ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನಕ್ಕೆ ಹಿಂದೆ] ಶ್ರೀಧರಾಚಾರ್ಯ 3
ಗಜಾಂಕುಶ,1 ಮನಸಿಜ,2 ಚಂದ್ರಭಟ್ವ3 ಸು.1000 ಈ ಕವಿಗಳನ್ನು ಶ್ರೀಧರಾಚಾರ್ಯನು 4 ತನ್ನ ಜಾತಕತಿಲಕದಲ್ಲಿ (1049) ಸ್ತುತಿಸಿರುವುದರಿಂದ ಇವರುಗಳು ಅವನ ಕಾಲಕ್ಕೆ ಹಿಂದೆ, ಎಂದರೆ ಸುಮಾರು 1000 ರಲ್ಲಿಯೋ ಅಥವಾ ಆಕಾಲಕ್ಕೆ ಸ್ವಲ್ಪ ಹಿಂದೆ ಯೋ, ಇದಿರಬೇಕು. _______ ಶ್ರೀಧರಾಚಾರ್ಯ 1049 ಈತನು ಜಾತಕತಿಲಕವನ್ನು ಬರೆದಿದ್ದಾನೆ. ಚಂದ್ರಪ್ರಭಚರಿತೆ ಯನ್ನೂ ಬರೆದಿರುವಂತೆ ಜಾತಕತಿಲಕದ ಅಂತ್ಯಭಾಗದಲ್ಲಿರುವ ಸುಭಗವಚಂ ಕಾವ್ಯಕವಿ | ತ್ವಭೂಷಣಂ ಶ್ರೀಧರಾರ್ಯರಚಿತಂ ಚಂದ್ರ | ಪ್ರಭಚರಿತಂ ಶಾಸ್ತ್ರಕವಿ | ತ್ವಭೂಷಣಂ ಧರೆಗೆ ನೆಗಲ್ದಿ ಜಾತಕತಿಲಕಂ || ಅದಿದೆನ್ನದೆ ಜಾತಕತಿಲ | ಕದೊಳರುವುದು ಗಣಿತಧರ್ಮಮಂ ಸಕಳಜಗ | ದ್ವಿದಿತಂ ಚಂದ್ರಪ್ರಭಚರಿ|ತದೊಳರುವುದು ಕಾವ್ಯಧರ್ಮಮಂ ಬುಧನಿವಹಂ|| ಎಂಬ ಪದ್ಯಗಳಿಂದ ತಿಳಿಯುತ್ತದೆ. ಆದರೆ ಈ ಗ್ರಂಥವು ನಮಗೆ ದೊರೆತಿಲ್ಲ. ಇವನು ಜೈನಕವಿ.ಇವನ ಸ್ಥಳ ಬೆಳುವಲನಾಡಿನಲ್ಲಿರುವ ನರಿ ಗುಂದ. “ವಿಪ್ರಕುಲೋತ್ತಮಂ” ಎಂದು ಹೇಳಿಕೊಂಡಿದ್ದಾನೆ. “ಇದುವ ರೆಗೂ ಆರೂ ಕನ್ನಡದಲ್ಲಿ ಜ್ಯೋತಿಷವನ್ನು ಬರೆದಿಲ್ಲ ; ನೀನು ಜಾತಕ ತಿಲಕವನ್ನು ಬರೆಯಬೇಕು” ಎಂದು ವಿದ್ವಾಂಸರು ಹೇಳಲು ಈ ಗ್ರಂಥ ವನ್ನು ಬರೆದಂತೆ ಕವಿ ಹೇಳುತ್ತಾನೆ. ಇದರಿಂದ ಕನ್ನಡದಲ್ಲಿ,ಜ್ಯೋತಿಷ ವನ್ನು ಬರೆದವರಲ್ಲಿ ಇವನೇ ಪ್ರಥಮಕವಿಯೆಂದು ತಿಳಿಯುತ್ತದೆ. ಈ ಯಂಶವನ್ನು ಬಾಹುಬಲಿ (ಸು. 1550) ತನ್ನ ನಾಗಕುಮಾರಕಥೆಯ ಆದಿಭಾಗದಲ್ಲಿಯ ಈ ಪದ್ಯದಲ್ಲಿ ದೃಢೀಕರಿಸುತ್ತಾನೆ--__________________________________________________ I Volume I,67 2.Ibid., II5 3 Ibid.136, 4 ಇವನ ಚರಿತವನ್ನು ನೋಡಿ