ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಕರ್ಣಾಟಕ ಕವಿಚರಿತೆ. [15 ನೆಯ

   ಬನದೊಳ್ ಪೂಗೊಯ್ವ ಪೂವಿಂ ತೊಡಿಗೆಯನೊಲವಿಂ ಮಾಲ್ಪಿ
                                  ತೂಗುಯ್ಯಲಂ ಮಾ || 
   ವಿನೊಳಾಡುತ್ತಿರ್ಪ ಬೆಟ್ಟೇರುವ ಮರವಡದು೯೦ ಕಾವಣಕ್ಕೋಪ ತಂತ |
   ಮ್ಮಿನಿಯರ್‌ ತೈತುಂಬುದಂ ವರ್ಣಿಸುಗೆ ಕವಿ ವನಕ್ರೀಡೆಯೊಳ್ ವರ್ಣನೀಯಂ||
                    ------
   ಸ್ಮರರಾಜಂ ವನಪಾಲನಾಗೆ ರತಿಲಾವಣ್ಯಪ್ರವಾಹೋತ್ಕರಂ |
   ಪರಿನೀರಾಗೆ ನಿರಂತರಂ ಋತುಗಳಾರುo ಕಾಪಿನಾಳಾಗೆ ಚೈ ||
   ತ್ರರಧೋದ್ಯಾನದ ಚೆಲ್ವನೋತ್ತರಿಸಿ ಕೇಳೀಶೈಲಕೇಳೀಸರೋ |
   ವರಕೇಳೀಗೃಹಮೆಂಬಿವಂ ತಳೆದು ಕೇಳೀನಂದನಂ ರಂಜಿಕುಂ ||
   ಪರಭಾಗಂ ಪೊಣ್ಮುವನ್ನಂ ತನುಲತೆ ಲತೆಯೊಳ್ ಕೂಡೆ ತುಂಗಸ್ತನo ಮಂ | 
   ಜರಿಯೊಳ್ ಮುಂಡಾಡೆ ಕಣ್ಣಳ್ ಬೆರಸೆ ಕುಸುಮದೊಳ್ ಕುಂತಳಂ
                                     ತುಂಬಿಯೊಳ್ ತ ||
   ಳ್ತಿರೆ ಪುಷ್ಪಾಮೋದದೊಳ್ ಸುಯ್ ಕಲಸೆ ಕರತಳಚ್ಛಾಯೆ ತಕೈಸೆಬಾಲಾಂ|
   ಕುರಮಂ ಪೊಗೊಯ್ಸಳೊರ್ವಳ್ ಲತೆಲತೆಗೊಲವಿಂ ಬಿರ್ದುವಂದಂ
                                      ತರಿರ್ದಳ್ ||
                 X11 ಜಲಕ್ರೀಡೆ
   ವರ್ಣನೀಯಾಂಶಗಳು-- 
   ಬೆಮರಂ ವಾರಿವಿಳಾಸಮಂ ಸಲಿಲಧಾರಾಯಂತ್ರವಾಗಿಪ್ರವೇ |
   ಶಮನಾಲೇಪನಕಂಪಮಂ ಮುಳಿಸುಲೀಲಾಯುದ್ಧಮಂ ಕಾಮಿನೀ ||
   ಶ್ರಮಮಂ ಮೂಡಿಮುರುoಗುತಿರ್ಪ ಪರಿಯಂ ಮೆಯ್ಯುರ್ಬುಮಂ ಚೆಲ್ವುಮo।
   ಕ್ರಮದಿಂದಂ ವೋರಿಮಟ್ಟು ನಿಂದ ನಿಲವಂ ಪೇಳ್ವಿರ್ ಜಲಕ್ರೀಡೆಯೊಳ್ ||
                 ---------
   ಇದು ಪಿರಿದುಂ ವಸಂತಸಬೆಯೌವನರತ್ನ ನಿಧಾನಮಂತಿದ | 
   ಲ್ತಿದು ಕುಸುಮಾಸ್ತ್ರಶಸ್ತ್ರಚಯಕೋಶಮಹೀಗೃಹಮಂತಿದಲ್ತು ಮ ||
   ಲ್ತಿದು ರತಿನಾಧಕಲ್ಪಲತಿಕಾಪ್ರಮದೈಕಕೃತಾಲವಾಲವೆಂ |
   ಒಂದನೆನಿಸಿತ್ತು ಸಂದಣಿಸಿ ನಿಂದಬಲಾವಳಿಯಿಂದೆ ಪೂಗೊಳಂ || 
   ಸ್ಪುರಿತಾಂಗಂ ಸೂಸ ಲಾವಣ್ಯಮನೆಸೆವಲರ್ಗಣ್ ಚಲ್ಲಮಂ ಸೂಸೆ ಲೀಲಾ |