ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಕರ್ಣಾಟಕ ಕವಿಚರಿತೆ. [15 ನೆಯ

      ಜ್ಯೋತಿಷವಿದ್ಯೆಗೆ ಮೊದಲಿಗ ಸಲೆ ವಾದಿ |ವ್ರಾತಭಯಂಕರನೆನಿಪ |
      ಖ್ಯಾತಿಗೆ ನೆಲೆಯಾದ ಶ್ರೀಧರಾಚಾರ್ಯರ | ಪ್ರೀತಿ ಕೈಮಿಗೆ ಬಲಗೊಂಬೆ ||
                                                         
      ಈ ಗ್ರಂಧವನ್ನು “ಧರಣಿಗಿರಿನಿಧಿಶಕಾಂಕಂ ವಿರೋಧಿಸಂವತ್ಸರ          
  ದಲ್ಲಿ” ಎಂದರೆ ಶಕ 971 (ಕ್ರಿಸ್ತ 1049) ರಲ್ಲಿ ಬರೆದಂತೆ ಹೇಳುತ್ತಾನೆ. 
  ಗ್ರಂಥಾಂತ್ಯದಲ್ಲಿ  “ಧಾತ್ರಿಯನಾಹವಮಲ್ಲಭೂಮಿಪಾಳಕನೆಸೆದಾಳ‍್ಗೆ”  ಎಂ  
  ಬುದರಿಂದ ಕವಿ ಚಾಳುಕ್ಯರಾಜನಾದ  ಆಹವಮಲ್ಲನ  (1042-1068) 
  ಆಳಿಕೆಯಲ್ಲಿದ್ದನೆಂದು ತಿಳಿಯುತ್ತದೆ.
                                                       
      ಈ ಕವಿಗೆ  ಗದ್ಯಪದ್ಯವಿದ್ಯಾಧರ, ಬುಧಮಿತ್ರ  ಎಂಬ ಬಿರುದುಗ    
  ಳುಂಟು. ತನ್ನ ಗುಣಾದಿಗಳನ್ನೂ ಕವಿತಾಪ್ರೌಢಿಯನ್ನೂ ಈ ಪದ್ಯಗಳಲ್ಲಿ   
  ಹೇಳಿದ್ದಾನೆ:__
                                          
      ವಿಧುವಿಶದಯಶೋನಿಧಿ ಕಾ|ವ್ಯಧರ್ಮಜಿನಧರ್ಮಗಣಿತಧರ್ಮಮಹಾಂಭೋ | 
      ನಿಧಿಯೆನೆ ನೆಗಲ್ದಿಂ ಜಗದೊಳ್|ಬುಧಮಿತ್ರಂ ನಿಜಕುಲಾಂಬುಜಾಕರಮಿತ್ರಂ || 
      ರಸಭಾವಸಮನ್ವಿತನೆಂ | ದು ಸುಭಗನೆಂದಖಿಳವೇದಿಯೆಂದನ್ವಿತನೆಂ |
      ದು ಸಮಗ್ರನೆಂದು ಸಲೆ ಬ | ಣ್ಣಿಸುವುದು ಧರೆ ಗದ್ಯಪದ್ಯವಿದ್ಯಾಧರನಂ || 
      ಅನವದ್ಯಂ ಕವಿತಾಗುಣಾರ್ಣವನಿಳಾದೇವಾನ್ವಯಾಬ್ಧ್ಯಂಬುಜಾ |       
      ರಿನಿಭಂ ಪ್ರೌಢವಿಳಾಸಿನೀಮನಸಿಜಂ ಶ್ರೀಶೀಲಭದ್ರಂ ದ್ವಿಷ || 
      ಜ್ಜನದುರ್ವಾರಗಜಾಂಕುಶಂ ಸುಜನರತ್ನಂ ತಾನೆನಲ್ಕೇಂ ಕೃತಾ |    
      ರ್ಧನೊ ಕರ್ಣಾಟಕವೀಂದ್ರಸದ್ಗುಣ ? ಗುಣಾಸಂಜ್ಞಾಧರಂ ಶ್ರೀಧರಂ ||
                                                   
  ಕೊನೆಯ ಪದ್ಯದಲ್ಲಿ ಆದಿಪಂಪ (ಕವಿತಾಗುಣಾರ್ಣವ), ಚಂದ್ರ ಅಥವಾ   
  ಚಂದ್ರಭಟ್ಟ (ಅಂಬುಜಾರಿ),  ಮನಸಿಜ, ? ಗುಣವರ್ಮ (ಶೀಲಭದ್ರ), 
  ಗಜಾಂಕುಶ, ರನ್ನ ಎಂಬ ಪೂರ್ವಕವಿಗಳ ಹೆಸರನ್ನೂ ಸೂಚಿಸಿದ್ದಾನೆ. 
 _________________________ _________ ________ ______                                                   
  I ಇದರಿಂದ ಈ ಕವಿಗಳೆಲ್ಲಾ 1049ಕ್ಕೆ ಹಿಂದೆ ಇದ್ದೆ ವರೆಂಬುದು ವ್ಯಕ್ತವಾಗುತ್ತದೆ. ಆದುದರಿಂದ ಪ್ರಥಮಸಂಪುಟದಲ್ಲಿ ಮನಸಿಜ, ಗಜಾಂಕುಶ, ಚಂದ್ರ ಅಥವಾ ಚಂದ್ರ  ಭಟ್ಟ ಇವರುಗಳಿಗೆ ಹೇಳಿರುವ ಕಾಲವನ್ನು 1049ಕ್ಕೆ ಹಿಂದೆ ಹಾಕಬೇಕು