ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

406 ಕರ್ಣಾಟಕ ಕವಿಚರಿತೆ, [17 ನೆಯ ಹರನಾಗ ಪ್ರಭುವ ಕರೆದೀಮರ್ತ್ಯ ಲೋಕದಿ | ಕರವೂರ ಸುಜ್ಞಾನಿನಿರಹಂಕಾರರು ನಿನ್ನ | ಚರಣಕಮಲಗಳನು ಹಾರಿಕೊಂಡಿರ್ಪರು | ನಿರುತದಿಂದವರ್ಗೆ ಪ್ರಸನ್ನನಾಗುತೆ ನೀನು | ದೊರೆಪಟ್ಟಗಳನಾಳಿ ಮುಕ್ತಿ ಮಾರ್ಗವ ಪೇಮಿ | ಶರಣಜಾಲವ ಕೂಡಿ ಮಾಯೆಯನೀಡಾಡಿ |ಪರಮಪಾವನರೂಪಗೊಗ್ಗಯ್ಯನೆಂದೆಂಬ | ಶರಣನು ಕುಸುಮ? ಸೂಪವನು ರಕ್ಷಿಪನಲ್ಲಿ | ಗಿರದೆ ನೀಪೋಗಿಯನುಮಿಷನ ಲಿಂಗಾಂಗವ | ಬೆರಸಿ ನಿನ್ನೊಳಗಿಂಬಿಡುತ್ತೆ ಯಜಗಣ್ಣಗೆ | ಹರಭಕೆ ಮುಕ್ತಾಯಮ್ಮಗೆ ಮೋಕ್ಷವನು ಕೊಟ್ಟು | ಗುರುಸಿದ್ಧ ರಾಮಗೆ ನಿಜವಿತ್ತು ಕಲ್ಯಾಣ j ಪುರದ ಬಸವಾದಿಗಳ ಗಣವ ಕಾಣುತೆ ಬೇಗ | ಗುರುಚೆನ್ನ ಬಸವೇಶನಿಂದಮುಪದೇಶವ | ಸ್ಥಿರವಾಗಿ ಕೊಡಿಸಿ ಬೊಂತಲದೇವಿ ಯಕ್ಕಗೆ |

ಮರುಳುಶಂಕರದೇವರಿವರನುಸಲಹಿ ಹಿಮ| ಗಿರಿಯ ನೋಡುತ್ತ ಶ್ರೀಶೈಲ ಕೈ ಪೋಗಿ ನಿ|ನ್ನಿರವನು ಗೋರಕ್ಷೆಗಹುಸಿ ವನಿತತಿಯ | ಸಬರನ ಸಲಹುತೆ ಬೇಗ | ಕಲ್ಯಾಣಕೆ ಹರುಷದಿಂದಲಿ ನೀ ಪೋಗ | ಲೀಕ್ಷಿಸುತೆಯವರ ಬಸವೇಶನಾಗ |ಳಿದಿವ೯೦ದು ಕರಗಳ ಮುಗಿಯೆ ಪೂಗ | ಳಂತಿಹ ಶೂನ್ಯ ಹರಿಪೀರವೆಸೆಯೆ ರಾಗ | ವೆರಸಿ ನೀನ ಗುರುವಾಗಿ ಮೂರ್ತಿಗೊಳ್ಳೆನಲೊಪ್ಪಿದ ವಿರಾಗ ||
                                 ----------

ರುದ್ರ ಸು, 1650


           ಈತನು ಕರಸ್ಥಲದ ನಾಗಯ್ಯನ ಚರಿತೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ, ಕಧಾನಾಂಕನ ಕಾಲವು ಸುಮಾರು 14 '0 ಆದುದರಿಂದ ಕವಿ ಆ ಕಾಲಕ್ಕೆ ಈಚೆ ಇದ್ದಿರಬೇಕು, ಶ್ರೀರಂಗಪಟ್ಟಣವನ್ನು ವರ್ಣಿಸಿರುವುದರಿಂದ ಆ ಸ್ಥಳದವನಾಗಿದ್ದರೂ ಇರಬಹುದು, ನಮಗೆ ದೊರತ ಈ ಗ್ರಂಥದ ಪ್ರತಿ 1749 ರಲ್ಲಿ ಬರೆದುದಾದುದರಿಂದ ಕವಿ ಈ ಕಾಲಕ್ಕೆ ಹಿಂದೆ ಇದ್ದಿರಬೇಕು; ಸುಮಾರು 1650 ರಲ್ಲಿ ಇದ್ದಿರಬಹುದೆಂದು ತೋರುತ್ತದೆ.ಪೂರ್ವಕವಿಗಳಲ್ಲಿ ಬಾಣ, ಹರಿದೇವ, ರಾಘವಾಂಕ, ಕಾಳಿದಾಸ, ಶಂಕರ ಇವರುಗಳನ್ನು ಸ್ಮರಿಸಿದಾನೆ.
     ಇವನ ಗ್ರಂಥ
                         ಕರಸ್ಥಲದ ನಾಗಯ್ಯನಚರಿತೆ ಇದು ಸಾಂಗತ್ಯದಲ್ಲಿ ಬರೆದಿದೆ; ಅಲ್ಲಲ್ಲಿ ಕೆಲವು ಪಟ್ಟದಿಗಳೂ ಇವೆ; ಸಂಧಿ 11, ಪದ್ಯ 952. ಇದರಲ್ಲಿ ಕರಸ್ಥಲದ ನಾಗಿದೇವನ ಚರಿತವು 

1, 69 ನೆಯ ಪುಟವನ್ನು ನೋಡಿ,