ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ವಿದ್ಯಾರ್ಥಿ ಕರಭೂಷಣ ತ್ಪಾಟನಮಾಡಬೇಕೆಂದು ಯಾರು ಪ್ರಯತ್ನ ಮಾಡಿದಾಗ, ಆ ಪ್ರಯತ್ನ ದಿಂದ ಅವರೇ ಮೂಲೋತ್ಪಾಟನಮಾಡಲ್ಪಡುವರು. ಪೂರ್ವದಲ್ಲಿ ಪ್ರಹ್ಲಾದನನ್ನು ಕೊಲ್ಲಬೇಕೆಂದು, ಅವನ ತಂದೆ ಪ್ರಯತ್ನ ಮಾಡಿದನು, ಅದರಿಂದ ತಾನೇ ದೇಹವನ್ನು ಬಿಡಬೇಕಾಯಿತು. ರಾವಣನು ಜಿತೇಂದ್ರಿಯನಾಗಿದ್ದಾಗ ಮಹೋನ್ನ ತಪದವಿಯನ್ನು ಹೊಂದಿ ದನು; ಅಜಿತೇಂದ್ರಿಯನಾಗಿ ಸೀತೆಯನ್ನು ಮೋಹಿಸಿ ತನ್ನ ಸರ್ವಸ್ವವನ್ನೂ ಕಳೆದುಕೊಂಡು ದುದಲ್ಲದೆ, ಪ್ರಾಣವನ್ನೂ ಬಿಟ್ಟನು. ದುರಾಶೆಯೆಂಬ ಪಿಶಾಚನಿಂದ ಹಿಡಿಯಲ್ಪಟ್ಟು, ಕೌರವರು, ಧರ್ಮಿಷ್ಟರಾದ ಪಾಂಡವರಿಗೆ ಐದು ಗ್ರಾಮಗಳನ್ನೂ ಕೊಡುವುದಿಲ್ಲವೆಂದು ಹೇಳಿದರು; ಕೊನೆಗೆ ಅವ ರೆಲ್ಲರೂ ನಾಮಾವಶೇಷವಾದರು, ಇಂತಹ ಉದಾಹರಣೆಗಳು ಪ್ರತಿದಿನವೂ ಗೊತ್ತಿಲ್ಲದಷ್ಟು ನಡೆಯುತಲಿರುವುವು; ಇವುಗಳೆಲ್ಲ ಪ್ರತಿಯೊಬ್ಬರ ಅನು ಭವಕ್ಕೂ ಬರುತಲಿರುವುವು. ಆದುದರಿಂದ, ಬರಿಯವಿದ್ಯೆಯಿಂದ ಇಷ್ಟಾ ರ್ಧಸಿದ್ದಿಯಾಗುವುದೆಂದು ತಿಳಿದು ಕೊಳ್ಳುವುದು ತಪ್ಪು; ವಿದ್ಯೆಯ ಜತೆಗೆ ವಿನಯಾದಿಸದ್ಗುಣಗಳೂ ಅತ್ಯಾವಶ್ಯಕಗಳು, ಈ ವಿಷಯವನ್ನು ವಿದ್ಯಾ ರ್ಥಿಗಳು ಯಾವಾಗ್ಲ ಮನಸ್ಸಿನಲ್ಲಿಟ್ಟು ಕೊಂಡು ಅವುಗಳನ್ನು ಸಂಪಾದಿ ಸುವುದರಲ್ಲಿ ಉದ್ಯುಕ್ತರಾಗಬೇಕು. ಪ್ರಾಣಿಗಳಿಗೆ ದೇವರು ಕೊಟ್ಟಿರತಕ್ಕ ಶಕ್ತಿಗಳಲ್ಲಿ ಅತ್ಯಂತೋಷಯು ಕ್ರವಾದುದು ಜ್ಞಾಪಕ ಶಕ್ತಿಯು, ಈ ಶಕ್ತಿಯ ಅತ್ಯುತ್ತಮ ಸ್ಥಿತಿಯಲ್ಲಿರ ಬೇಕಾದರೆ, ವೀರನಿಗ್ರಹರೂಪವಾದ ಬ್ರಹ್ಮಚರವು ಅತ್ಯಾವಶ್ಯಕವು, ಈ ಬ್ರಹ್ಮಚರದ ರಕ್ಷಣಕ್ಕೋಸ್ಕರವೇ, ನಮ್ಮ ಪೌಲ್ವಿಕರು ಗುರುಕುಲವಾಸ