷ್ಯಮಾಡುವದಿಲ್ಲ. ದುರ್ವಾಸಾ ರಗಳಿ ಗುಪಕ್ರಮಿಸಿ,ತಮ್ಮ ಶೀಲವನ್ನೇ ಹಾಳುಮಾಡಿಕೊಳ್ಳುವರು ಎಂದು ಆಕ್ಷೇಪಿಸುವುದುಂಟು. ಸದ್ವಿದ್ಯೆಯ ಫಲಗಳು ಸತ್ಯ, ಹಿರಿಯರಲ್ಲಿ ಭಕ್ತಿ, ಪತಿಯಲ್ಲಿ ಪ್ರೀತಿ ಮುಂತಾದ ಸುಗುಣಗಳು ಆದಾವೇಹೊರತು,ದುರ್ವಾಪಾರಕ್ಕೆ ಪ್ರವರ್ತಿಸುವ ಬುದ್ದಿ, ಪತಿಯಲ್ಲಿ ಅಸಹನ, ಅಕ್ಷತೆ, ಅವಿಧೇ - ಯತೆ ಮೊದಲಾದ ದುರ್ಗುಣಗಳಾಗಲಾರವು. ವಿದ್ಯೆ ಕಲಿಯಲಿ, ಕಲಿಯದಿರಲಿ ದುಷ್ಟು ಲಪ್ರಸೂತೆಯರು ದುರ್ಮಾರ್ಗದಲ್ಲಿ ನಡೆವುದು ಸಹಜ. ಇವರ ದುರ್ಗುಣಕ್ಕೆ ವಿದ್ಯೆಯೇ ಕಾರಣವೆನ್ನುವುದು ಶುದ್ಧ ಮೌಡ್ಯ, ದುಶೀಲವನ್ನು ನೋಡಿ ವಿದ್ಯಾಭ್ಯಾಸವನ್ನೇ ನಿರಾಕರಿಸಬಹುದೆ? ಕಳ್ಳರುಓಡಿ ಹೋಗುವುದಕ್ಕೆ ಆಸ್ಪದವಾಗುತ್ತದೆಯೆಂದು ಹೊಗೆ ಗಾಡಿಯೇ ಇರಕೂಡದೆನ್ನ ಬಹುದೆ?ಕೆಟ್ಟ ಪುಸ್ತಕಗಳುಅಚ್ಚಾದಾವೆಂದುಮುದಾ ಯಂತ್ರವನ್ನೇ ತಪ್ಪಿಸಬಹುದೆ?ಎಂದಿ ಗೂ ಇಲ್ಲ. ಸ್ತ್ರೀಯರಿಗೆ ವಿದ್ಯಾಭ್ಯಾಸದಿಂದ ಜ್ಞಾನೋದಯವಾಗದಿದ್ದರೆ, ಅವರಿಗೂ ಪಶುಗಳಿಗೂ ಏನೇನೂ ತಾರತಮ್ಯವಿರುವುದಿಲ್ಲ. ವಿದ್ಯೆಯಿಲ್ಲದ ಹೆಂಗಸರು ತಾಯಿಯರೂ ಹೆಂಡತಿಯರೂ ಆಗಲು ಅರ್ಹರಾದಾರಇವರಿಗೆ ವಿದ್ಯೆ ಕಲಿಸದಿದ್ದರೆ ದೇಶದಲ್ಲಿರುವ ಅರ್ಧಪಾಲು ಪ್ರಜೆಗಳಿಗೆ ವಿದ್ಯೆ ಕಲಿಸದೆ ಬೇ ಕೆಂದು ಮೂಢರನ್ನಾಗಿ ಮಾಡಿದಂತಾಗುವುದು. ಪುರುಷನಿಗೆ ಹೆಚ್ಚು ವಿದ್ಯೆ ಇಲ್ಲದಿದ್ದರೂ, ಪ್ರಪಂಚದ ನಡೆವಳಿಯಲ್ಲಿ ತಲೆತಾಗಿ ಬುದ್ದಿ ಬರಬಹುದು. ಹೆಂಗಸರಿಗೆ ಬಾಲ್ಯದಲ್ಲಿಯೇ ವಿದ್ಯೆ ಕಲಿಸಿ, ಜ್ಞಾನವನ್ನೂ ಆಲೋಚನಾಶಕ್ತಿಯನ್ನೂ ಉಂಟುಮಾಡದಿದ್ದರೆ, ಅವರಿಗೆ ಮುಂದಕ್ಕೆ ಈಗುಣಗಳುಂಟಾಗುವುದು ಕಷ್ಟ. ನನ್ನ ಹೆಂಗಸರಲ್ಲಿ ಅನೇಕರಿಗೆ ಬಹಳ ವಿರಾಮವಿರುತ್ತದೆ. ಮನೆ ಗೆಲಸವಾದಮೇಲೆ, ಬಿಡುವಾದ ಕಾಲದಲ್ಲಿ ಸದ್ಯಾಸಂಗವಿಲ್ಲದಿದ್ದರೆ, ಸ್ವಭಾ