೧೨೦ ಹ, ಚಂಡಿಕ. ಲ್ಲ; ಕೈಸನ್ನೆ ಮಾಡಿ ಅವನಿಗೆ ನಿಲ್ಲಲಿಕ್ಕೆ ಕೂಡ ಹೇಳಲಿಲ್ಲ. ಮಂತ್ರಿಯು ಹೊರಟುಹೋದ ಬಳಿಕ ಒಂದು ಪ್ರಕಾರದ ನಿಶ್ಯಬ್ಬ ಕ್ರೋಧದ ತೆರೆ ಗಳು ಮಾತ್ರ ಆ ಸಭಾಗೃಹದಲ್ಲಿ ಉಂಟಾಗಿ, ಬಾದಶಹನ ಅ೦ ತಃಕರಣಕ್ಕೆ ಅವುಗಳ ಅಘಾತವು ಎಡಬಿಡದೆ ಆಗಹತ್ತಿತ್ತು, ಆಗ ಅಪರಾಹ್ನ ಸಮಯವು; ಆ ದಿವಸ ಬೆಳಗಿನಿಂದಲೂ ಒಂದೇ ಸವನೆ ಮಳೆ ಹಿಡಿದಿತ್ತು. ಮೇಘಾಚ್ಛಾದಿತವಾದ ಆ ದಿವಸ ದ ಮಾನ ಭಾವವು ಅಂದಿನ ಆ ಸಭಿಕರ ಮ್ಯಾನತೆಯಲ್ಲಿ ಬೆರೆತುಕೊ೦ ಡು ಸಭಾಮಂದಿರವನ್ನು ಮತ್ತಷ್ಟು ವಿಷಾದಪೂರ್ಣಮಾಡಿ ಬಿಟ್ಟಿತು. ಹೀಗೆ ಕೆಹೊತ್ತು ಕೇವಲ ಸ್ತಬ್ಧವಾಗಿದ್ದ ಆ ದರ್ಬಾರ ಗೃಹವು ಆಕಸ್ಮಿಕ ಬಿರುಗಾಳಿಯ ಯೋಗದಿಂದ ಸಮುದ್ರವು ತರಂಗಿತವಾಗು ವಂತೆ ಒಮ್ಮೆಲೆ ಸ್ಫೂರ್ತಿಗೊಂಡಿತು. ಆಗ ಇಬ್ಬರು ಸೈನಿಕರು. ಓಡುತ್ತೊಡುತ್ತ ಬಂದು ಆ ಸಭೆಯನ್ನು ಹೊಕ್ಕು-ಜಹಂಪನಾ, ನಬಾಬ ಗಾಯಸುದ್ದೀನನು ತೀರ ಹತ್ತಿರಕ್ಕೆ ಬರುತ್ತಿರುವನು, ನಿಮ್ಮ ದ್ವಿತೀಯ ಪುತ್ರನಾದ ನಬಾಬಜಲಾಲುದ್ದೀನನಿಂದ ಅವನನ್ನು ಒಮ್ಮೆ ಟೈಸುವದು ಆಗದಾಗಿದೆ. ಸೈನ್ಯದೊಡನೆ ಸೇನಾಪತಿಗೆ ಈಗಲೆ ಮು೦ದರಿದು ಹೋಗಲಿಕ್ಕೆ ಅಪ್ಪಣೆಯಾಗಬೇಕು, ಎಂದು ಕೇಳಿ ಕೊಂಡರು. ಈ ಸುದ್ದಿಯನ್ನು ಕೇಳಿ ಬಾದಶಹನ ಸೊ೦ಡೆರೆಸಿಣಗಿ ಕಟ್ಟಿ ಟ್ಟಿತು. ಆಗ ಅವನು ಭ್ರಾಂತ ಚಿತ್ತದಿಂದ-ಆಜೀಮಖಾ, ಆಜೇ ಮಖಾನ ಎಲೆ, ಅಜೀಮಖಾನನ್ನು ಕರೆ, ಎಂದು ಕೂಗಿದನು. ಆಗ ಹತ್ತಿರದಲ್ಲೇ ಇದ್ದ ನೂತನ ಸೇನಾಪತಿಯಾದ ಕರೀಮ ಉದ್ದೀನನು ಬಾದಶಹನನ್ನು ಕುರಿತು ತಮ್ಮ ಆಜ್ಞೆಯ ಪ್ರಕಾರ ಅವನು ಈ ಮೊದಲೇ ಪ್ರತಿಬಂಧಿಸಲ್ಪಟ್ಟಿರುವನು ಎಂದು ಉತ್ತರವ ಯಲು,
ಪುಟ:ಶಕ್ತಿಮಾಯಿ.djvu/೧೨೯
ಗೋಚರ