ಈ ಪುಟವನ್ನು ಪರಿಶೀಲಿಸಲಾಗಿದೆ
304
ಕರ್ಣಾಟಕ ಕವಿಚರಿತೆ. [17 ನೆಯ
ಇದು ಮೈದುನರಾಮನ ಚರಿತೆಯನ್ನು ಹೇಳುತ್ತದೆ, ಇದರಲ್ಲಿ 151 ನುಡಿಗಳಿವೆ. ಒಂದನ್ನು ಉದಾಹರಿಸುತ್ತೇವೆ-
ಶ್ರೀಮದುತ್ತರದೇಶಭಾಗದೊಳಗತಿಶಯದಿ | ಭೀಮರಧಿಯೆಂಬ ನಗರಂ ಧರೆಗೆ ಮೆಳವಿಹುದು ||
__ __ __ ___ ವೆಂಕಟಶರ್ಮ 1622.
ರುದ್ರಭಟ್ಟನ(ಸು.1180) ಜಗನ್ನಾಥವಿಜಯದ ಒಂದು ಪ್ರತಿಯಅಂತ್ಯ ದಲ್ಲಿ ಅಪ್ರತಿಯನ್ನು ಈತನು ದುಂದುಭಿವರ್ಷದಲ್ಲಿ ಬರೆದುದಾಗಿ ಹೇಳುವುದ ಲ್ಲದೆ ತನ್ನ ವಿಷಯವಾಗಿಯೂ ಆ ಗ್ರಂಥದವಿಷಯವಾಗಿಯೂ ಹಲವುಪದ್ಯಗಳ ನ್ನು ಬರೆದಿದ್ದಾನೆ. ಈ ಪದ್ಯಗಳನ್ನು ನೋಡಿದರೆ ಇವನು ಕವಿಯಾಗಿದ್ದನೆಂದು ಹೇಳಬಹುದಾಗಿದೆ. ಈತನು ಗುಮ್ಮಳಾಪುರದವನು ; ಕುತ್ಸ ಗೋತ್ರದವನು; ಆಪಸ್ತಂಬಸೂತ್ರದವನು ; ಬೃಹಚ್ಚ ರಣ ಬ್ರಾಹ್ಮಣನು, ಇವನು ಹೇಳುವ ದುಂದುಭಿವರ್ಷವು 1622 ಆಗಿರಬಹುದೆಂದು ಊಹಿಸುತ್ತೇವೆ. ಇವನ ಪದ್ಯಗಳಲ್ಲಿ ಕೆಲವನ್ನು ಉದ್ಧರಿಸಿ ಬರೆಯುತ್ತೇವೆ--
ದುಂದುಭಿಸಂವತ್ಸರದೊಳ | ಗಂದಂಬೆತ್ತೆಸೆವ ಮಾರ್ಗಶಿರಮಾಸದೊಳಿಂ ಪೊಂದಿದ ಶುಕ್ಲದ್ವಾದಶಿ | ಯಂದೀಸುಕರಪ್ರಬಂಧಮಂ ಲಿಖಿಸಿದೆನಾಂ || ವರರುದ್ರಭಟ್ಟನಿಂದಂ | ವಿರಚಿತಮದೀಪ್ರಬಂಧಮಂ ಸಂತಸದಿಂ |
ಬರೆದ ವೆಂಕಟಶಮ೯೦ | ಧರೆಯೊಳ್ ರಾಜಿಸೆ ಸಮಸ್ತ ವಿದ್ವಜ್ಜನದಿಂ || ಸುಮನೋರಾಜಿವಿರಾಜಿತಂ ಕುವಲಯಾನಂದಪ್ರಭಾಭಾವಿತಂ | ಕಮಲಾಕ್ಷ ಪ್ರತಿಪಾದಿತಂ ಕವಿಜನಾನಂದಪ್ರದಂ ಚೋದಿತಂ || ಪ್ರಮದಾಲಂಕರಣೋದಿತಂ ಹರಿಪದೈಕಧ್ಯಾನಸಂಭಾವಿತಂ |
ಕ್ರಮದಿಂದೆನ್ನ ಯ ಪುಸ್ತಕಂ ಸರಸಿವೋಲ್ ವ್ಯೋಮಂಬೊಲುದ್ಬಾಸಿತಂ || ವಿಲಸಧ್ಭೂ ಮಧ್ಯಮಧ್ಯಾಭ್ರದೊಳೊಗೆದ ತನುಂ ಕಾಣಿಸಲ್ ಕಾಣಿಪಕಾ೯೦ | ಶುಲಸಚ್ಛಂದ್ರಾ ತಪಂಗಳ್ ಕುಡೆ ಸುಧೆಯೊಗೆದಾನಂದಮಂ ನಿರ್ಮಳಾಂತ || ಸ್ಥಳದೊಳ್ ತೋರ್ಪಾತ್ಮಶೋಭಾ ಕಲಿತಜನಿತ್ಸೌ ಖ್ಯದಿಂ ನಿತ್ಯಯೋಗಂ |
ನೆಲೆಯಾಗಲ್ ಕೌತುಕಂದಾಳ್ದೆಸೆದೆ ತವ ಕೃಪಾನುಜ್ಞೆಯಿಂ ದೇಶಿಕಾರ್ಯ||
____ ___ ___ ___
{ Vol, 1, 154