ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೬೫ ಅರ್ಹನಾಗುವನು. ಎಷ್ಟು ವಿದ್ಯಾವಂತನಾದಾಗ್ಯೂ, ಎಷ್ಟು ಜ್ಞಾನಶೀಲ ನಾದಾಗ್ಯೂ, ಶ್ರದ್ಧೆಯಿಂದ ಕೆಲಸಮಾಡದಿರತಕ್ಕವನು, ಎಂದಿಗೂ ಒಳ್ಳೆಯ ಪದವಿಗೆ ಬರುವುದಿಲ್ಲ. ಭಾರತೀಯರಾದ ನಮ್ಮ ಅಜಗರಾವಸ್ಥೆಯನ್ನು ನೋಡಿ, ಪಾಶ್ಚಾತ್ಯರು ಪರಿಹಾಸಮಾಡುವುದುಂಟು. ಇತರ ಜನಗಳು ಓಡುತಿರುವಾಗ, ನಾವು ನಡೆಯುತ್ತೇವಂತೆ ! ಇತರ ಜನಗಳು ನಡೆಯು ತಿರುವಾಗ, ನಾವು ಕೂರುವುದರಲ್ಲಿ ಆಸಕ್ತರಾಗುತ್ತೇವಂತೆ !! ಕುಳಿತಿರ ತಕ್ಕವರನ್ನು ನೋಡಿ ನಾವು ಮಲಗುತ್ತೇವಂತೆ !!! ಈ ರೀತಿಯಲ್ಲಿ ನಮ್ಮನ್ನು ಪರಿಹಾಸಮಾಡುತ್ತಾರೆ. ಈ ಪರಿಹಾಸಕ್ಕೆ ನಾವು ವಿಷಯರಲ್ಲ ವೆಂದು ಹೇಳುವುದೂ ಕಷ್ಟವಾಗಿರುವುದು, ಪಾಶ್ಚಾತ್ಯರು, ಯಾವ ಕೆಲನವನ್ನು ಹಿಡಿದಾಗ ಬಹಳ ಶ್ರದ್ದೆಯಿಂದ ಅದನ್ನು ಮಾಡುವರು ; ಬಹಳ ದ್ರವ್ಯವನ್ನು ಸಂಪಾದಿಸುವರು ; ಬಹಳ ಸುಖವನ್ನೂ ಪಡೆಯು ವರು, ನಾವು, ಸಂಪಾದಿಸುವುದರಲ್ಲಿಯೂ, ಸಂಪಾದಿಸಿದುದನ್ನು ಅನುಭ ಎನುವುದರಲ್ಲಿಯೂ, ಬಹಳ ಹಿಂದಾಳುಗಳಾಗಿರುತ್ತೇವೆ. ಪ್ರವೃತ್ತಿ ಮಾರ್ಗಗಳಲ್ಲಿ ಪಾಶ್ಚಾತ್ಯರು ಹೇಗೆ ಚಕ್ರವರ್ತಿಗಳಾಗಿರುವರೋ, ಹಾಗೆ ನಿವೃತ್ತಿ ಮಾರ್ಗದಲ್ಲಿ ನಾವು ಚಕ್ರವರ್ತಿಗಳಾಗಿರುವೆವು, ವೈರಾಗ್ಯಚಕ್ರ ವರ್ತಿಗಳಾಗಿರಬೇಕೆಂಬ ಅಭಿನಿವೇಶವೇ, ನಮ್ಮನ್ನು ಹೀನಸ್ಥಿತಿಗೆ ತಂದಿರು ವುದು, ಈ ಲೋಕದಲ್ಲಿ ಧರ್ಮದಿಂದ ಕೆಲಸಮಾಡಿ ಸಕಲಸೌಖ್ಯಗಳನ್ನೂ ಧರ್ಮದಿಂದ ಅನುಭವಿಸುವುದೇ ಲೋಕಾಂತರಕ್ಕೆ ಸಾಧಕವೆಂದು ತಿಳಿದು ಕೊಂಡು, ಪಾಶ್ಚಾತ್ಯರು ಈ ಲೋಕದ ಸುಖಪ್ರಾಪ್ತಿಗೆ ಸಾಧಕವಾದುವು ಗಳನ್ನು ಆರ್ಜಿಸುವುದರಲ್ಲಿ ಬದ್ದಾದರರಾಗಿರುತ್ತಾರೆ, ಈ ಲೋಕದ ಬ