ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೯೦
ರೋಶನ್ ಬೀಯ ಮಗುವಿಗಾಗಿ ಗುಳಿಗೆ-ಔಷಧ ಕೊಟ್ಟು, ಮಧ್ಯಾಹ್ನ ಮನೆಗೆ ಬೇಗ ಹೋಗಬಹುದೆಂದು ತಿಳಿಸಿ, ಹಾಗೆಯೇ ಸಂಜೆ ಮಗುವನ್ನು ಕರೆತಂದು ತೋರಿಸಲು ಹೇಳಿ, ಅವಸರವಸರವಾಗಿ ಹತ್ತರ.ಲೋಕಲ್ ಸಿಕೀತೇ ಅಂತ ಚಡಪಡಿಸುತ್ತ ಸ್ಟೇಶನ್ ಕಡೆ ಹೆಜ್ಜೆ ಹಾಕಿದಳು.
* * * * ಕಳೆದ ಹದಿನೈದಿಪ್ಪತ್ತು ವರ್ಷಗಳಲ್ಲಿ ಈ ಮುಂಬೈ ಮಹಾನಗರ ಎಷ್ಟೂಂದು ಬೆಳೆದಿದೆ.ಅಭಿವೃದ್ಧಿ ಹೊಂದಿದೆ ,ಜನಸಂಖ್ಯೆ ಎಷ್ಟು ಹೆಚ್ಚಾಗಿದೆ,ಎಷ್ಟೊಂದು ಹೊಸ ಉದ್ಯಮಗಳು - ಇತರ ಸಂಸ್ಥೆಗಳು ಹುಟ್ಟಿ ಬೆಳೆದಿವೆ . ಏನೆಲ್ಲ ಬದಲಾವಣೆಯಾಗಿದೆ. ಆದರೆ ಇಷ್ಟೆಲ್ಲ ಬದಲಾವಣೆಗಳ ಮಧ್ಯೆ ಏನೂ ವಿಶೇಷ ಬದಲಾಗದೆ ಎಂದಿನಂತೆಯೆ ನೀರಸ ಯಾಂತ್ರಿಕ ನಿರ್ಜೀವ ಬದುಕು ಸಾಗಿಸುತ್ತಿರುವಂತೆ ತೋರವವುಗಳೆಂದರೆ ಈ ಲೋಕಲ್ ಗಾಡಿಗಳು. ಮುಂಜಾನೆಗಳಲ್ಲಿ ತುಂಬಿ ತುಳುಕಿ , ಮಧ್ಯಾಹ್ನ ಜನಗಳನ್ನು ತುಂಬಿಕೊಂಡು ಓಡುತ್ತಿದ್ದ ಈ ಗಾಡಿಗಳು ಎಂದಿನಂತೆಯೇ ಇವೆ. ಎಷ್ಟು ಅವಸರ. ಎಷ್ಟು ಧಾವಂತ ಇವಕ್ಕೆ. ಎಂದೂ ಕೊನೆಯಿಲ್ಲದ ಓಡಾಟ ಇವುಗಳದು. ಎಂಥ ಬೇಸರದ ಬದುಕು.... ಮೊದಲು ಬಂದವರೆಲ್ಲ ಕೂತಿದ್ದ,ಆಮೇಲೆ ಬಂದವರೆಲ್ಲ ನಿಂತಿದ್ದ. ಒಟ್ಟು ಗಿಜಿಗಿಜಿ ಅನ್ನುತ್ತಿದ್ದ ಹೆಂಗಸರ ಡಬ್ಬಿಯಲ್ಲಿ ಶಶಿ ಹತ್ತಿದಾಗ " ಬರೀ ಬರೀ ಡಾಕ್ಟರ್ ಬಾಯೀ" ಅಂತ ಮರಾಠಿಯಲ್ಲಿ ರಾಗವಾಗಿ ಕರೆ ಬಂದತ್ತ ನೋಡಿದರೆ ಒಂದು ಕೈತುಂಬ ಫೈಲುಗಳು ಕಂತೆ ಹಿಡಿದು , ಇನ್ನೊಂದು ಕೈಯನ್ನು ತನ್ನ ಅವಿರತ ಲೆಕ್ಬರಿಗೆ ಬೇಕಾದ ಹಾವಭಾವ ಪ್ರದರ್ಶಿಸಲು ಉಪಯೋಗಿಸುತ್ತ ಮೂಲೆಯಲ್ಲಿ ಹೇಗೋ ಜಾಗ ಮಾಡಿಕೊಂಡು ಕೂತಿದ್ದ ಶಾಂತಾ ಆಪ್ಟೆ ಆಪ್ಟೆ ದಂಪತಿಗಳು ಶಶಿಯ ಪೇಶಂಟ್ಸ್ ಅಷ್ಟೇ ಅಲ್ಲ, ಆಕೆಯ ನೆರೆಯವರು ಸಹ. ಗಂಡ -ಹೆಂಡತಿ ಇಬ್ಬರೂ ವಕೀಲರು. ನಗುಮುಖದ ಆ ಉತ್ಸಾಹೀ ಹೆಂಗಸನ್ನು ಕಂಡರೆ ಶಶಿಗೆ ಯಾವಾಗಲೂ ಮೆಚ್ಚಿಕೆ.ಆಕೆ ನಕ್ಕು "ಹಲೊ" ಅಂದಳು. ನಂತರ ಶಶಿ ಕೇಳದೆಯೇ, ಗದ್ದಲದಲ್ಲಿ ಆಕೆಗೆ ತಾನು ಹೇಳುತ್ತಿರುವುದು ಕೇಳಿಸುವುದೋ ಇಲ್ಲವೋ ಎಂದು ಸಹ ವಿಚಾರಿಸುವ ಗೊಡವೆಗೆ ಹೋಗದೆ , ಶಾಂತಾ ಆಪ್ಟೆ ತನ್ನ ಅಸ್ಖಲಿತ ಮರಾಠಿಯಲ್ಲಿ ಹೇಳತೊಡಗಿದಳು, "ನಾಳಿನ ಸಂಡೇ ನಮ್ಮ ಮುಳುಂದದ ಲೇಡೀಜ್ ಕ್ಲಬ್ಬಿನ ವತಿಯಿಂದ ಮನರಂಜನಾ ಕಾರ್ಯಕ್ರಮ ಅದ ಡಾಕ್ಟರ್ ಬಾಯೀ, ನಿಮಗ ಹತ್ತು ರೂಪಾಯಿಯ ತಿಕೀಟು ಕೊಡ್ಲಿಕ್ಕೆ ನಿಮ್ಮ ಮನೀಗೆ