ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಪದ್ಮರಸ 315

ಮಹಾವಾದಿಮದೇಭಮೃಗೇಂದ್ರ ತರ್ಕಶಬ್ದಾಗಮಜ್ಞ ಜೈನಸಂಹಿತಾಕರ್ತೃವಾದ ಶ್ರೀವತ್ಸಗೋತ್ರದ ಬ್ರಹ್ಮಸೂರಿಪಂಡಿತನು ರಾಜಪೂಜಿತನಾಗಿ ಪ್ರಸಿದ್ದಿ ಪಡೆದಿದ್ದನು. ಅವನ ಸಂತತಿಯಲ್ಲಿ ವೈದ್ಯಮಂತ್ರದೈವಜ್ಞಶಾಸ್ತ್ರಗಳಲ್ಲಿ ಕೋವಿದನಾದ ಪದ್ಮಣೋಪಾಧ್ಯಾಯನು ಜನಿಸಿದನು. ಇವನ ಮಗನೇ ಕವಿ ಪದ್ಮರಸ.ಇವನ ಗುರು ಭಟ್ಟಾಕಲಂಕ. ಈ ಗ್ರಂಥವನ್ನು ಕೆಲಸೂರ ಚಂದ್ರನಾಥಬಸ್ತಿಯಲ್ಲಿ ಮುಗಿಸಿ ಶಕ 1521 ನೆಯ ವಿಳಂಖಿಸಂವತ್ಸರದಲ್ಲಿ, ಎಂದರೆ 1599 ರಲ್ಲಿ, ಲಿಖಿಸಿದಂತೆ ಕವಿ ಹೇಳುತ್ತಾನೆ. ಕೆಲಸೂರಿಗೆ ಛತ್ರತ್ರಯಪುರ ಎಂಬ ಹೆಸರನ್ನೂ ಹೇಳಿದ್ದಾನೆ.ಇದು ಕವಿಯ ಸ್ಥಳವಾಗಿರಬಹುದು. 
 ಕವಿ ಜೈನನಾಗಿದ್ದರೂ ಗ್ರಂಥಾದಿಯಲ್ಲಿ ಶಿವಸ್ತುತಿಮಾಡಿರುವುದನ್ನು ನೋಡಿದರೆ ಈ ಗ್ರಂಥವನ್ನು ಅನ್ಯರಿಗೋಸ್ಕರ ಬರೆದಂತೆ ತೋರುತ್ತದೆ. ಈ ಕೃತಿಯ ವಿಷಯದಲ್ಲಿ 
    ಆಸರು ಪರಿಹಾರವಾಗೆ ಪೇಳಿದೆ- ಪಾಪ | ನಾಶವೆಂದುಸಿರಿತಿಲ್ಲಿದನು || 
    ಇದು ಪುಣ್ಯಸಾರಸತ್ಕಧೆಯಲ್ಲವದರಿಂದಾರೈದು ಪೇಲ್ದುದಿಲ್ಲ||
    ನೆನೆದರೆ ಭಾವ ಬಾರದೆ ಬಿಟ್ಟುದಿಲ್ಲರ | ಸನೆಗೆ ವಚನಗಳೊದಗದೆ | 
    ಅನುಮಾನಿಸಿದುದಿಲ್ಲ ಸತ್ಕಾವ್ಯವಲ್ಲೆಂದು | ಮನಮೊಲ್ದು 
ಸಂಪೂರ್ಣವೆಂದೆ ||
ಎಂದು ಕವಿ ಹೇಳುತ್ತಾನೆ. ಅಲ್ಲದೆ ಲಕ್ಷಣಬದ್ಧವಾಗಿರಬೇಕೆಂಬ ನಿಯಮವು ವಸ್ತುಕಗ್ರಂಧಗಳಿಗೆ ಅನ್ವಯಿಸುವಂತೆ ವಸ್ತುಕಗ್ರಂಥಗಳಿಗೆ ಅನ್ವಯಿಸುವಂತೆ ವಣ೯ಕಗ್ರಂಥಗಳಿಗೆ ಅನ್ವಯಿಸುವುದಿಲ್ಲ ಎಂಬಂಶವನ್ನು |  

ವಸ್ತುಕದೊಳಗೆ ಲಕ್ಷಣಲಕ್ಷಿತಗಳ ಎ | ನ್ಯಸ್ತವಲ್ಲದೆ ಪೆರಿತಿಲ್ಲ ||

 ಶಸ್ತ್ರವಾಗಿರಲರಿಯವು ವರ್ಣಕದೊಳು ದೋ | ಷಸ್ತೋಮಗಳ ನೋಡಬೇಡ || 

ಎಂಬ ಪದ್ಯದಲ್ಲಿ ಹೇಳಿದ್ದಾನೆ. ಪೂರ್ವಗ್ರಂಥಗಳಲ್ಲಿ ಮದನತಿಲಕ, ಮಲ್ಲಿಕಾರ್ಜುನವಿಜಯ, ಭರತೇಶ್ವರಚರಿತೆ, ಕುಮಾರರಾಮನಕಥೆ ಇವುಗಳ ಹೆಸರನ್ನು ಹೇಳಿದ್ದಾನೆ.

  ಇವನ ಗ್ರಂಥ
                ಶೃಂಗಾರಕಥೆ.
ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 5, ಪದ್ಯ 533, ಇದರಲ್ಲಿ ಕರ್ಣಾಟದೇಶದ ಸುಖನಿಲಯಪುರದ ದೊರೆ ರತ್ನಭೂಷಣನಿಗೂ ಗುಣ