ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ ಗೋವಿಂದ 395
ಇವನ ಗ್ರಂಥ
ನಂದಿಮಾಹಾತ್ಮ್ಯ ಇದು ವಾರ್ಧಕಪಟ್ಟದಿಯಲ್ಲಿ ಬರೆದಿದೆ. ನಮಗೆ ದೊರೆತ ಅಸಮ ಗ್ರಪ್ರತಿಯಲ್ಲಿ 23 ಸಂಧಿಗಳಿವೆ. ಒಟ್ಟು 50 ಸಂಧಿಗಳಿವೆ ಎಂದು ಕಾವ್ಯ ಕಲಾನಿಧಿಯ ಸಂಪಾದಕರು ಬರೆದಿದ್ದಾರೆ, ಇದರಲ್ಲಿ ನಂದಿಗೆ ಗಣನಾಥನಾದ ಕೂಷ್ಮಾಂಡನು ಶೈವಕ್ಷೇತ್ರಗಳ ಮಹಿಮೆಯನ್ನು ನಿರೂಪಿಸಿದಂತೆಯೂ ನಂದಿ ಪಾರ್ವತಿಗೆ ಸಂದೇಹವನ್ನು ಉಂಟುಮಾಡಿದ ತನ್ನ ಶಿವನಾ ರೂಪ್ಯವನ್ನು ಶಿವನ ಅನುಗ್ರಹದಿಂದ ನೀಗಿ ಮುನ್ನಿನಾಕೃತಿಯನ್ನು ಪಡೆ ದಂತೆಯೂ ಹೇಳಿದೆ. ಗ್ರಂಧಾವತಾರದಲ್ಲಿ ನಂದೀಶಸ್ತುತಿ ಇದೆ. ಬಳಿಕ ಕವಿ ನಾರಾಯಣ, ಪಾರ್ವತಿ, ವೀರಭದ್ರ, ಪಣ್ಮುಖ, ನಂದಿ, ಭೃಂಗಿ, ಗಣಪತಿ, ಸರಸ್ವತಿ ಇವರುಗಳನ್ನು ಸ್ತುತಿಸಿದ್ದಾನೆ. ತನ್ನ ಕೃತಿಯ ಉತ್ಕೃಷತೆಯನ್ನು ಈ ಪದ್ಯಗಳಲ್ಲಿ ಹೇಳಿಕೊಂಡಿದ್ದಾನೆ-- ವರಹಂಸೆಯಂತೆ ಮೃದುಪದಗತಿಗಳಿಂದ ಭಾ | ಸುರರಾಜಶುಕನಂತೆ ಮಧುರೋಕ್ತಿಯಿಂದ ಭೂ | ವರಗೇಹದಂತೆ ಬಹುಭಾವನಾಚಿತ್ರಬಂಧಗಳಿಂದ ಮಧುವಿನಂತೆ| ನಿರತಸುಮನೋಲ್ಲಾಸದಿಂದ ಸತ್ಛಲದಂತೆ || ಪರಮನವರಸದಿಂದ ಪ್ರಭುವಿನಂತಧಿಕಾರ್ಧ | ಭರಿತದಿಂದೆನ್ನ ಕೃತಿ ಕ್ಷಿತಿಗಲಂಕೃತಿಯಾಗಿ ರಾಜಿಪುದು ಸೋಜಿಗಮೆನೆ | ಎಳನೀರೊಳೈದೆ ತವರಾಜ ಬೆರೆದಂದದಿಂ | ಸುಲಿದ ರಸಗಂಧಿವಾಱೆಯೊಳು ಜೇನ್ದಳಿದಂತೆ | ಲಲಿತಮಾಧುರ್ಯದ್ರಾಕ್ಷಾಫಲಪ್ರಚಯಮಂ ರಸದಾಳೆರಸದೊಳೊಸೆದು || ಇಱುಹಿದಂತೊಲ್ದು ಚಿನಿವಾಲ್ಗೆನೆಗೆ ಸದ್ಭೃತಂ | ಗಲಸಿದಂದದೊಳೆನ್ನ ಕೃತಿರಸಂ ನಾಡೆ ಸವಿ | ಗೊಳಿಸುವುದು ನಿರ್ಮತ್ಸರದೊಳಾಲಿಸುವ ರಸಿಕವೃಂದಕಾನಂದಮಾಗಿ |
ಇವನ ಬಂಧವು ಪ್ರೌಢವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ...