ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

498 ಮಾನ! ಚಿಕ್ಕು ಪಾಧ್ಯಾಯ ಇದು......... ..ಯಾದವಗಿರಿನಾರಾಯಣಪಾದಸೇವಾಧುರೀಣ. ..... .. ಚಿಕದೇವಮಹಾರಾಜಕೃಪಾಲಬ್ಧಸರ್ವಸ್ವತಂತ್ರ ಶ್ರೀಚಿಕುಪಾಧ್ಯಾಯವಿರಚಿತಮಪ್ಪ ಶುಕಸಪ್ತತಿಯೊಳ್. 16 ಪಶ್ಚಿಮರಂಗಮಾಹಾತ್ಮ್ಯ

ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 5, ಪದ್ಯ 317: ಇದರಲ್ಲಿ ಬ್ರಹ್ಮಾಂಡಪುರಾಣದೊಳಗೆ ಶಂಕರನಾರದಸಲವಾದರೂಪವಾದ ಶ್ರೀರಂಗ ಪಟ್ಟಣದ ಮಾಹಾತ್ಮ್ಯವು ಹೇಳಿದೆ. ಗ್ರಂಥಾದಿಯಲ್ಲಿ ವರದರಾಜಸ್ತುತಿ ಇದೆ. ಬಳಿಕ ಕವಿ ರಂಗನಾಯಕಿ, ಅನಂತ, ಗರುಡ, ವಿಪ್ವಕ್ಸೇನ 12, ಆಳ್ವಾರುಗಳು, ರಾಮಾನುಜ ಕಡಾಂಬಿ ಸಿಂಗರಾಚಾರ್ ಇವರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ

ವಿಷ್ಣುಸ್ತುತಿ

ಸರ್ವಗ ಸರ್ವೋತ್ಕೃಷ್ಟ ಸರ್ವಾತ್ಮಕ | ಸರ್ವಾರಾಧ್ಯನೆಂದೆನಿಸಿ | ಸರ್ವಸುಲಭ ತೋೞುವನೀತ ಅವನೀತ | ನೊರ್ವನೆ ಸಕಲಜೀವರಿಗೆ ||

17 ಶೃಂಗಾರಶತಕದ ಸಾಂಗತ್ಯ

ಪದ್ಯ 102. ಇದರಲ್ಲಿ ಕೃಷ್ಣನ ರೂಪವನೀಕ್ಷಿಸಿದ ಸ್ತ್ರೀಯರ ಸರಸಸಲ್ಲಾಪದಿರವನೊರೆದವನು” ಎಂದು ಕವಿ ಹೇಳುತ್ತಾನೆ, ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ...

ವಿರಹದಿಂದಲೆಗೆ ಕತ್ತುರಿ ದತ್ತುರಿ | ವರಚಂದನವಿಂಧನವು || ಉರ: ವೀಣೆಯದು ಸಾಣೆ ಕಪ್ೞು ರ ಕಾೞ್ೞುರ | ದಿರವಾಂತಿದೆ ಕೃಷ್ಣ ಸಲಹೋ | ಕುರುಳಬೆಡಂಗಿಯ ಸುಂಕ,ಮಗಂಧಿಯ | ಸರಸಯುತೆಯ ಸೌಖ್ಯವತಿಯ | ಎರಳೆಗ ಘಣ್ಣೆೞೆಯಳ ಎಳಮೆವೆತ್ತಸೆವಳ | ಪರಿಯ ಕೃಷ್ಣನೆ ಬಲ್ಲನೈಸೆ || ಕೂಡು ಕುಮುದನೇತ್ರೆ ನೋಡು ನುಲ್ನುಡಿಗಾರ್ತಿ | ಯೂಡಿೞಿದಪ್ಪೆನ್ನಸಿಯಳೆ | ಮೋಡಿಯನುೞು ಮೋಹನಾಂಗಿ ತುಂಒ ಕೃಷ್ಣ ! ನಾಡಿಸಿದಂತಾಡದಿಹರೇ || 18 ರಂಗಧಾಮಸ್ತುತಿ ಸಾಂಗತ್ಯ ಪದ್ಯ I02. ಇದು [ರಂಗನಾಥನ ಸ್ತುತಿರೂಪವಾಗಿದೆ; ಪಾದಾದಿಕೇ ಶಾಂತವರ್ಣನೆಯನ್ನು ಒಳಗೊಂಡಿದೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ-.