ತಮಾನ] ಗುರುಲಿಂಗವಿಭು. ೨68 ಕವಿ. " ಕವಿರಾಯ ” ಎಂದೂ "ಆಶುಮಧುರಂಚಿತ್ರವಿಸ್ತಾರವೆಂದೆಂಬ ನಾಲ್ಕು ಬಗೆಯ ವಿರಚಿಸಲುಬಲ್ಲ ವಸ್ತುಕಕವೀಂದ್ರರ ವರ್ಣಕಕವೀಶ್ವರರ ಕರ್ಣಾಭರಣ” ಎಂದೂ ಹೇಳಿಕೊಂಡಿರುವುದರಿಂದ ಈತನು ಪ್ರಸಿದ್ಧ ಕವಿಯಾಗಿದ್ದಿರಬೇಕು, ಇವನು ಸುಮಾರು 1550 ರಲ್ಲಿ ಇದ್ದಿರಬಹು ದೆಂದು ತೋರುತ್ತದೆ.! ಇವನ ಗ್ರಂಥ ಭಿಕ್ಷಾಟನಚರಿತೆ ಇದು ವಾರ್ಧಕಪಟ್ಟದಿಯಲ್ಲಿ ಬರೆದಿದೆ ; ಸಂಧಿ 3, ಪದ್ಯ 155. ಶಿವನು ದ್ವಾರಾವತಿಗೆ ಹೋಗಿ ಭಿಕ್ಷಾಟನವನ್ನು ಮಾಡಿ ಭಿಕ್ಷಾಪಾತ್ರೆಯಾದ ಅಜಕಪಾಲವನ್ನು ತುಂಬುವಂತೆ ಕೃಷ್ಣನಿಗೆ ಹೇಳಲು ಆತನು ತನ್ನ ತಲೆಯ ರಕ್ತದಿಂದ ಅದನ್ನು ತುಂಬಲಾರದೆ ಭಾರತಯುದ್ದ ವನ್ನುಂಟುಮಾಡಿ ಅಲ್ಲಿಯ ರಕ್ತಪ್ರವಾಹದಿಂದ ತುಂಬಿದನು--ಎಂಬುದೇ ಇದರ ಕಧಾಗರ್ಭ. ಈ ಕಥೆ ಹಿಂದೆ ಸೂತನು ನೈಮಿತಾರಣ್ಯದಲ್ಲಿ ಸನಕಾದಿಮುನಿಗಳಿಗೆ ಹೇಳಿ ದುದು ಎಂದು ಕವಿ ಹೇಳುತ್ತಾನೆ. ಈ ಗ್ರಂಥದ ಉತ್ಕೃಷ್ಟತೆಯನ್ನು ಹೀಗೆ ಹೇಳಿದ್ದಾನೆ... ಎಸೆದಿಹ ಸುರೇಖೆಯಿಂದಂ ಭಾವದಿಂ ರೂಪಿ | ನೆಸಕದಿಂ ಕಂಗೊಳಿಪ ಪೊಸದೇಸಿಯಿಂದೆ ರಂ | ಜಿಸುವಲಂಕಾರದಿಂ ಲಕ್ಷಣೋಚಿತವಾದ ಸುಶಿರದಿಂ ಶುದ್ಧಾಂಗದಿಂ | ರಸರಚನವಿಭ್ರಮವಿಲಾಸದಿಂದಂ ಕೇಳ್ವ | ರಸಿಕರ ಹೃದಯವೆಂಬ ರಂಗಮಧ್ಯದೊಳು ನ| ರ್ತಿಸುವ ನಚ್ಚಣಿಯಂತೆ ಶಿವನ ಭಿಕ್ಷಾಟನದ ಕೃತಿ ಮೋಹನವನೀವುದು ! ಈಮೋಹಕೃತಿ ರಸಿಕರಾಭರಣ ಭಾವುಕರ ಕೋವಿದರ ಮನವನೊಳಕೊಂ ಡತಿಸೊಬಗ ಬೀರುತಿಹುದು. ಹೆಸರು ಹಾಲಯ್ಯನೆರೆದುಣ್ಣುದಂಬಿಲವೆಂದುವಸಿರುವರ ಗಾದೆಯಂತಲ್ಲವೆನ್ನೀ ಕೃತಿಯ ಹೆಸರು, 1, 216 ನೆಯ ಪುಟವನ್ನು ನೋಡಿ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೪೮
ಗೋಚರ