ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಶ್ರೀಮುರುನಂದ ಅಮಾಯಣ, ಕಾಗಿ ಹೇಳಿದ ಮತಗಳಿಗೆ ನೀನು ಎಂದಿಗೂ ಕೋಪಮಾಡಬೇಡ. ನನ್ನ ಪತಿ ಯಾದ ಶ್ರೀ ರಾಮನಲ್ಲಿ ಎಷ್ಟು ಸಾಮರ್ಥ್ಯವಿರುವದೆ ಅದೆಲ್ಲ ನಿನ್ನ ಪತಿಯ ಆರ್ಲಾದದ ಫಲ ಹೊರತು ಮತ್ತೆ ಬೇರೆ ಇಲ್ಲ. ಇದನ್ನು ನಾನು ಬಲ್ಲೆನು ಮತ್ತು ಜ್ಞಾನಿಗಳ ಸಾಮರ್ಥ್ಯವನ್ನು ನಾನು ಚನ್ನಾಗಿ ತಿಳಿದಿರುವೆನು ಎಂದು ಮಾತನಾಡಿ ಲೋಪಾಮುದ್ರೆಯನ್ನು ಸಂತೋಷಗೊಳಿಸಿದಳು. ಸರ್ವಕಾಲಿ ತೀರಿದ ಬಳಿಕ ಸಮಸ್ತರೂ ನಿನ ಸಂಧ್ಯಾ, ದಾನ, ಧರ್ಮಗಳನ್ನು ಮಾಡಿ, ಭಜನೆ ಮಾಡಿದರು. ಅನಂತರ ಎಲ್ಲರೂ ಪರಮ ಸಂತೋಷದಿಂದ ತಮ್ಮ ಮ್ಮ ಸ್ಥಳಗಳಿಗೆ ಪ್ರಯಾಣ ಮಾಡಿದರು. ಈ ರೀತಿ ಶ್ರೀ ರಾಮನು ಸೀತೆಯೊಡನೆ ಅನೇಕ ಸುಖಗಳನ್ನ ನುಭವಿಸುತ್ತ ಪ್ರಜೆಗಳನ್ನು ಮಕ್ಕಳಂತೆ ಕಾಪಾಡಿದನು. ವಿಳಾಸಕ ವಿಲಾಸಕಾಂಡಪ್ಪ ಮಾಸ್ತ - -