ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

8 ಕರ್ಣಾಟಕ ಕವಿಚರಿತೆ. [15 ನೆಯ ತ್ತದೆ. ನಮಗೆ ದೊರೆತ ಪ್ರತಿಯಲ್ಲಿ ಆದ್ಯಂತಗಳಲ್ಲಿ ಓಲೆಗಳು ಹೋಗಿರುವುದಲ್ಲದೆ ಮಧ್ಯದಲ್ಲಿಯೂ ಹಲವು ಕಡೆ ಓಲೆಗಳು ಶಿಥಿಲವಾಗಿಯೂ ಲುಪ್ತ ವಾಗಿಯೂ ಇರುವುದರಿಂದ ಗ್ರಂಧದ ಅನುಪೂರ್ವಿಯನ್ನಾಗಲಿ ಕವಿಯ ವಿಷಯವನ್ನಾಗಲಿ ತಿಳಿಸಲು ಸಾಧ್ಯವಿಲ್ಲದೆ ಇರ. ಇದರಲ್ಲಿ ಸೂರದತ್ತ ರಾಜನಿಗೂ ಯಶೋಭದ್ರೆಗೂ ಹುಟ್ಟಿದ ಸುಕುಮಾರನೆಂಬ ರಾಜಕುಮಾರನ ಚರಿತ್ರವು ಹೇಳಿದೆ. ಈತನು ಯಶೋಭದ್ರಾಚಾರ್ಯರ ಉಪದೇಶದಿಂದ ಪೂರ್ವಸ್ಮರಣೆಯನ್ನು ಪಡೆದು ವೈರಾಗ್ಯದಿಂದ ಅವರಲ್ಲಿಯೇ ದೀಕ್ಷೆಯನ್ನು ಹೊಂದಿ ಕೊನೆಗೆ ಮುಕ್ತಿಯನ್ನು ಪಡೆಯುತ್ತಾನೆ.

    ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ__

ಇದು ಸಮಸ್ತ ವಿನೇಯಜನವಿನಮಿತ ಶ್ರೀವರ್ದ ಮಾನಮುನೀಂದ್ರವಂದ್ಯ ಪರಮ ಜಿನೇಂದ್ರಶ್ರೀಪಾದಪದ್ಮ ವರಪ್ರಸಾದೋತ್ಪನ್ನ ಸಹಜಕವೀಶ್ವರ ಶ್ರೀಶಾಂತಿನಾಧಪ್ರಣೀ ತಮಪ್ಪ ಸುಕುಮಾರಚರಿತ್ರದೊಳ್

         ಪ್ರಥಮಸಂಪುಟದಲ್ಲಿ (ಪುಟ 364) ಹೇಳಿರುವಂತೆಯೇ ಈ ಕವಿಯ ಗುರು ವರ್ಧಮಾನಮುನಿಯೆಂದೂ ಕವಿಗೆ ಪರಮಜಿನಮತಾಂಭೋ ಜಿನೀರಾಜಹಂಸಂ, ಸರಸ್ವತೀಮುಖಮುಕುರಂ, ಸಹಜಕವೀಶ್ವರ. ಎಂಬ ಬಿರುದುಗಳು ಇದ್ದುವೆಂದೂ ಈ ಗ್ರಂಥದಿಂದಲೂ ತಿಳಿಯುತ್ತದೆ ಈ ವರ್ಧಮಾನಮುನಿ ಮೂಲಸಂಘದ ದೇಶೀಯಗಣದ ಕೊಂಡಕುಂದಾ ನ್ವಯಕ್ಕೆ ಸೇರಿದವನೆಂದು ಹೇಳಿದೆ.

ಈ ಗ್ರಂಧದಿಂದ ಕೆಲವು ಭಾಗಗಳನ್ನು ತೆಗೆದು ಬರೆಯುತ್ತೇವೆ

                              ಮುನಿ                                ಮುನಿವವರುಂ ಕೂರ್ಪವರು೦ | ಮುನಿಸುಂ ಕೂರ್ಮೆಯುಮನುಂಟುಮಾಡುವ

ಪದದೊಳ್ |

ಮುನಿಯದ ಕೂರದ ಮುನಿಸದ | ಮುನಿಪತಿ ಭಾವಿಪೊಡೆ ತಾನೆ

ಜಿನಪತಿಯಲ್ಲೇ |

               ಉದ್ಯಾನ (ಆದ್ಯಂತಪ್ರಾಸದ ರಗಳೆ)                               ಆ ನಿರುಪನುಗೃಹಬಹಿರುದ್ಯಾನಂ [ ತಾನೆಸೆದೊಪ್ಪುಗುಮಪ್ರತಿಮಾನಂ | ನಾಗಲತಾವಿಸ್ತೀರ್ಣಮದಪ್ಪುದು । ಪೂಗದುಮಸಂಕೀರ್ಣಮೆನಿಪ್ಪುದು |