ಶತಮಾನ] ಹರೀಶ್ವರ 351
ಶಾಸ್ತ್ರಸ್ಯ,ಅನ್ಯೇಷಾಂ ಚ ಶಬ್ದಾಗಮಯುಕ್ತಾ ಗಮಪರಮಾಗಮವಿಷಯಾಣಾಂ ತಧಾ ಕಾವ್ಯನಾಟಕಾಲಂಕಾರಕಲಾಶಾಸ್ತ್ರವಿಷಯಾಣಾಂ ಚ ಬರೂನಾಂ ಗ್ರಂಥಾನಾ ಮಪಿ ಭಾಷಾಕೃತಾನಾಂ ಉಪಲಭ್ಯಮಾನಾತ್ವಾತ್.ಅತ ಏವ ಮಹಾಜನಪರಿಗ್ರಾಹ್ಯಾ, ಏತಧದ್ಗ್ರಂಧಕರ್ತ್ರುಣಾಮೇವ ಮಹಾಜನತ್ವಾತ್.1
_______________ ಹರೀಶ್ವರ.1606 ಈತನು ಪ್ರಭುದೇವರಪುರಾಣವನ್ನು ಬರೆದಿದ್ದಾನೆ. ಇವನ ವೀರಶೈವಕವಿ, ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ.__ ಯ
ಳಂದೂರು ಸಿಂಹಾಸನಾಧೀಶ್ವರನಾದ ಹರೀಶ್ವರದೇವ; ಮಗ ಪ್ರಭುದೇವ; ಮಗ ತೋಂಟದಾಚಾರ್ಯ; ಮಗ ಕವಿ ಹರಿಶ್ವರ. ಇವನಿಗೆ ಹರಿದೇವ ಎಂಬ ಹೆಸರೂ ಉಂಟು. ಇವನ ಗುರು ಆಗಮಜ್ಞನಾದ ವೃಷಭಪುರದ ಸಿದ್ಧವೀರ. ಪೂರ್ವಕವಿಗಳಲ್ಲಿ ಗುಬ್ಬಿಯಮಲ್ಲಣ್ಣನನ್ನು ಸ್ಮರಿಸುತ್ತಾನೆ. ಈತನು ಗಣಭಾಷ್ಯರತ್ನಮಾಲಾಕರ್ತೃವೋ(ಸು.1475) ಅಥವಾ ವೀರಶೈ ವಾಮೃತಪುರಾಣಕರ್ತೃವೋ ( 1530 ) ವ್ಯಕ್ತವಾಗುವುದಿಲ್ಲ ಕವಿ ಅವರಿ ಬ್ಬರ ಕಾಲಕ್ಕೂ ಈಚೆಯವನಾಗಿರಬಹುದು. ತನ್ನ ಗ್ರಂಥವನ್ನು ವಿಶ್ವಾ ವಸು ಜ್ಯೇಷ್ಠಶುದ್ಧಪಾಡ್ಯದಲ್ಲಿ ಆರಂಭಿಸಿ ಪರಾಭವ ಜ್ಯೇಷ್ಠ ಬಹುಳ ದಶಮಿ ಯಲ್ಲಿ ಮುಗಿಸಿದಂತೆ ಹೇಳುತ್ತಾನೆ. ಈ ಪರಾಭವವು ಕ್ರಿಸ್ತಶಕ1606 ಆಗಿ ರಬಹುದೆಂದು ನಮಗೆ ತೋರುತ್ತದೆ.
ಪೂರ್ವಕವಿಗಳಲ್ಲಿ ಕೆರೆಯಪದ್ಮರಸ, ಪಾಲ್ಕುರಿಕೆಸೋಮೇಶ್ವರ, ಪಂ
ಡಿತದೇವ, ಗುಬ್ಬಿಯವಲ್ಹಣ , ಜಕ್ಕಣಾರ್ಯ, ಚಾಮರಸ,ಭೀಮ, ನೀಲಕಂ ಠಾಚಾರ್ಯ, ಉದ್ಭಣರಾಜ, ಭೋಜ, ಬಾಣ, ಮಯೂರ,ಭಲ್ಲಟ, ಭವ ಭೂತಿ, ಮಲ್ಹಣ ,ಬಿಲ್ಹಣ,ಹಂಪೆಯಹರಿದೇವ ಇವರುಗಳನ್ನು ಸ್ಮರಿಸಿದ್ದಾನೆ.
ಇವನ ಗ್ರಂಥ ಪ್ರಭುದೇವರಪುರಾಣ ಇದು ನಾನಾಷಟ್ಪದಿಗಳಲ್ಲಿ ಬರೆದಿದೆ. ಸಂಧಿ 9,ಪದ್ಯ 1479.ಇದೆ 1 ಪ್ರಧಮ ಸಂಪುಟದ ಅವತರಣಿಕೆಯನ್ನು ನೋಡಿ.