ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶತಮಾನ] ಚಾಟುವಿರಲನಾಧ. 226

ಹಗೆಯೆ ನೀನೆಲೆಮಂದಮಾರುತ | ಬಗೆಗೆ ಬಹಳವ್ಯಧೆಯ ಮಾಡುವೆ | ಮಗಮಗಿಸುವಂಗದಲಿ ಮೇಣೀದೇವಕೀಸುತನ || ಸೊಗಯಿಸುವ ದಿವ್ಯಾಂಘ್ರಿಯನು ಮರೆ|ವೊಗುವ ಮನದ‌‌‌‌‌‌ಧಿ೯ಯಲಿ ಗುಹೆಯನು| ಹೊಗುವೆಯೋ ತಮ್ಮಂತೆಯೆಂದರು ಕಮಲವದನೆಯರು ||

                         ಸನ್ಯಾಸಿ

ಕಡುಗುವರಿಗಳನರುವರನು ದರಿ | ಗೆಡೆದು ಖಂಡಿಸಿ ಕಾಯಕರ್ಮದ | ದಡಿವಲೆಯನಖಿಳೇಂದ್ರಿಯಂಗಳ ಕಾಲುಕಣ್ಣಿಗಳ || ತೊಡಕುವಲೆಯನು ಹರುದು ಭವವೆಂ। ಬಡವಿಯನು ಹೊರವಂಟು ಮಾಯೆಯ | ಕಡಲ ಕಳಿದ ಮಹಾತ್ಮನೇ ಸನ್ಯಾಸಿ ಕೇಳೆಂದ ||

                         ತತ್ವಜ್ಞಾನ

ಇನನು ನಾನಾಪಾತ್ರೆಯಲಿ ಬಹು | ತನುವ ಪಡೆದಂದದಲಿ ಸಾಕ್ಷಾ ? ಚ್ಚಿನುಮಯನು ಬಹುಬುದ್ದಿ ಸಂಗದೊಳೇಕತೆಯ ಮರಸಿ || ಘನಜಗನ್ಮಯನಾದುದನು ತಾ | ಮನದೊಳಗೆ ಭಾವಿಸುತ ತನ್ನಯ | ತನುವಿಗೋಸುಗ ಪರರ ದ್ವೇಷಿಸದಿಹುದು ವರಯೋಗಿ ||

                         2. ಭಾರತ
ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ. ನಮಗೆ ತಿಳಿದಮಟ್ಟಿಗೆ ಈತನು ಭಾರತದ ಆದಿಪರ್ವಕ್ಕೆ ಸೇರಿದ ಪೌಲೋಮ, ಆಸ್ತೀಕ ಎಂಬ ಪರ್ವಗಳನ್ನು ಬರೆದಿದ್ದಾನೆ. ಇತರಭಾಗಗಳನ್ನೂ ಬರೆದಿರಬಹುದು. ಪೌಲೋಮಪವ‍೯, ಸಂಧಿ 4, ಪದ್ಯ 145, ಆಸ್ತೀಕಪವ೯, ಸಂಧಿ 14, ಪದ್ಯ 660. ಗ್ರಂಥಾವತಾರದಲ್ಲಿ ವಿಷ್ಣು ಸ್ತುತಿ ಇದೆ. 

ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ--

                          ನಾಗಾಲಯ

ಫಲಿತಕುಸುಮಿತಪಲ್ಲವತತರು | ಗಳಿಲ ಪುಷ್ಪಾಮೋದರಮ್ಯಾ | ನಿಲನಿರಂತರವಿಚರಿತೋದ್ಯಾನದಲಿ ಸಾಗರದ || ಲಲಿತವೀಚೀವಿತತಿ. ಮೃದೂ | ಜ್ವಲಿತಜಲಚರನಿಕರಪರಿಮಂ | ಡಲಿತಪಾವನಭವನ ತಲೆದೂಗಿಸಿತು ಖಗಪತಿಯ ||

29