ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

265ನೇ ಶತಮಾನ) ಕಿಕ್ಕೇರಿಯಾರಾಧ್ಯ ನಂಜುಂಡ

ನೊಲ್ಲದಿಹುದೇ ಶೀಲವಧ್ಯಾತ್ಮವಿಷಯಮಂ |           ಬಲ್ಲುದೆ  ಜ್ಞಾನವೀಶನೆ ದೇವನೆಂದಳವುದೇ ಸಕಲಶಾಸ್ತ್ರಂಗಳ || ಬಲ್ಲವಿಕೆ ಸತ್ಯವೆ ಚರಾಚರಕೆ ಮಾತೆ ತಾ || ನಲ್ಲದಿಲ್ಲೆಂದು ನಡೆವುದೆ ಮಾರ್ಗ ಹಲವು ಮಾ | ತಲ್ಲವೇಕೆಂದು ಶ್ರೀಗುರು ಶಿಷ್ಯನಂ ಬೋಧಿಸುತ್ತಿರ್ದನೊಂದೆಡೆಯೊಳು |

ಕಿಕ್ಕೇರಿಯಾರಾಧ್ಯ ನಂಜುಂಡ ಸು 1550 ಈತನು ಭೈರವೇಶ್ವರಕಾವ್ಯವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ ; ಇವನ ಸ್ಥಳ ಕಿಕ್ಕೇರಿ, ಇವನ ಗ್ರಂಥಕ್ಕೆ ವಿವರಣರೂಪ ವಾಗಿ ಶಾಂತಲಿಂಗದೇಶಿಕನು 1672 ರಲ್ಲಿ ಭೈರವೇಶ್ವರಕಾವ್ಯಕಧಾಸೂತ್ರ ರತ್ನಾಕರ ಎಂಬ ಗ್ರಂಥವನ್ನು ಬರೆದಿದ್ದಾನೆ. ಕವಿಯ ಕಾಲವು ಸುಮಾರು 1550 ಆಗಿರಬಹುದು, ಪೂರ್ವಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸುತ್ತಾನೆ ಬಾಣಮಯೂರನ ಜಾಣಗುಜ್ಜರನ ಬಿ | ಬ್ಲ್ಯಾಣ ಮಣನುರ್ಬು ಮಲಯ | ಕ್ಟೋಣೀಶನೇ ಕಟ್ಟಾಣಿಹರೀಶನುಕ್ತಿ | ಕಾಣಿಪುದೀಕೃತಿಯೊಳಗೆ || ಮತ್ತೊಂದುಕಡೆ ಪಾಲ್ಕುರಿಕೆಸೋಮನ ಹೆಸರನ್ನೂ ಹೇಳಿದ್ದಾನೆ. ಇವನ ಗ್ರಂಥ ಭೈರವೇಶ್ವರಕಾವ್ಯ ಇದು ಸಾಂಗತ್ಯದಲ್ಲಿ ಬರೆದಿದೆ ; ಸಂಧಿ 5 ಪದ್ಯ 127. ಇದರಲ್ಲಿ “ ಸಾಸಲಪುರದ ಸೋಮೇಶನುನ್ನತಭೈರವೇಶನಿಗೊಲಿದು ಕೈಲಾಸಾವಾಸ ಕೊಯ್ದ ಕಥೆ ” ಹೇಳಿದೆ. ಈ ಗ್ರಂಥದ ವಿಷಯವಾಗಿಯೂ ಕಥಾನಾಯ ಕನ ವಿಷಯವಾಗಿಯೂ ಭೈರವೇಶ್ವರಕಾವ್ಯಕಥಾಸೂತ್ರರತ್ನಾಕರದಲ್ಲಿ ಹೀಗೆ ಹೇಳಿದೆ~ - ಬಸವಾದಿಗಳು 777 ಪುರಾತನರಾಗಿ ಮರ್ತ್ಯಕ್ಕವತರಿಸಿ ವೀರಶೈವಾಚಾರದಿಂದ ಅಷ್ಟಾವರಣಮೊದಲಾದ ಶಿವಾಚಾರವನುದ್ಧರಿಸಿ ಮರ್ತ್ಯದಲ್ಲಿ ನಿತ್ಯಾನಂದನಿಜಲಿಂ ಗೈಕ್ಯರಾಗಿರುತ್ತು, ಮರ್ತ್ಯಲೋಕದ ಮಣಿಹವಂ ಪೂರೈಸಿ ಕೈಲಾಸಕ್ಕೆದಿದರೆ. ಬಖಿಕ ಖಿಲವಾದ ವೀರಶೈವಾಚಾರವನುದ್ಧರಿಸಲು ಶಿವನು ಕಾಲಸಂಹಾರನೆಂಬ ಗಣೇ 34