ಈ ಪುಟವನ್ನು ಪರಿಶೀಲಿಸಲಾಗಿದೆ
2 ಕರ್ಣಾಟಕ ಕವಿಚರಿತೆ [15 ನೆಯ
ಸ್ತುತಿಸಿ ಶೂದ್ರಕರಾಜನಿಗೆ ಹೋಲಿಸಿದ್ದಾನೆ. ಗಂಗರಾಜರಲ್ಲಿ ಮಹೇಂ ದ್ರಾಂತಕ ಎಂಬ ಬಿರುದುಳ್ಳವನು 886 ರಿಂದ 913ರ ವರೆಗೆ ಆಳಿದ ಎರೆಯಪ್ಪನು ಒಬ್ಬನೇ ಆದುದರಿಂದ ಕವಿ ಈತನ ಆಶ್ರಿತನಾಗಿ ಇದ್ದಿರ ಬೇಕು. ಆದುದರಿಂದ ಇವನ ಕಾಲವು ಸುಮಾರು 900 ಆಗಿರಬಹುದು.
ಶ್ರೀವಿಜಯದಂಡನಾಧ ಸು, 915
ಕಡವಾಡಿಸ್ಟ್ರಿಕ್ಟ್ ದಾನವುಲವಾಡು ಎಂಬ ಗ್ರಾಮದಲ್ಲಿರುವ ಒಂದು
ಶಾಸನದಲ್ಲಿ 1 ಈತನನ್ನು 'ಅನುಪಮಕವಿ', 'ಅರುವಿಂಗೋಜ' ಎಂದು ಹೊಗಳಿದೆ. ಈತನು ಕವಿಯಾಗಿದ್ದಿರಬಹುದು ; ಅವ ಗ್ರಂಥವನ್ನು ಬರೆ ದಿದ್ದಾನೆಯೋ ತಿಳಿಯದು. ಈತನು ಜೈನನು, ಬಳಿಕುಲದವನು. ಇವನು ರಾಷ್ಟ್ರಕೂಟರಾಜನಾದ ಇಂದ್ರ III (915-917) ಎಂಬವನಲ್ಲಿ ದಂಡ ನಾಯಕನಾಗಿದ್ದಂತೆಯೂ ಬಹಳ ಪರಾಕ್ರಮಶಾಲಿಯಾಗಿದ್ದಂತೆಯೂ ಕೊ ನೆಗೆ ಸನ್ಯಾಸನವಿಧಿಯಿಂದ ನಿರ್ವಾಣವನ್ನು ಪಡೆದಂತೆಯೂ ಮೇಲಣ ಶಾಸನದಿಂದ ತಿಳಿಯುತ್ತದೆ. ಈ ಶಾಸನದಿಂದ ಇವನ ಸ್ತುತಿರೂಪವಾದ ಕೆಲವು ಪದ್ಯಗಳನ್ನು ಕೆಳಗೆ ಬರೆಯುತ್ತೇವೆ.
ಪತಿಯ ಬೆಸದಿಂದಮಹಿತಂ | ನತಿಕೋಪದಿನಿಕ್ಕಿ ಗೆಲ್ದು ಪರಿಪಾಳಿಸಿದಂ | ಚತುರುದಧಿವಲಯಮೆಲ್ಲಮ | ನತಿರಧನೀ ದಂಡನಾಯಕಂ ಶ್ರೀವಿಜಯಂ || ತುರಗದಳಂಗಳನೊಡ್ಡಿದ | ಕರಿಘಟೆಯಂ ಹಿರಿಯ ನೆರವಿಯಂ ಬಲ್ಲಣಿಯಂ | ಧುರದೆಡೆಯೊಳಿಯಿದು ಗೆಲ್ಗು೦ | ಕರದಸಿ ಕರಮರಿದು ರಣದೊಳನುಪಮ ಕವಿಯಾ||
ಅಟ್ಟ ವಿಧಕರ್ಮಮೆಲ್ಲಮ | ನಟ್ಟು೦ಬರಿಗೊಂಡು ಕಿಡಿಪೆನೆಂಬುದೆ ಬಗೆಯಿಂ | ಪುಟ್ಟಿದನುದಾತ್ತಸತ್ವಂ | ನೆಟ್ಟನೆ ವಿಬುಧೇಂದ್ರವಂದ್ಯನರಿವಿಂಗೋಜಂ || ತಾನರಿದು ತೋರೆದು ನೆಟ್ಟನೆ|ಮಾನಿಸವಾರೇವುದೆಂಗು ಸನ್ಯಾಸನದೊಳ್ || ಮಾನಸಿಕೆಗಿಡದೆ ಕೊಂಡೊನ|ನೂನಸುಖಾಸ್ಪದಮನಳ್ತಯೊಳ್ ಶ್ರೀವಿಜಯಂ||
JEptgruphta Indicd, X, 150.