ಪುಟ:ನಡೆದದ್ದೇ ದಾರಿ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ದಾರಿ/ಮಳೆ ಬಂದಾಗ

೯೯

ಎರಡು ತಾಸು ತಮ್ಮ ಭೆಟ್ಟಿಗೆ ಬರಬೇಕಂತ ಹೆಳಿದ್ರು.ಆಮಾಲ್ಯ ಆತ ದಿನ ನಮ್ಮನಿಗೆ
ಬರಲಿಕತಿದ್ದ.ಹಾಂಗ ಖರೇ ಜಂಟಲ್ ಮನ್ ಇದ್ದ ಆತ.ಗ್ಯ್ರಾಜುಯೇಟ್ ಇದ್ದ.
ಛಲೋ ಕೆಲಸನೂ ಇತ್ತು. ಆತಗ ಹುಚ್ಚು ಹಿಡಿದದಂತ ಮಂದಿ ಅಂತಿದ್ರು.ನಮ್ಮ
ಕಾಕಾ ಮಾತ್ರ ಅವನ ಜೋಡಿ ಅಗದೀ ಕೇರ್ ಪುಲ್ ಆಗಿ ಮಾತಾಡತಿದ್ರು ಅವನ
ಮನಸಿನ್ಯಾಗ ಸದಾ ಕಾಡುವ ಹಳೇ ನೆನಪು ಕಡಿಮೆ ಮಾಡಲಿಕ್ಕೆ ಪ್ರಯತ್ನ ನಡೆಸಿದ್ರು.
ನಾನು ಅವರಿಗೆ ಸಹಾಯ ಮಾಡತಿದ್ದೆ."
"ನೀನು ?"
ಹ್ಞೂ,ಇಷ್ಟ್ಯಾಕ ಆಶ್ಚರ್ಯ ? ಮೆಂಟಲ್ ಪೇಶಂಟ್ಸ್ ಬಗ್ಗೆ ನನಗ ಆಸ್ಥಾ
ಇದ್ದದ್ದು ನಿನಗ ಗೊತ್ತದ. ನನ್ನ ಕಾಲೇಜಿನ ಕೆಲಸಾ ಮುಗಿಸಿ ಉಳಿದ ಹೊತ್ತಿನ್ಯಾಗೆಲ್ಲಾ
ನಾ ಕಾಕಾ ಅವರ ಸೈಕಿಯಾಟ್ರಿಕ್ ಕೆಲಸದೊಳಗ ಸಹಾಯ ಮಾಡೋದರಾಗ ಇರ್ತೀನಿ.
ಈ ಕೇಸಿನ್ಯಾಗಂತೂ ನನಗ ಮೊದಲಿನಿಂದ್ಲೂ ಇಂಟರೆಸ್ಟ್ ಅನಸಿತ್ತು. ದಿನಾ ಅವನ
ಜೋಡಿ ಮಾತಾಡಿ ಅವನಿಗೆ ಸಮಾಧಾನ ಹೇಳೂದು. ಏನರೆ ಪುಸ್ತಕಾ ಓದ್ಲಿಕ್ಕೆ
ಕೊಡೂದು, ಓದಿದ್ದರ ಬಗ್ಗೆ ಚರ್ಚಾ ಮಾಡೂದು- ಇಂಥಾದ್ದೆಲ್ಲಾ ನಾ
ಮಾಡತಿದ್ದೆ."
"ಈ ಚಿತ್ರಾ ಆವಾಗ ತಗದದ್ದೇನು?"
"ಹ್ಞೂ, ಮೊದಲ್ನೇ ಸರೆ ಆತ ನಮ್ಮ ಮನಿಗೆ ಬಂದಾಗ ಮಳೆಗಾಲ.ಮುಂಬಯಿ
ಮಳೆ ನಿನಗ ಗೊತ್ತದs ಅಲ್ಲ, ಧೋ-ಧೋ ಸುರಿತಿತ್ತು. ನಾ ನನ್ನ ರೂಮಿನ್ನಾಗ
ನಿಂತು ಹೊರಗಿನ ರಸ್ತೆ ನೋಡುತಿದ್ದೆ.ಆತ ಬರತಾ ಇದ್ದ....ಪೂರಾ ಒದ್ದೆಯಾಗಿದ್ರೂ
ಏನೂ ಆಗಿಲ್ಲ ಅನ್ನವರ್ಹಾಂಗ ಸಾವಕಾಶ ನಡಕೋತ ಹೊರಟಿದ್ದ. ಅವನನ್ನ ನೋಡಿದರ
ಮಳೆಯೊಳಗ ಹೊರಟೇನಿ ಅನ್ನೋ ‍‍ಜ್ಣಾನನೇ ಇದ್ಧಾಂಗಿರಲಿಲ್ಲ. ಆ ಚಿತ್ರ ಒಮ್ಮೆಲೇ
ನನ್ನ ಒಳಗ-ಒಳಗ ಹೋಯ್ತು."
"ಕಡೀಕೆ ಅವನ ಜಡ್ಡು ನೆಟ್ಟಗಾತೇನು?"
"ಓ, ಒಂದು ವರ್ಷ ಸತತ ಪ್ರಯತ್ನ ಮಾಡಿದ್ವಿ. ಅದನ್ನ ನಾಳೆ ಹೇಳಿದರ
ಆದೀತಲ್ಲ ? ನಿನ್ನ ಯಜಮಾನರು ಬಂಧಾಂಗ ಕಾಣಿಸ್ತದ ನೋಡು."
'ಯಜಮಾನರು' ಶಬ್ದವನ್ನುಚ್ಚರಿಸುವಾಗ ತನ್ನ ಧ್ವನಿಯಲ್ಲಿ ವ್ಯಕ್ತವಾದ
ವ್ಯಂಗ್ಯವನ್ನು ಸರೋಜ ಗಮನಿಸಲಿಲ್ಲ ವೆಂಬುದು ಅವಳ ತಟ್ಟನೆ ಎದ್ದು ಓಡಿದ್ದರ
ಮೇಲಿಂದಲೇ ತಿಳಿಯಿತು ಸಹನಾಗೆ. ಆಕೆ ನಕ್ಕು ತನ್ನು ಕೆಲಸ ಮುಂದುವರಿಸಿದಳು.
*
*