೨೮. ಒ೮ ವಿದ್ಯಾರ್ಧಿ ಕರಭೂಷಣ ವನ ತಂದೆಯಾದ ಎರಡನೆಯ ಫಿಲಿಪ್ಸ್ ಎಂಬವನು, ಈ ಪ್ರಪಂಚವನ್ನೆಲ್ಲ ಗೆಲ್ಲಬೇಕೆಂದು, ಲಕ್ಷಾಂತರ ಸೈನ್ಯವನ್ನು ಕೂಡಿಸಿ , ದಿಗ್ವಿಜಯಕ್ಕೆ ಹೊರ ಡುವ ಪ್ರಯತ್ನವನ್ನು ಮಾಡಿದನು. ಡಿಮಾಸ್ತಸೀಸನು, ಈ ದಿಗ್ವಿಜಯ ದಿಂದುಂಟಾಗತಕ್ಕ ಅನರ್ಧಗಳನ್ನು ವರ್ಣಿಸಿ, ಕೋಟ್ಯಂತರ ಜನರು ವಿತಂ ತುಗಳಾಗುವರೆಂಬುದಾಗಿಯೂ, ಅನೇಕ ಕೋಟಿ ಬಾಲಕರು ಅನಾಧರಾ ಗುವರೆಂಬುದಾಗಿಯೂ, ಕುಟುಂಬಭರಣಮಾಡತಕ್ಕವರು ಸಾಯುವುದ ರಿಂದ ಅನೇಕ ಕೋಟಿ ಜನಗಳು ಅನ್ನೋದಕಗಳಿಗೂ ಮಾರ್ಗವಿಲ್ಲದೆ ಮೃತ ಪಡುವರೆಂಬುದಾಗಿಯೂ, ಇಂಧ ಪಾಪಕೃತ್ಯಗಳಿಗೆ ಕಾರಣವಾದ ದಿ| ಜಯಾರ್ಧವಾದ ಈ ಅಭಿಷೇಣನದಿಂದ ಬಹುಜನ ಯೋಧರೂ ಕೂಡ ಸಾಯಬಹುದೆಂಬುದಾಗಿಯೂ, ಇಂಧ ಘೋರವಾದ ಪಾದಗಳಿಗೆ ಗುರಿ ಯಾಗಿ ಇಹಪರಗಳನ್ನು ಕಳೆದು ಕೊಳ್ಳುವುದು ಸುತರಾಂ ಯೋಗ್ಯವಾದು ದಲ್ಲ ಎಂಬುದಾಗಿಯ, ಗ್ರೀಸ್ ದೇಶದ ಯೋಧರಿಗೆ ಉಪದೇಶಮಾಡಿದನು. ಅವರಲ್ಲಿ ಬಹುಜನರು, ಚಕ್ರವರ್ತಿಯು ಆಜ್ಞೆಯನ್ನುಂಸಿ, ಈ ಪಾಸ ಕೃತ್ಯಗಳನ್ನು ಮಾಡುವುದಕ್ಕೆ ತಾವು ಒಡಂಬಡುವುದಿಲ್ಲ ವೆಂದು, ನಿರ್ಭಯ ವಾಗಿ ಐಕಮತ್ಯದಿಂದ ಹೇಳಿದರು. ಈ ಡಿಮಾಸ್ತನೀಸನ ಮೇಲೆ ಎರಡ ನೆಯ ಲಿಪ್ಪಿಗೆ ಬಹಳ ಕೋಪವ್ರಂಟಾಯಿತು. ಇವನನ್ನು ಕೊಪ್ಪಿಸಬೇ ಕೆಂದು, ಎದುಜನ ಕಟುಗರನ್ನು ಕರೆಯಿಸಿ ಇವನ ತಲೆಯನ್ನು ತಂದು ಕೊಟ್ಟರೆ ಆ ಐದು ಜನರಲ್ಲಿ ಪ್ರತಿಯೊಬ್ಬನಿಗೂ ಲಕ್ಷ ವರಹಗಳನ್ನು ಕೊಡು ವದಾಗಿ ಹೇಳಿದನು ಅವರು ಅದಕ್ಕೆ ಒಪ್ಪಿ, ರಾತ್ರಿ ಎರಡು ಘಂಟೆಯ ವೇಳೆಯಲ್ಲಿ ಡಿಮಾಸ್ತನೀಸನ ಮನೆಗೆ ಹೋಗಿ ಬಾಗಿಲು ತಟ್ಟಿದರು. ಅವನೇ
ಪುಟ:ವಿದ್ಯಾರ್ಥಿ ಕರಭೂಷಣ.djvu/೩೬
ಗೋಚರ