ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

437 ಶತಮಾನ ಸಿದ್ಧ ಮಲ್ಲೇಶ ವೆಂಕಾಯರಯ 1650 ಈತನು ಕೃಷ್ಣಲೀಲಾಭ್ಯುದಯವನ್ನು ಬರೆದಿದ್ದಾನೆ. ಇವನು ಮಾ ಧ್ವಕವಿ; ಇವನ ಪಿತಾಮಹನು ಜಾಮದಗ್ದಾ ವತ್ಸ ಗೋತ್ರದ ಅಳಗಾರ್, ತಂದೆ ವೆಂಕಾರ್, ತಾಯಿ ಶೇಪ್ರಂಬೆ, ಸಹೋದರ ನಾರಾಯಕಾರ, ಸ್ಥಳ ಪೆನುಗೊಂಡೆದೇಶದ ಕಡಗತೂರು, ತಾನು ಹರಿದಾಸನೆಂದು ಹೇಳಿಕೊಂಡಿ ದ್ದಾನೆ, ತನ್ನ ಗ್ರಂಥವನ್ನು ತಿರುಪತಿವೆಂಕಟರಮಣಸ್ವಾಮಿಯ ಅಂಕಿತ ದಲ್ಲಿ ಬರೆದಿದ್ದಾನೆ. ಇವನ ಕಾಲವು ಸುಮಾರು 650 ಆಗಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ ಕೃಷ್ಣಲೀಲಾಭ್ಯುದಯ ಇದು ಭಾಮಿನೀಪಟ್ಟದಿಯಲ್ಲಿ ಬರೆದಿದೆ. ಸಂಧಿ 51, ಪದ್ಯ 2543 ಇದರಲ್ಲಿ ಭಾಗವತದಶಮಸ್ಕಂಧದ ಕಥೆ ಹೇಳಿದೆ. + ಸಿದ್ದ ಮಲ್ಲೇಶ ಸು. 1650 ಇವನು ವೀರಸಂಗಯ್ಯನ ಚರಿತೆಯನ್ನು ಬರೆದಿದ್ದಾನೆ. ಈತನು ವೀರಶೈವಕವಿ ; ಗುರುವೀರಭದ್ರನ ಕರಜಾತ ಎಂದು ಹೇಳಿಕೊಂಡಿದ್ದಾನೆ. ಇವನು ಸುಮಾರು 1650 ರಲ್ಲಿ ಇದ್ದಿರಬಹುದು. ಇವನ ಗ್ರಂಥ | - ವೀರಸಂಗಯ್ಯನಚರಿತ ಅದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 5, ಪದ್ಯ 487. ಇದರಲ್ಲಿ ವೀರಸಂಗಯ್ಯನೆಂಬ ಶಿವಭಕ್ಕನ ಚರಿತ ಹೇಳಿದೆ. ಕಧಾಗರ್ಭ-ಬಿದುರೆಕೋಟೆಯ ಕಾಮಣ್ಣ ಸೋಮಲದೇವಿಯರ ಮಗನಾದ ಇವನಿಗೆ ಮದುವೆಮಾಡಲು ನಿಶ್ಚಯಿಸಿದ್ದ ಚಂದ್ರಿಣಿಯನ್ನು ಕೊಮಾರಪಟ್ಟಣದರಸು ಮಾಧವರಾಯನ ಮಗನಾದ ಭಾಸ್ಕರನು ತನಗೆ ಕೊಡಬೇಕೆಂದು ಪೀಡಿಸಲು ಅವನನ್ನು ಓಡಿಸಿ ವೀರಸಂಗಯ್ಯನಿಗೆ ಕೊಟ್ಟರು, ಇವನು ಪತ್ನಿ ಯೊಡನೆ ಹೋಗುತ್ತಿದ್ದಾಗ ಭಾಸ್ಕರನು ವೀರಶೈವವೇಷದಿಂದ ಬಂದು ಇವನನ್ನು ಇರಿಯಲು, ಇವನು ನಮಸ್ಕರಿಸಿ ಶಿವನನ್ನು ಮೆಚ್ಚಿಸಿ ಎಲ್ಲರೊಡನೆ ಕೈಲಾಸಕ್ಕೆ ಹೋದನು.