ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

244 ಕರ್ಣಾಟಕ ಕವಿಚರಿತೆ. [16 ನೆಯ ಮೇಲೆ ಅವನ ತಮ್ಮ ಚಿಕ್ಕ ಭೈರವರಾಯನು ಆಳಿದನು. ಇವನ ಚಿಕ್ಕಮ್ಮನಾದ ಶಂಕರಾಂಬಿಕೆಗೂ ಚಂದ್ರವಂಶದ ಬೈಯನೃಪನಿಗೂ ಮಲಿದೇವಿ ಎಂಬ ಮಗಳೂ ವಸು ದಾನಮೇರು ಎಂಬ ಮಗನೂ ಹುಟ್ಟಿದರು. ವಸುದಾನಮೇರು ಸಾಳ್ವಮಲ್ಲ ಎಂಬ ಹೆಸರಿನಿಂದ ಆಳಿದನು. ಇವನಿಗೆ ಕವಿಸರೋವರರಾಜಹಂಸ, ಜಿನಧರ್ಮಧ್ವಜ, ತ್ರಿಭು ವನಕರಾರಿತ್ರಿಣಯನ, ಸಂಯಕ್ತ್ವಚೂಡಾಮಣಿ, ಜಿನದೇವರಧಯಾತ್ರಾಪ್ರಭಾವಕ ಎಂಬ ಬಿರುದುಗಳಿದ್ದುವು. ಇವನೇ ಕವಿಸಾಳ್ವನ ಪೋಷಕನು. ಇವನಲ್ಲಿ ಸಾಳ್ವನು ಪಟ್ಟದ ಕವಿಯಾಗಿದ್ದನು. ಸಾಳ್ವಮಲ್ಲನ ಸಹೊದರಿಯಾದ ಮಲಿದೇವಿಗೂ ಮುಕ್ಕಣ್ಣ ಕಾದಂಬಕನೆಂಬ ಬಿರುದುಳ್ಳ ಶಾಂತದಂಡಾಧೀಶನಿಗೂ ಹುಟ್ಟಿದ ಸಾಳ್ವದೇವನು ಬಳಿಕ ಪಟ್ಟಕ್ಕೆ ಬಂದನು. ಸಾಳ್ವ ಮಲ್ಲ, ಸಾಳ್ವದೇವ ಇವರಿಬ್ಬರ ಇಷ್ಟಾನುಸಾರ ವಾಗಿಯೂ ಕವಿ ಭಾರತವನ್ನು ಭಾಮಿನೀಷಟ್ಟದಿಯಲ್ಲಿ ಬರೆದನು.

  ಸುಮಾರು 1560 ರಲ್ಲಿ ಹುಟ್ಟಿದ ಸಾಗರದ 55ನೆಯ ಶಾಸನದಲ್ಲಿ ಮೇಲೆ ಹೇಳಿದ ದೊರೆಗಳ ವಿಷಯವು ಹೇಳಿದೆ. ಆದುದರಿಂದ ಕವಿಯ ಕಾಲವು 16ನೆಯ ಶತಮಾನದ ಮಧ್ಯಭಾಗವಾಗಿರಬಹುದೆಂದು ತೋರುತ್ತದೆ.!
  ಇವನಿಗೆ ಸಾಜಕವಿ, ಕರ್ಣಾಟಲಕ್ಷಣದೋಜ ಎಂಬ ಬಿರುದುಗಳು ಇದ್ದಂತೆ ತೋರುತ್ತದೆ. ಪೂರ್ವಕವಿಗಳಲ್ಲಿ ರುದ್ರಭಟ್ಟ, ನಾಗವರ್ಮ, ಕವಿಕಾಮ ಇವರುಗಳನ್ನು ಸ್ಮರಿಸಿದ್ದಾನೆ.
  ಇವನ ಗ್ರಂಥಗಳಲ್ಲಿ 

1 ಭಾರತ ಇದು ಸಾಳ್ವಭಾರತ ಎಂದು ಪ್ರಸಿದ್ಧವಾಗಿದೆ; ಭಾಮಿನೀಷಟ್ರದಿಯಲ್ಲಿ ಬರೆದಿದೆ; ಪರ್ವಗಳು 16 2, ಈ ಗ್ರಂಥಕ್ಕೆ ನೇಮಿಾಶ್ವರಚರಿತೆ

  1. ಮೈಸೂರು ಶಾಸನದ ಇಲಾಖೆಯ 1916 ನೆಯ ವಷ೯ದ ರಿಪೋರ್ಟಿನ 69 ನೆಯ ಪುಟದಲ್ಲಿ 1522ರಲ್ಲಿ ಇದ್ದ ಒಬ್ಬ ತೌಳವದೇಶದ ದೇವರಾಯನ ಹೆಸರು ಹೇಳಿದೆ.
  2. (1) ಆದಿಪರ್ವ, (2) ಅನ್ವಯಪರ್ವ, (3) ವಸುದೇವಪರ್ವ, (4) ಕೃ ಷ್ಣೋದಯಪರ್ವ, (5) ಕಂಸಮರ್ದನಪರ್ದ, (6) ಅಭ್ಯುದಯಪರ್ವ, ಈ ಪರ್ವವು ಉದ್ದಂಡಷಟ್ಟದಿಯಲ್ಲಿ ಬರೆದಿದೆ, (7) ಪ್ರದ್ಯುಮ್ನ ಪರ್ವ (8) ಇಂದ್ರಪರ್ವ, (9) ಕಲ್ಯಾಣಪರ್ವ, (10) ಅರಣ್ಯ ಪರ್ವ, (11) ಉದ್ಯೋಗಪರ್ವ, (12) ಯುದ್ದ ಪರ್ವ, (13) ಚಕ್ರಪರ್ವ, (14) ದೀಕ್ಷಾ ಪರ್ವ (15) ಸಭಾಪರ್ವ, (16) ನಿರ್ವಾಣಪರ್ವ.