ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



  ಶತಮಾನ]                      ಎಮ್ಮೆ ಬಸವ                          233                 
   
        ದಂತೆ ಪ್ರತೀತಿಯೂ ಇದೆ. ಆದುದರಿ೦ದ ಇವನ ಕಾಲವು ಸುಮಾರು                      
        1540 ಆಗಬಹುದು.
             ಈತನ ಕೀರ್ತನೆಗಳು ವಿಷ್ಣುಸ್ತುತಿರೂಪವಾಗಿಯೂ ವೇದಾಂತ               
        ಬೋಧಕವಾಗಿಯೂ ಇವೆ. ಇವು ಪ್ರಾಯಿಕವಾಗಿ ಕನ್ನಡನಾಡಿನಲ್ಲೆಲ್ಲಾ                 
        ಪ್ರಚಾರದಲ್ಲಿವೆ. ಈತನ ಹಾಡುಗಳಿಗೆ ಪುರಂದರವಿಠಲ ಎಂಬ ಅಂಕಿ                        
        ತವು ಗುರುತಾಗಿದೆ. ಇವುಗಳಲ್ಲಿ ಒಂದೆರಡನ್ನು ಉದಾಹರಿಸುತ್ತೇವೆ-
                      ರಾಗ ಪಂತುವರಾಳಿ – ಆದಿತಾಳ                            
             ಪಲ್ಲವಿ|| ಮುತ್ತುಕೊಳ್ಳಿರೋ ಜನರು ಮುತ್ತುಕೊಳ್ಳಿರೋ ||                  
             ಅನುಪಲ್ಲವಿ|| ಮುತ್ತು ಬಂದಿದೆ ಸಚ್ಚಿದಾನಂದಸ್ವರೂಪದಿವ್ಯಮುತ್ತು ||             
             ಜ್ಞಾನವೆಂಬ ದಾರದಲ್ಲಿ | ಪೋಣಿಸಿದ ದಿವ್ಯಮುತ್ತು |                          
             ಧನವ ಕೊಟ್ಟು ಕೊಂಬುದಿದನು | ಘನವಾದ ಭಕ್ತ ಜನರು ||1||                      
             ಕಟ್ಟಬಾರದು ಮೂಗಿಲಿ | ಇಟ್ಟು ಮೆರೆಯಬಾರದು |                      
             ಕಷ್ಟವಿಲ್ಲದೆ ಸೃಷ್ಟಿಗೊಡೆಯ | ಕೃಷ್ಣನೆಂಬ ಆಣಿಮುತ್ತು ||2||                            
             ಹಿಡಿಯಲಿಕ್ಕೆ ಸಿಲುಕದು | ಬೆಲೆಯಕಡೆಯ ಕಾಣದು |                     
             ಹಿಡಿಯಬಲ್ಲ ಪುರಂದರವಿಠಲ | ಒಡೆಯನೆಂಬ ದಿವ್ಯಮುತ್ತು ||3||
                     
                       ರಾಗ ಮಧ್ಯಮಾವತಿ- ಅಟತಾಳ                          
             ಪಲ್ಲವಿ|| ತನುವ ನೀರೊಳಗದ್ದಿ ಫಲವೇನು |                           
             ಮನದಲ್ಲಿ ದೃಢಭಕ್ತಿಯಿಲ್ಲದ ಮನುಜಗೆ ||                       
             ದಾನಧರ್ಮಂಗಳನು ಮಾಡುವುದೆ ಸ್ನಾನ | ಜ್ಞಾನತತ್ವಂಗಳ ತಿಳಿವುದೇ ಸ್ನಾನ | 
             ಹೀನಪಾಶಂಗಳ ಬಿಡುವುದೇ ಸ್ನಾನ | ಧ್ಯಾನದಿ ಮಾಧವನ ನಂಬುವುದೆ ಸ್ನಾನ||1|| 
             ಗುರುಗಳ ಶ್ರೀಪಾದತೀರ್ಥವೇ ಸ್ನಾನ | ಹಿರಿಯರ ದರ್ಶನವ ಮಾಡುವುದೆ ಸ್ನಾನ |     
             ಕರೆದು ಅನ್ನವನಿಕ್ಕುವುದೊಂದುಸ್ನಾನ |ಸಿರಿಹರಿಯ ಚರಣವ ನಂಬುವುದೇ ಸ್ನಾನ||2||  
             ದುಷ್ಟರ ಸಂಗವ ಬಿಡುವುದೊಂದು ಸ್ನಾನ|ಕಷ್ಟ ಪಾಪಂಗಳನು ಹರಿವುದೆ ಸ್ನಾನ|   
             ಸೃಷ್ಟಿಯೊಳಗೆ ಸಿರಿಪುರಂದರವಿಠಲನ | ಮುಟ್ಟಿ ಭಜಿಸಿ ಪುಣ್ಯಪಡೆವುದೇ ಸ್ನಾನ||8|
                                  ---                               
                         ಎಮ್ಮೆಬಸವ.1543                                 
                ಈತನು ಕಾಲಜ್ಞಾನವನ್ನು ಬರೆದಿದ್ದಾನೆ. ಇವನು ವೀರಶೈವಕವಿ.      
             ಜಂಬುನಾಥದೇವರ ಅನುಗ್ರಹದಿಂದ ಇವನು ತ್ರಿಕಾಲಜ್ಞಾನಿಯಾದನೆಂದೂ