ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

176 ಕರ್ಣಾಟಕ ಕವಿಚರಿತೆ. [15 ನೆಯ

ಕಟ್ಟದೆ ಪಂಚೇಂದ್ರಿಯಮಂ | ಮುಟ್ಟದೆ ಪರತತ್ವದಲ್ಲಿ ಮನವದು ಯೋಗದ | ವಟ್ಟವನಯಿರಿದೆ ಸಗ್ಗದ | ಬಟ್ಟೆಯನೆಂತಯಿವರಣ್ಣ ಕನ್ನಡಜಾಣಾ || ಎಡರದೆ ತಡೆಯದೆ ತಲೆಯಂ | ಕೊಡಹದೆ ಕಡುವಹಿಲಜಾಡ್ಯವೆನಿಸದೆ ರಸಮಂ | ಕೆಡಿಸದೆ ಸರ್ವರ ಚಿತ್ತ | ಕ್ಕೊಡಬಡಲೋದುವನೆ ಗಮಕಿ ಕನ್ನಡಜಾಣಾ ||

                                          ಗುಣರತ್ನ 

ಗುರು ದೈವಂ ವಿದ್ಯಾರ್ಥಿಗೆ | ತರುಣಿಗೆ ಪತಿ ದೈವಮುದಲು ಮನುಜರ್ಗೆಲ್ಲಂ | ಪೊರೆವನೆ ದೈವಂ ಧರೆಯೊಳ | ಗರಸಂಗಂ ಪ್ರಜೆಯೆ ದೈವಮೆಲೆಗುಣರತ್ನಾ || ಧರ್ಮಕೆ ಕರ್ಮಕ್ಕತಿಧಿಗೆ | ಪೆರ್ಮೆಯ ಪಿತೃಗಳ್ಗೆ ದೇವಕಾರ್ಯಕ್ಕೆಂದುಂ| ನಿರ್ಮಳಸಂತತಿಗಳ್ಗಂ | ಕೂರ್ಮೆಯ ಕುಲವಧುವೆ ಮುಖ್ಯಮೆಲೆಗುಣರತ್ನಾ || ರಾಗಿಸದಿಮ್ಮೆನ್ನದೆ ನೆರೆ | ಬೇಗಂ ಕೇಳ್ದಾಗಳಲ್ಲಿ ಸುಖಿಸದೆ ತಲೆಯಂ | ತೂಗದೆ ಹಾರೈಸದ ದು |ರ್ವೇಗಿಗೆ ಪೇಳಿವರೆ ನೀತಿಯಂ ಗುಣರತ್ನಾ ||

                                         ಚೂಡಾರತ್ನ

ಓದಿನೊಳಲ್ಲದೆಯಿಹಪರ | ಸಾಧನಸಂಪತ್ತು ಮಾಗದದುಕಾರಣದಿಂ | ಓದುವುದು ಸಕಲಶ್ರುತಮಂ | ಭೇದಿಸಲಳವಪ್ಪುದಲ್ತೆ ಚೂಡಾರತ್ನಾ || ಓರಂತಿದಿರಿನ ಹೃದಯದ | ಸಾರಾಸಾರತೆಯನರಿದು ನುಡಿವಂಗಿಳೆಯೊಳ್ | ಕೂರದರಾರ್‌ ಮೆಚ್ಚದರಾ | ರಾರಾಧಿಸದಿರ್ಪರಾರೊ ಚೂಡಾರತ್ನಾ || ಸಿರಿ ತನಗೊಲ್ದಲ್ಲಿಯೆ ಕರೆ | ಕರೆದೀವುದು ಬಂಧುಜನಕಮಾಶ್ರಿತಜನಕಂ | ಕರೆದೀಯದಿರ್ದೆ ಯಾದೊಡೆ | ಸಿರಿ ಸಂತೆಯ ನೆರವಿಯಂತೆ ಚೂಡಾರತ್ನಾ || ಎಲ್ಲಿ ಸುಶೀಲಂ ಸದ್ದು ಣ | ಮೆಲ್ಲಿ ದಯಾಧರ್ಮಮೆಸೆವ ಸತ್ಯಂ ನೆಲೆಗೊಂ | ಡಲ್ಲಿಯೆ ಆಯುಂ ಸಿರಿಯುಂ | ಸಲ್ಲೀಲೆಯೊಳಿರ್ಪುವಲ್ತೆ ಚೂಡಾರತ್ನಾ || ಶರಣೆನೆ ಕಾವುದು ಬೇಡಿದೊ|ಡಿರದೀವುದು ತೊಡರೆ ಸೆಡೆಯದಿರುವುದು ಪುಸಿಯೊಳ್ | ಬೆರೆಯದೆ ನಡೆವುದು ನಡೆಯದೊ | ಡರಸಂ ಕಡಬರಸನಲ್ತೆ ಚೂಡಾರತ್ನಾ || ಓಡಿಸಿದಂ ಹರಿಯಂ ತಿರಿ | ದೂಡಿಸಿದಂ ಹರನನಜನ ತಲೆಗಳನರಿದೀ | ಡಾಡಿಸಿದನೆಂದೂಡುರುದರ | ನೋಡಾಡಿಸಿ ಕಾಡದಿಹನೆ ಚೂಡಾರತ್ನಾ || ಪೂತೊಳ್ಳಿತು ಕಾತೊಳ್ಳಿತು | ಬೀತೊಳ್ಳಿತು ಕಲ್ಪವೃಕ್ಷಮೆಲವದಮರನುಂ | ಪೂತೇವುದೊ ಕಾತೇವುದೊ | ಬೀತೇವುದೋ ಧಾತ್ರಿಯಲ್ಲಿ ಚೂಡಾರತ್ನಾ || ಮೊಗವೆಂಬ ತಂಬಟಂ ನಾ | ಲಗೆಯೆಂಬಾಕುಡುಹಿನಿಂ ದರಿದ್ರದ ಭಯದಿಂ | ಮಿಗೆ ಹುಯ್ಯಲಿಡುವ ವಂದಿಯ | ಬಗೆಯದನೇ ಪಾಪಿಯಲ್ತೆ ಚೂಡಾರತ್ನಾ ||