ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನಕ್ಕೆ ಹಿಂದೆ] ಶ್ರೀಧರಾಚಾರ್ಯ 3
ಗಜಾಂಕುಶ,1 ಮನಸಿಜ,2 ಚಂದ್ರಭಟ್ವ3 ಸು.1000
ಈ ಕವಿಗಳನ್ನು ಶ್ರೀಧರಾಚಾರ್ಯನು 4 ತನ್ನ ಜಾತಕತಿಲಕದಲ್ಲಿ
(1049) ಸ್ತುತಿಸಿರುವುದರಿಂದ ಇವರುಗಳು ಅವನ ಕಾಲಕ್ಕೆ ಹಿಂದೆ,
ಎಂದರೆ ಸುಮಾರು 1000 ರಲ್ಲಿಯೋ ಅಥವಾ ಆಕಾಲಕ್ಕೆ ಸ್ವಲ್ಪ ಹಿಂದೆ
ಯೋ, ಇದಿರಬೇಕು.
_______
ಶ್ರೀಧರಾಚಾರ್ಯ 1049
ಈತನು ಜಾತಕತಿಲಕವನ್ನು ಬರೆದಿದ್ದಾನೆ. ಚಂದ್ರಪ್ರಭಚರಿತೆ
ಯನ್ನೂ ಬರೆದಿರುವಂತೆ ಜಾತಕತಿಲಕದ ಅಂತ್ಯಭಾಗದಲ್ಲಿರುವ
ಸುಭಗವಚಂ ಕಾವ್ಯಕವಿ | ತ್ವಭೂಷಣಂ ಶ್ರೀಧರಾರ್ಯರಚಿತಂ ಚಂದ್ರ |
ಪ್ರಭಚರಿತಂ ಶಾಸ್ತ್ರಕವಿ | ತ್ವಭೂಷಣಂ ಧರೆಗೆ ನೆಗಲ್ದಿ ಜಾತಕತಿಲಕಂ ||
ಅದಿದೆನ್ನದೆ ಜಾತಕತಿಲ | ಕದೊಳರುವುದು ಗಣಿತಧರ್ಮಮಂ ಸಕಳಜಗ |
ದ್ವಿದಿತಂ ಚಂದ್ರಪ್ರಭಚರಿ|ತದೊಳರುವುದು ಕಾವ್ಯಧರ್ಮಮಂ ಬುಧನಿವಹಂ||
ಎಂಬ ಪದ್ಯಗಳಿಂದ ತಿಳಿಯುತ್ತದೆ. ಆದರೆ ಈ ಗ್ರಂಥವು ನಮಗೆ
ದೊರೆತಿಲ್ಲ.
ಇವನು ಜೈನಕವಿ.ಇವನ ಸ್ಥಳ ಬೆಳುವಲನಾಡಿನಲ್ಲಿರುವ ನರಿ
ಗುಂದ. “ವಿಪ್ರಕುಲೋತ್ತಮಂ” ಎಂದು ಹೇಳಿಕೊಂಡಿದ್ದಾನೆ. “ಇದುವ
ರೆಗೂ ಆರೂ ಕನ್ನಡದಲ್ಲಿ ಜ್ಯೋತಿಷವನ್ನು ಬರೆದಿಲ್ಲ ; ನೀನು ಜಾತಕ
ತಿಲಕವನ್ನು ಬರೆಯಬೇಕು” ಎಂದು ವಿದ್ವಾಂಸರು ಹೇಳಲು ಈ ಗ್ರಂಥ
ವನ್ನು ಬರೆದಂತೆ ಕವಿ ಹೇಳುತ್ತಾನೆ. ಇದರಿಂದ ಕನ್ನಡದಲ್ಲಿ,ಜ್ಯೋತಿಷ
ವನ್ನು ಬರೆದವರಲ್ಲಿ ಇವನೇ ಪ್ರಥಮಕವಿಯೆಂದು ತಿಳಿಯುತ್ತದೆ. ಈ
ಯಂಶವನ್ನು ಬಾಹುಬಲಿ (ಸು. 1550) ತನ್ನ ನಾಗಕುಮಾರಕಥೆಯ
ಆದಿಭಾಗದಲ್ಲಿಯ ಈ ಪದ್ಯದಲ್ಲಿ ದೃಢೀಕರಿಸುತ್ತಾನೆ--__________________________________________________
I Volume I,67 2.Ibid., II5 3 Ibid.136, 4 ಇವನ ಚರಿತವನ್ನು ನೋಡಿ