ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಏಳನೆಯ ಪ್ರಕರಣ.
೩೯


ಶ್ಯಕವು. ಒಂದು ಕುಟುಂಬದಲ್ಲಿ ಸಂಪಾದಿಸಲಾರದವನಾದ ಒಬ್ಬ ಅಶಕ್ತನಿದ್ದ ಪಕ್ಷದಲ್ಲಿ ಅವನನ್ನು ಪೋಷಿಸಬೇಕಾದುದು ಸಮರ್ಥನಾದವನಿಗೆ ಹೇಗೆ ಆವಶ್ಯಕವೋ, ಹಾಗೆಯೇ ಭಗವತ್ಕುಟುಂಬವಾದ ಈ ಪ್ರಪಂಚದಲ್ಲಿ ಶಕ್ತಿವಂತರು ಅಶಕ್ತರನ್ನು ಕಾಪಾಡುವುದು ಮುಖ್ಯ ಕರ್ತವ್ಯವಾಗಿರುವುದು. ಆದುದರಿಂದ ಅಂಗವೈಕಲ್ಯದಿಂದಾಗಲೀ, ವೃದ್ಧಾಪ್ಯದಿಂದಾಗಲೀ, ರೋಗದಿಂದಾಗಲೀ, ಶ್ರಮಪಟ್ಟು ಗಳಿಸಲಾರದಂತಹ ಬಡವರಿಗೆಲ್ಲ ನಮ್ಮ ಕೈಲಾದ ಸಾಹಾಯವನ್ನು ಮಾಡಬೇಕು. ಶಕ್ತಿಯಿದ್ದರೂ ಶ್ರಮಪಡುವುದಕ್ಕೆ ಮನಸಿಲ್ಲದೆ ಮೈಗಳ್ಳರಾಗಿ ಯಾಚನೆಯನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡು ತಿರುಗುವ ದೃಢಗಾತ್ರರಿಗೆ ಮಾತ್ರ ನಾವೇನನ್ನೂ ಕೊಡಲಾಗದು. ದೇಶಕ್ಕೆ ಕ್ಷಾಮಪ್ರಾಪ್ತಿಯಾದಕಾಲದಲ್ಲಾಗಲೀ, ಪರದೇಶದಿಂದ ಮಾರ್ಗಾಯಾಸವನ್ನು ಹೊಂದಿಬಂದಿರುವಾಗಲಾಗಲೀ, ದೈವವಶದಿಂದ ಯಾವುದಾದರೂ ವಿಪತ್ತು ಸಂಭವಿಸಿದಾಗಲಾಗಲೀ, ದೃಢಕಾಯರಾಗಿರುವಂತಹರಿಗೂ ಕೊಡಬೇಕು. ಪಾತ್ರವನ್ನರಿತು ಈಪ್ರಕಾರವಾಗಿ ಮಾಡುವ ದಾನದಿಂದಲೇ ಫಲವಾಗುವುದು. ಸಾಧ್ಯವಾದಷ್ಟು ಮಟ್ಟಿಗೆ ಎರಡನೆಯವರಿಗೆ ತಿಳಿಯದಂತೆ ರಹಸ್ಯವಾಗಿ ದಾನಮಾಡಬೇಕು. ಪುಷ್ಪವು ಮರೆಯಲ್ಲಿದ್ದರೂ ಅದರ ಪರಿಮಳವು ಎಲ್ಲರಿಗೂ ತಿಳಿಯುವಂತೆ, ಯೋಗ್ಯನಾದವನು ಎಲ್ಲಿದ್ದರೂ ಅವನ ಸುಗುಣಗಳು ಬಹಿರಂಗಕ್ಕೆ ಬಾರದಿರವು. ಪ್ರಸಿದ್ದಿಯನ್ನು ಪಡೆಯುವುದಕ್ಕೋಸುಗ, ಮುಖಸ್ತುತಿಯನ್ನು ಮಾಡುವವರಿಗೂ ಮೋಸಗಾರರಿಗೂ ಮಾಡತಕ್ಕ ದಾನಗಳು ನಿರರ್ಥಕಗಳು.

ಚಂದ್ರ-ನಾವು ಇತರಜನರ ವಿಷಯದಲ್ಲಿ ನಡೆದುಕೊಳ್ಳಬೇಕಾದ ಧರ್ಮಗಳನ್ನು ಕುರಿತು ತಿಳಿಸುವೆನೆಂದು ಕೆಲವು ದಿನಗಳ ಹಿಂದೆ ವಾಗ್ದಾನ ಮಾಡಿದ್ದರಲ್ಲವೆ? ಈಗ ದಯೆಯಿಟ್ಟು ಅವುಗಳನ್ನೆಲ್ಲಾ ಸಮಗ್ರವಾಗಿ ತಿಳಿಸಬೇಕು.

ಗುರು-ಹಿಂದೆ ನಾನು ತಿಳಿಸಿದ ಸತ್ಯ ಮೊದಲಾದುವೂ, ಈಗ ತಿಳಿಸಿದ ದಾನವಿಷಯವೂ, ಜನರ ವಿಷಯಿಕಗಳಾದ ಧರ್ಮಗಳಲ್ಲಿಯೇ ಸೇರುವುವು. ಅಂತಹ ಧರ್ಮಗಳನ್ನೆಲ್ಲ ಸಂಪೂರ್ಣವಾಗಿ ಹೇಳಬೇಕಾದರೆ ಬಹುದಿನಗಳು ಬೇಕಾಗುವುವು. ಸಾಮಾನ್ಯವಾಗಿ ಜನರ ವಿಷಯದಲ್ಲಿ ನಡೆದು