ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ವಿರೂಪಾಕ್ಷ ಪಂಡಿತ. 309
ತನಕಾವ್ಯಮಂ ಜಗತ್ಸೇವ್ಯಮಂ” ಎಂದು ಕವಿ ಹೇಳುತ್ತಾನೆ.ಇದರಿಂದ ಇವನ ಕಾಲಕ್ಕೆಹಿಂದೆಯೇ ಷಟ್ಸದೀರೂಪವಾದ ಗ್ರಂಥವನ್ನು ಆವನಿರ್ಬಂ ಧವೂ ಇಲ್ಲದೆ ಲಕ್ಷಣವಿರುದ್ಧವಾಗಿ ಬರೆಯುತ್ತಿದ್ದಂತೆ ತೋರುತ್ಯಗೆ, ತನ್ನ ಕಾವ್ಯದ ವಿಷಯವಾಗಿ
ಕೆಳದೇವೋದೊಡೊಂದರಿಯೆನಿನಿಸಾದೊಡಂ| ಕೇಳಿದೊಡೆ ಸಾಕವರ ಕಿವಿಯುಮಂ ಮನಮುಮಂ| ಕೋಳಹಿಡಿದೊಡನೆ ನಿರ್ಮಲನನವರಸಮಹಾದುಗ್ಧವಾರಾಶಿಯೊಳಗೆ||
ಎಂದೂ ಆಮಿಸದೆ ಬಿಡದೆನ್ನ ಕೃತಿ | ನುತಿವಡೆದ ಪದಿನೆಂಟುವರ್ಣನೆಗಳಿಂ ಸಮಾ | ಶ್ರಿತನವರಸಾದ್ಯಲಂಕಾರಂಗಳಿಂ ವಿಬುಧ | ತತಿ ಬಣ್ಣಿಸಂತುಸಿರುವೀಕಾವ್ಯಮತಿಸೇವ್ಯಮಾದುದು ||
ಎಂದೂ ಹೇಳಿದ್ದಾನೆ
ಗ್ರಂಥಾವತಾರದಲ್ಲಿ ಪಂಪಾವಿರೂಪಾಕ್ಷಸ್ತುತಿ ಇದೆ, ಬಳಿಕ ಕವಿ
ನಂದಿ ಭೃಂಗಿ ವೀರಭದ್ರ ಪಣ್ಮುಖ ಇವರುಗಳನ್ನು ಹೊಗಳಿ ಅನಂತರ ಪ್ರಭುದೇವನಿಂದ ಕಿನ್ನರಿಯಬೊಮ್ಮಯ್ಯನವರೆಗೆ ಪುರಾತನರನ್ನು ಸ್ಮರಿ ಸಿದ್ದಾನೆ.
ಈ ಗ್ರಂಥವು ಕವಿಯ ಕಾಲಕ್ಕೆ ಹಿಂದೆ ಇದ್ದ ವೀರಶೈವಪುರಾತನರ ಮತ್ತು ಕವಿಗಳ ಕಾಲವನ್ನು ನಿರ್ಣಯಿಸುವುದಕ್ಕೆ ಬಹಳಮಟ್ಟಗೆ ಉಪ
ಕಾರಕವಾಗಿದೆ ಅಲ್ಲದೆ ಚರಿತ್ರೆಗೆ ಸಬಂಧಪಟ್ಟ ಕೆಲವಂಶಗಳೂ ಇದ ರಲ್ಲಿ ಹೇಳಿವೆ:-
ಶಕ 800 ನೆಯ ವಿಳಂಬಿಯಲ್ಲಿ (878) ಹೊಯ್ಸಳನಿಗೆ ಪಟ್ಟವಾಯಿತು. ಕಮ್ಮಟದ ಕಂಪಿಲನೂ ಅವನ ಮಗ ರಾಮನಾಥನೂ ತುರುಕರೊಂದಿಗೆ ಕಾದಿ ಮಡಿ
- - - - - - - - - - - - - - - - - - -
1. ಪ್ರಭುದೇವ, ಬಸವ, ಚೆನ್ನ ಬಸವ, ಸಿದ್ದರಾಮ, ಮಹದೇವಿಯಕ್ಕ. ಮಡಿವಳಮಾಚ, ಮರಳುಶಂಕರದೇವ, ಶಂಕರದಾಸಿಮಯ್ಯ, ಸಕಳೇಶಮಾದಿ ರಾಜ, ಸಾನಂದಮುನಿ, ಕೇಶಿರಾಜ, ಮುನಿರಾಜ, ಕರಿಕಾಲಚೋಳ, ಕಾಳರಾಜ, ಕರುಳಕೇತಯ, ಕಾಚಿರಾಜ, ಕಿನ್ನರಿಯ ಬೊಮ್ಮಯ್ಯ.