ಪುಟ:ಕನ್ನಡದ ಬಾವುಟ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇದರ ಮಡಿಲೊಳಗಿಂದ ಅದರ ತುದಿಯೆಲೆಯಿಂದ ತೂಗಿ ಜೋಲಾಡುತಿಹ ಹೂ ಗೊಂಚಲಿಂದ ಕೈನೀರ ಹುಯ್ಯುತ್ತೆ ಬೆಳಸಿರುವ ಲತೆಯಿಂದ ಪರದೇಶಗಳ ಹೂವು ಕಾವಣಗಳಿ೦ದಉಲಿಯುತಿವೆ ನಲಿಯುತಿವೆ ಚೀರುತಿವೆ ಕೂಗುತಿವೆ ಕಣ್ಮುಚ್ಚಿ ಕೊರಲೆತ್ತಿ ಹಿಗ್ಗಿ ಹಾಡುತಿವೆ ನೂರಾರು ದನಿಗಳಲಿ ಏರಿನಲಿ ತಗ್ಗಿನಲಿ ಷಡ್ಡ ದಲಿ ಮಂದರದಿ ತಾರ ಮೂರರಲಿ. ಗಿಳಿಯು ಸ೦ಪಿಗೆಯಿಂದ ಕೋಗಿಲೆಯು ಮಾವಿಂದ ತುಂಬಿಗಳು ಕತ್ತಲೆಯ ಸುರಹೊನ್ನೆಯಿಂದ ಹಸುಳೆ ಚೆ೦ಗುಡಿಗೈಯ ಮೃದುಲತೆಯ ಮೂಾರಿಸುವ ನರೆಮೈಯ ಕೆಂಗಣ್ಣ ಹಕ್ಕಿ ಕೊಳದಿಂದ. ಹೊಂಬಕ್ಕಿ ಕೆಂಬಕ್ಕಿ ಪಚ್ಚೆನಣ್ಣದ ಹಕ್ಕಿ * ಲೆಕ್ಕವಿಲ್ಲದ ರಂಗು ಚುಕ್ಕೆವಕ್ಕಿ ಕಿರಿಗೊರಲ ಹೆಗೊರಲ ಸವಿಗೊರಲ ಕಟುಗೊರಲ ಬಿರಿಗೊರಲ ಕಿರಿಚಿನಲಿ ಕೀರ್ವ ಹಕ್ಕಿ. ಮಧುಮಾಸವೆಲ್ಲಿದ್ದರಲ್ಲೋಡಿ ಕೆರೆಯುತ್ತೆ ಇಲ್ಲಿ ಚೈತ್ರವು ಬರಲು ಬರುವ ಹಕ್ಕಿ ಸುಗ್ಗಿ ಸೊಬಗನ್ನುಳಿದು ಇರಲಾರೆನೆನ್ನು ತೆ ದೇಶ ದೇಶಗಳ ಲೆವ ವಲಸೆವಕ್ಕಿ, ಎಲ್ಲವೂ ಕರೆಯುತಿವೆ ವನಕೆ ನೆಳಲಾಸರೆಗೆ ನೆಲದಲ್ಲಿ ಸುರಿದಿರುವ ಹೂವು ಹಾಸುಗೆಗೆ ಮೇಲಿಂದ ಬೇಯಿಸುವ ಬೇಸಗೆಯ ನೇಸರಿನ ಹಿಂಸೆಗಳ ನೀಗಿಕೊಳಿರೆನ್ನು ತ್ತಿವೆ. ಕೇಳಿ, ಕೇಳಿರಿ ಅವನು, ಹುಯಿಲು ಮಾರುಲಿಗಳನು ಓಡಲ ಸಂತಸ ಸೂಸಿ ಸಾರ್ವ ಕೆಲೆಗಳನ್ನು ದಿನದುಣಿಸ ತರುವುದಕೆ ಹೋಹುದನು ಮರೆತಿಲ್ಲೆ ಹುರುಡಿನಲಿ ಹಬ್ಬವನ್ನು ನಡೆಸುತ್ತಿವೆ. ಎಳೆಯ ಮಾವಿನ ಚಿಗುರನಗಿದಿರುವ ಕೋಗಿಲೆಯು ಮದದೊಂದೆ ಉಸಿರಲ್ಲಿ ಒರಲುತ್ತಿದೆ ; ಗೋಣಿಯಿಂದಾಲಕ್ಕೆ ಆಲದಿಂ ಬೂರುಗಕೆ ಹಾರಾಡಿ ಗಿಳಿಮರಿಯು ಮುದ್ದಿಡುತಿವೆ.