ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



     356                  ಕರ್ಣಾಟಕ ಕವಿಚರಿತೆ.                   [17 ನೆಯ
     ತ್ಸಮಯದೊಳು ನಿರ್ಜರರು ಕಳೆದ ಪುಷ್ಪದ ಮಳೆಯ |                 
 ಕ್ರಮದಂತೆ ಗಗನಮಂಡಲದೊಳಗೆ ತಾರೆಗಳು ತಮತಮಗೆ ರಾಜಿಸಿದುವು ||
                                       ----- ----
                                    ವಂಚಬಾಣ 1614 
   ಈತನು ಭುಜಬಲಿಚರಿತೆಯನ್ನು ಬರೆದಿದ್ದಾನೆ;  ಇವನು ಬರೆದ   ಕೆಲ      
ವು ಹಾಡುಗಳೂ ದೊರೆಯುತ್ತವೆ. ಈತನು ಜೈನಕವಿ, ಇವನ ಸ್ಥಳ  ಬೆಳು  
ಗೊಳ; ತಂದೆ  ಮತ್ತು ವಿದ್ಯಾಗುರು  ಸ್ಥಾನಿಕಚೆನ್ನಪ್ಪಯ್ಯ;      ಅಣ್ಣಂದಿರು 
ಬೊಮ್ಮಪ್ಪ, "ಕನ್ನಡಜಾಣನೆನಿಸಿದ ದೆಪ್ಪಯ್ಯ, ಗ್ರಂಧದ ಕೊನೆಯ    ಸಂ 
ಧಿಯಲ್ಲಿ, ಶಾಂತವರ್ಣಿ ಗುಮ್ಮಟೇಶ್ವರನಿಗೆ ಶಕ 1535 ಪರೀಧಾವಿಯಲ್ಲಿ,ಎಂ 
ದರೆ 1612 ರಲ್ಲಿ, ಮಸ್ತಕಾಭಿಷೇಕವನ್ನು ಮಾಡಿಸಿದಂತೆ ಹೇಳುತ್ತಾನೆ. ಈ 
ಶಾಂತವರ್ಣಿ ಕವಿಯ ಸಮಕಾಲದವನೆಂದು ಆ  ಸಂಧಿಯಿಂದಲೇ  ವ್ಯಕ್ತವಾ 
ಗುತ್ತದೆ. ನಮಗೆ ದೊರೆತ ಈ ಗ್ರಂಥದ ಪ್ರತಿಯ  ಕೊನೆಯಲ್ಲಿ "ಆನಂದ  
ಸಂವತ್ಸರದ ಮಾರ್ಗಶಿರ ಶು|| ೫ ಬುಧವಾರ ಬೆಳುಗುಳದ ಸ್ಥಾನಿಕ ಚೆನ್ನ  
ಪ್ಪಯ್ಯನ  ಮಗ ಕವಿ ಪಂಚಬಾಣನು ಕವಿತ್ವವ ಹೇಳಿ  ತನ್ನ  ಸ್ವಹಸ್ತದಲ್ಲಿ 
ಬರೆದ ಪುಸ್ತಕಕ್ಕೆ  ಮಂಗಳಮಹಾಶ್ರೀ ಎಂದಿದೆ   ಈ  ಆನಂದಸಂವ      
ತ್ಸರವು 1614 ಆಗಿರಬೇಕು.
     ಕವಿ ತನ್ನನ್ನು “ಜಿನಪದಭಕ್ತಕುಲಕಮಲಾದಿತ್ಯ, ಮಚ್ಚರಿಪ ವಾಗ್ನಿ  
ಗಳದೆದಲ್ಲಣ, ಚದುರಸತ್ಕವಿ” ಎಂದು ವಿಶೇಷಿಸಿ ಹೇಳಿಕೊಂಡಿದ್ದಾನೆ.
    ಇವನ ಗ್ರಂಥಗಳಲ್ಲಿ
               1 ಭುಜಬಲಿಚರಿತೆ                           
    ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 22,ಪದ್ಯ 2815, ಇದಾದ  
ಮೇಲೆ 109 ಪದ್ಯಗಳುಳ್ಳ ಮತ್ತೊಂದು ಸಂಧಿ ಇದೆ. ಇದರಲ್ಲಿ ಕವಿ  ತನ್ನ 
ಕಾಲದಲ್ಲಿ ಶಾಂತವರ್ಣಿ  ನಡಸಿದ  ಗುಮ್ಮಟೇಶ್ವರನ  ಮಸ್ತಕಾಭಿಷೇಕವನ್ನು   
ವರ್ಣಿಸಿದ್ದಾನೆ. ಇದರ ಕೊನೆಯಲ್ಲಿ ಸಂಧಿ 23  ಎಂದು  ಹೇಳದೆ  ಸಂಧಿ  
ಎಂದಿರುವುದರಿಂದ ಇದು ಗ್ರಂಥಕ್ಕೆ ಸೇರಿದುದಲ್ಲವೆಂದು ತೋರುತ್ತದೆ. ತನ್ನ  
ಗ್ರಂಥವನ್ನು "ಎನ್ನೊಡತಿ ಅನಂತಮುತಿಯಮ್ಮನ ಕೃಪೆಯಿಂ ಪೇಳಿದೆನು