ಈ ಪುಟವನ್ನು ಪರಿಶೀಲಿಸಲಾಗಿದೆ
ಕರ್ಣಾಟಕ ಕವಿಚರಿತೆ. [15 ನೆಯ
ಜ್ಯೋತಿಷವಿದ್ಯೆಗೆ ಮೊದಲಿಗ ಸಲೆ ವಾದಿ |ವ್ರಾತಭಯಂಕರನೆನಿಪ | ಖ್ಯಾತಿಗೆ ನೆಲೆಯಾದ ಶ್ರೀಧರಾಚಾರ್ಯರ | ಪ್ರೀತಿ ಕೈಮಿಗೆ ಬಲಗೊಂಬೆ || ಈ ಗ್ರಂಧವನ್ನು “ಧರಣಿಗಿರಿನಿಧಿಶಕಾಂಕಂ ವಿರೋಧಿಸಂವತ್ಸರ ದಲ್ಲಿ” ಎಂದರೆ ಶಕ 971 (ಕ್ರಿಸ್ತ 1049) ರಲ್ಲಿ ಬರೆದಂತೆ ಹೇಳುತ್ತಾನೆ. ಗ್ರಂಥಾಂತ್ಯದಲ್ಲಿ “ಧಾತ್ರಿಯನಾಹವಮಲ್ಲಭೂಮಿಪಾಳಕನೆಸೆದಾಳ್ಗೆ” ಎಂ ಬುದರಿಂದ ಕವಿ ಚಾಳುಕ್ಯರಾಜನಾದ ಆಹವಮಲ್ಲನ (1042-1068) ಆಳಿಕೆಯಲ್ಲಿದ್ದನೆಂದು ತಿಳಿಯುತ್ತದೆ. ಈ ಕವಿಗೆ ಗದ್ಯಪದ್ಯವಿದ್ಯಾಧರ, ಬುಧಮಿತ್ರ ಎಂಬ ಬಿರುದುಗ ಳುಂಟು. ತನ್ನ ಗುಣಾದಿಗಳನ್ನೂ ಕವಿತಾಪ್ರೌಢಿಯನ್ನೂ ಈ ಪದ್ಯಗಳಲ್ಲಿ ಹೇಳಿದ್ದಾನೆ:__ ವಿಧುವಿಶದಯಶೋನಿಧಿ ಕಾ|ವ್ಯಧರ್ಮಜಿನಧರ್ಮಗಣಿತಧರ್ಮಮಹಾಂಭೋ | ನಿಧಿಯೆನೆ ನೆಗಲ್ದಿಂ ಜಗದೊಳ್|ಬುಧಮಿತ್ರಂ ನಿಜಕುಲಾಂಬುಜಾಕರಮಿತ್ರಂ || ರಸಭಾವಸಮನ್ವಿತನೆಂ | ದು ಸುಭಗನೆಂದಖಿಳವೇದಿಯೆಂದನ್ವಿತನೆಂ | ದು ಸಮಗ್ರನೆಂದು ಸಲೆ ಬ | ಣ್ಣಿಸುವುದು ಧರೆ ಗದ್ಯಪದ್ಯವಿದ್ಯಾಧರನಂ || ಅನವದ್ಯಂ ಕವಿತಾಗುಣಾರ್ಣವನಿಳಾದೇವಾನ್ವಯಾಬ್ಧ್ಯಂಬುಜಾ | ರಿನಿಭಂ ಪ್ರೌಢವಿಳಾಸಿನೀಮನಸಿಜಂ ಶ್ರೀಶೀಲಭದ್ರಂ ದ್ವಿಷ || ಜ್ಜನದುರ್ವಾರಗಜಾಂಕುಶಂ ಸುಜನರತ್ನಂ ತಾನೆನಲ್ಕೇಂ ಕೃತಾ | ರ್ಧನೊ ಕರ್ಣಾಟಕವೀಂದ್ರಸದ್ಗುಣ ? ಗುಣಾಸಂಜ್ಞಾಧರಂ ಶ್ರೀಧರಂ || ಕೊನೆಯ ಪದ್ಯದಲ್ಲಿ ಆದಿಪಂಪ (ಕವಿತಾಗುಣಾರ್ಣವ), ಚಂದ್ರ ಅಥವಾ ಚಂದ್ರಭಟ್ಟ (ಅಂಬುಜಾರಿ), ಮನಸಿಜ, ? ಗುಣವರ್ಮ (ಶೀಲಭದ್ರ), ಗಜಾಂಕುಶ, ರನ್ನ ಎಂಬ ಪೂರ್ವಕವಿಗಳ ಹೆಸರನ್ನೂ ಸೂಚಿಸಿದ್ದಾನೆ. _________________________ _________ ________ ______ I ಇದರಿಂದ ಈ ಕವಿಗಳೆಲ್ಲಾ 1049ಕ್ಕೆ ಹಿಂದೆ ಇದ್ದೆ ವರೆಂಬುದು ವ್ಯಕ್ತವಾಗುತ್ತದೆ. ಆದುದರಿಂದ ಪ್ರಥಮಸಂಪುಟದಲ್ಲಿ ಮನಸಿಜ, ಗಜಾಂಕುಶ, ಚಂದ್ರ ಅಥವಾ ಚಂದ್ರ ಭಟ್ಟ ಇವರುಗಳಿಗೆ ಹೇಳಿರುವ ಕಾಲವನ್ನು 1049ಕ್ಕೆ ಹಿಂದೆ ಹಾಕಬೇಕು