482 ಕರ್ಣಾಟಕ ಕವಿಚರಿತೆ [17 ನೆಯ
9 ಯಾದವಗಿರಿಮಾಹಾತ್ಮ
ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 12, ಪದ್ಯ 1219, ನಾರದೀಯಪುರಾಣೋಕ್ತವಾದ ಯಾದವಗಿರಿಯ ಅಥವಾ ಮೇಲುಗೋಟೆಯ ಮಹಿಮೆ ಇದರಲ್ಲಿ ಹೇಳಿದೆ. ಗ್ರಂಥಾರಂಭದಲ್ಲಿ ಯಾದವಗಿರಿನಾಧನ ಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ, ರಾಮಾನುಜ, ಕಡಾಂಬಿಲಕ್ಷ್ಮಣಾಚಾರ್ಯ, ನಾರದ, ಗರುಡ, ವಿಪ್ಪಕ್ಸೇನ ಇವರುಗಳನ್ನು ಹೊಗಳಿದ್ದಾನೆ. ಸಂಧಿಗಳ ಕೊನೆಯಲ್ಲಿ ಈ ಪದ್ಯವಿದೆ---
ಇದು ಯದುಗಿರಿಸತಿಪದಪದ್ಮ ಮಧುಭ್ಹೃಂಗ | ಚದುರ ಶ್ರೀಚಿಕದೇವನೃಪನ | ಸದಮಲಾಮಾತ್ಯ ಲಕ್ಷ್ಮೀಶ ಪೇಳಿದ ಕೃತಿ | ಮುದವೀವುದೊಲಿದು ಕೇಳ್ವರಿಗೆ|| ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ--
ಗಿಳಿ
ತೆನೆವಾಲ ಸವಿಯಬೇಕೆಂದುಲಿಗುಂದದೆ | ಮನನಲಿದೈತಂದರಗಿ | ತನಿಸೊಕ್ಕಿ ಸವಿದು ಮೆಲ್ನುಡಿಗಲಿಯುಕಲಿರ್ಸ | ವನುದಿನ ರಾಜಕೀರಗಳು ||
ಸಾಮರಿಯರು
ತಳಿರಡಿಯೆಸೆವಲರ್ಗಣ್ಣ ಪೆಣ್ಗಿಳಿನುಡಿ | ಯಳಿಗುರುಳೆಳವೆರೈನೊಸಲ | ತೋಳಗುವ ತೊಂಡೆವಾಯ್ದೆ ರೈಟಯ ಸಾಮರಿಯರು | ಗಿಳಿಗಳ ಸೋವತಲಿಹರು ||
ನರ್ತಕಿ
ಸೆಳೆಮಿಂಚಿನಂತೆ ಪೊಳೆದು ತೋಳ ಢಾಳ ಕಂ | ಗೊಳಿಸೆ ಮೈಸಿರಿ ಸಿರಿವೀರೈ | ಅಲರಂಬನ ಪೊನ್ನ ಪುತ್ತಳಿಯೆನೆ ಲಾಸ್ಯ | ದಳವ ತೋರೈದಳು ಜಾಣೆ ಯಲಿ ||
ಸಮುದ್ರ
ತೆರೆಗಳೆ ಘನ ಮಾನ್ಗಳೆ ಮಿಂಚು ನೆಗೆವ ಶ್ರೀ | ಕರ ಮಳೆಮುತ್ತಾಲಿವರು | ಸ್ಪುರಿಸ ಬಾಡಬ ಸಿಡಿಲಾಗೆ ಮೇಘಾಗಮ | ದಿರವ ಪೋಲ್ಲುದು ಜಲನಿಧಿಯು ||
ಚಿಕ್ಕದೇವರಾಯನ ಪ್ರತಾಪ
ಬೆಡಗಿನ ಕೀರ್ತಿಯೆನಿಪ ಪಾಲ್ಗಡಲಿ | ತಡಿಯೊಳು ಬೆಳೆದು ಸರ್ವಿರ್ಪ | ಕಡಸೊಬಗಿನ ವಿದ್ರುಮವಲ್ಲಿಯೆನೆ ಸೊ೦ | ಪಿಡಿದುದು ನೃಪನ ಪ್ರತಾಪ ||
10 ಯದುಗಿರಿ ಮಾಹಾತ್ಮ
ಇದೂ ಮೇಲುಗೋಟು ಮಹಿಮೆಯನ್ನು ನಿರೂಪಿಸುತ್ತದೆ; ಆದರ್ನೆ ಗದ್ಯರೂಪವಾಗಿದೆ. ಗ್ರಂಥಾದಿಯಲ್ಲಿ ಕವಿ ಕಡಾಂಬಿಸಿಂಗರಾಚಾರ್ಯನನ್ನ.