೬೨ ವಿದ್ಯಾರ್ಥಿ ಕರಭೂಷಣ ಕರಭೂಷಣ ಶ್ರೀರಾಮನು, ವಿದ್ಯಾಭ್ಯಾಸವನ್ನು ಪೂರಯಿಸಿ, ತೀರ್ಥಯಾತ್ರೆಗೆ ಹೋಗಿ, ಪ್ರಪಂಚದಲ್ಲಿ ಸೃಷ್ಟಿ ಸ್ಥಿತಿ ಪ್ರಳಯಗಳು ಹೇಗೆ ನಡೆಯುತ್ತಿವೆಯೋ ಅದನ್ನು ಪರಿಶೀಲಿಸಿ, ಚಿಕ್ಕ ಪ್ರಾಣಿಗಳು ದೊಡ್ಡ ಪ್ರಾಣಿಗಳಿಗೆ ಹೇಗೆ ತುತ್ತಾಗುತ್ತಲಿವೆಯೋ, ಶಕ್ತಿಯುಳ್ಳ ಪ್ರಾಣಿಗಳು ದುರ್ಬಲವಾದ ಪ್ರಾಣಿ ಗಳನ್ನು ಹೇಗೆ ಹಿಂಸಮಾಡುತ್ತವೆಯೋ, ದುರ್ಬಲವಾದ ಪ್ರಾಣಿಗಳು ಬಲ ವುಳ್ಳ ಪ್ರಾಣಿಗಳದೆಸೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದಾಗ್ಯೂ ಅನೇಕ ಸಂದರ್ಭಗಳಲ್ಲಿ ಹೇಗೆ ಭಗ್ನ ಮನೋರಧಗಳಾಗಿ ಪರಿ ಇಮಿಸುತ್ತವೆಯೋ, ಜನಗಳು ಕಾರೈತಃ ಸ್ವಕಾರ್ ಧುರಂಧರರಾಗಿದ್ದು ಗೊಂಡು ತಾವೇ ಅಭಿನವಹರಿಶ್ಚಂದ್ರರಂತೆ ಹೇಗೆ ನಟಿಸುವರೋ, ಇವರ ನಟನೆಗೆ ಊಹಾಪೋಹಗಳಿಲ್ಲದವರು ಹೇಗೆ ಮರುಳಾಗುತ್ತಾರೋ, ಧರ್ಮಕ್ಕೆ ಲೋಪವೂ ಅಧರ್ಮಕ್ಕೆ ಪ್ರಾಶಸ್ಯವೂ ಹೇಗೆ ಉಂಟಾಗಿರು ವುವೋ, ಇವುಗಳನ್ನೆಲ್ಲ ನೋಡಿ, ಇಂಧ ಅಧರ್ಮಮಯಪ್ರಪಂಚದ ಸೃಷ್ಟಿ ಸ್ಥಿತಿ ಪ್ರಳಯಗಳಿಗೆ ದೇವರು ಎಂದಿಗಾದರೂ ಕಾರಣಭೂತನಾದಾನೇಎಂಬ ಸಂದೇಹವನ್ನು ಹೊಂದಿ, ಆಹಾರವಿಹಾರಗಳಲ್ಲಿಯೂ ಕೂಡ ಉದಾ ಸೀನನಾಗಿ, ಇಂಧ ಪ್ರಪಂಚದಲ್ಲಿ ಬದುಕುವುದಕ್ಕಿಂತ ದೇಹವನ್ನು ಬಿಡುವು ದುತ್ತಮವೇ ಅಲ್ಲವೇ ಎಂಬುದನ್ನು ಪರಾಲೋಚಿಸುತ್ತ, ಸ್ನಾನಾದಿ ಗಳನ್ನು ಕೂಡ ಬಿಟ್ಟು, ತಾಯಿತಂದೆಗಳು ಪ್ರವೃತ್ತಿ ಮಾರ್ಗಕ್ಕೆ ಬರುವಂತೆ ಉಪದೇಶ ಮಾಡಿದಾಗೂ ಅದನ್ನು ಕೇಳದೆ, ಜಡಭರತನಂತೆ ಅಂತರ್ಮು. ನಾಗಿದ್ದಾಗ, ವಿಶ್ವಾಮಿತ್ರರು ಬಂದು ದುಷ್ಟನಿಗ್ರಹಾರ್ಧವಾಗಿ ಶ್ರೀರಾಮ ಲಕ್ಷ್ಮಣರನ್ನು ಕಳುಹಿಸಬೇಕೆಂದು ಪ್ರಾರ್ಧಿಸಲು, ಶ್ರೀರಾಮನು ಒಂದರೆ
ಪುಟ:ವಿದ್ಯಾರ್ಥಿ ಕರಭೂಷಣ.djvu/೬೦
ಗೋಚರ