58 ಕರ್ಣಾಟಕ ಕವಿಚರಿತ. [17 ನತು ಹಲ್ಲಿ ಮೈಸೂರುಗೊರೆಯಾದ ದೇವರಾಜನ ಚರಿತರು ಹೇಳಿದೆ. ಅದ ರಲ್ಲಿ ಕವಿ | - ಪಂಧದ ರಿಪುವೃಪಕುಲಗಿರಿವಜ್ರ ಭೂ ( ಕಾಂತ ಸದ್ಧರ್ಮಚಲಿತನ | ಕಂತುಸನ್ನಿಭದೇವರಾಜನರೇಂದ್ರನ | ಸಂತಸಕೃತಿಯ ಸೇತುವೆನು || ಎಂದು ಹೇಳಿ ಗ್ರಂಥದ ಉತ್ಕೃಷ್ಟತೆಯನ್ನು ಈ ಪದ್ಯದಲ್ಲಿ ಹೇಳಿದ್ದಾನೆ ಒಲಿದು ಲಾಲಿಪ ಮುಗುದೆಯ ಮುದ್ದು ನುಡಿಯೊ ಸದ್ವಿಲಸಿತವಾದ ಪಾಶ್ಚನೆಯೋ। ಎಳಬಾಲಕರ ತೊದಲ್ನುಡಿಯೋ ಚಾಮನು ಪೇಟ ಲಲಿತಿಸಿಂಗರದ ಸತ್ಯಧೆಯೋ || ಶೃಂಗಾರವಿಧಿ ನೀತಿಯಂಗ ವೀರತ್ವದು | ತುಂಗಸದನ ಮಂತ್ರಿಜನಕೆ | ಸಂಘಟಿಸುವ ಬುದ್ದಿಯೆನಿಸಿ ಮೆಡ್ವುದೀಮಂಗಳೋತ್ಸವಸುಚರಿತ್ರೆ | ಗ್ರಂಥಾದಿಯಲ್ಲಿ “ಪದ್ಮಗಿರಿಯೊಳು ನೆಲಸಿದ ದೇವನ” ಸ್ತುತಿ ಇದೆ, ಬಳಿಕ ಕವಿ ಪಶ್ಚಿಮರಂಗನಾಥ, ನರಸಿಂಹ, ಲಕ್ಷ್ಮೀಕಾಂತ, ತ್ರಿಣಯನ ಗಣೇಶ, ಸರಸ್ವತಿ, ಚೆನ್ನಿಗರಾಯ, ನಂಜುಂಡೇಶ, ಚಾಮುಂಡಿ, ಸೂರ್ ವರಪ್ಪಯಾಚಾರ್ ಇವರುಗಳನ್ನು ಹೊಗಳಿದ್ದಾನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ ದೇಶ ಭಂಗವೆಂದೆಂಬ ಹೆಸರು ಜಲನಿಧಿಯ ತ | ರಂಗದೊಳಲ್ಲದೇನೆಲನ | ತುಂಗವಿಕ್ರಮದೊಳಾಳುವ ನೃಪರೆಡೆಯಲಿ | ಸಂಘಟಿಸದು ಜಗವಹಿ'ಯ | ಪರ್ವತ ಚಂಡಕಿರಣಸೂಮಪಾವಕಧರ ವೃಷ | ಮಂಡಿತ ಶಿವಗಣೋಲ್ಲಾಸ | ಕುಂಡಲಿಯುತ ಮುನಿಸಂಚಯದಿಂದ | ಖಂಡಪರಶುವಿನಂತೆಸೆಗುಂ | ನಾಗವ, ಸು, 17oo ಈತನು ಮಾಣಿಕಸ್ವಾಮಿಚರಿತೆಯನ್ನು ಬರೆದಿದ್ದಾನೆ. ಅವನ ಜೈನಕವಿ; ಅವನ ತಂದೆ ಕೋಟಿಲಾಭಾನ್ವಯದ ಸೊಡ್ಡ ಸೆಟ್ಟ, ತಾಯಿ ಚ್ ಕಾಂಬಿಕೆ, ಇವನು ಸುಮಾರು 170೧ಲ್ಲಿ, ರ ಇದ್ದಿರಬಹುದೆಂದು ತೋರುತ್ತದೆ ಅವನ ಗ್ರಂಥ 3, ಪದ್ಮಗಿರಿ ಎಂದರೆ ಕಮಲಾಚಲವೆಂಬ ಹಿಮವಗ್ಗೋಪಾಲಸ್ವಾಮಿಬೆಟ್ಟ,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೨೧
ಗೋಚರ