ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ವಾಂತೆಸೋಮಣ್ಣ 337
ಊಟ ಕಟ್ಟೋಗರಗಳು ಕಲಸೋಗರವು ಪಾಯಸವು | ನಿಟ್ಟಿಸಲು ಗೋಮೇಧಿಕದ ಸಾರವೆಂದೆನಿಸಿ | ಬಟ್ಟ ಬಟ್ಟಲೊಳು ತುಂಬೆಸೆವ ಸದ್ಯೋಘೃತವು ಹೆರೆದುಪ್ಪವಕ್ಕಿದುಪ್ಪ || ಮುಟ್ಟಿ ಬೊಟ್ಟಿಡುವಂತೆ ಕಾಸಿರ್ದ ಚಿನಿಪಾಲು | ತೊಟ್ಟಿನೊಳೆ ಪಸುರಡಗದಿರ್ದ ಉಪ್ಪಿನಕಾಯಿ | ಕಟ್ಟಳೆಯ ಲವಣಾಮ್ಲದಿಂದಾದ ಶಾಕ ಮುಂತಾದ ಊಟವ ತಂದರು || ಡೊಂಬರು ಗಣೆಯ ತುದಿಯಲ್ಲಿ ಶಸ್ತ್ರವನಿಟ್ಟುವುಂಗುಟದ | ಕೊನೆಯೂಳು ಪುಟವೆದ್ದು ಲಾಗುಲವಣೆಯ ಕೊಂಡು | ಮಿಣಿಯ ಹುರಿಗಳಮೇಲೆ ಮರಗಾಲ ಕಟ್ಟಿ ದುವ್ಯಾಳಿಸುತ ಡೊಂಬಿತಿಯರು || ಮಣಿದು ಹಿಂಗರಣಮನೆ ಕೊಂಡುವೊಳೈಯುಗಿದಲಗ | ಪಣೆಯಲ್ಲಿ ಗುಂಜೆಯಗ್ರದೊಳಟ್ಟು ಖೋಯೆನುತೆ | ತ್ರಿಣಯನಾಪರರೂಪನೆ ನೋಡು ನೋಡೆಂದು ಡೋಳ ಬಡಿದರು ಡೊಂಬರು || - - - ವಾರತಸೋಮಣ್ಣ ಸು, 1600 ಈತನು ಪಂಚೀಕರಣದ ಪದಗಳನ್ನು ಬರೆದಿದ್ದಾನೆ. ಇವನು ವೀರ ಶೈವಕವಿ. ಒಂದು ಹಾಡಿನ ಕೊನೆಯಲ್ಲಿರುವ “ಲೋಕದೊಳಧಿಕ ಭಾಗು ಳಿಯ ಸೋಮಶೇಖರಭೂಪನ ಭಕ್ತಿಯ ಸವಿಯ। ಸ್ವೀಕರಿಸಿ ಕೆಂಪುಗಂಬಳಿ ಯ ಪಿನಾಕಿ ಬಸವಲಿಂಗನೆಸಗಿದ ಪರಿಯ ನೋಡನೋಡಲು ಬಯಲಾಯ್ತು" ಎಂಬ ನುಡಿಯಲ್ಲಿ ಭಾಗುಳಿಯ ಸೋಮಶೇಖರಭೂಪ, ಕೆಂಪುಗಂಬಳಿಯ ಬಸವಲಿಂಗ ಇವರುಗಳ ಹೆಸರುಗಳು ಹೇಳಿವೆ. ಇವರು ಕವಿಯ ಸಮ ಕಾಲದವರಾಗಿರಬಹುದೋ ಏನೋ ತಿಳಿಯದು, ಕವಿಯ ಕಾಲವು ಸು ಮಾರು 1600 ಆಗಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ ಪಂಚೀಕರಣದ ಪದಗಳು ಇವ ಕೆಲವು ಪಟ್ಟದಿಗಳನ್ನೂ ಹಾಡುಗಳನ್ನೂ ಒಳಕೊಂಡಿವೆ; ಪಂ 43