ಪುಟ:ಚಂದ್ರಮತಿ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಂಟನೆಯ ಪ್ರಕರಣ. ಒಂದುದಿನ ಚಂದ್ರಮತಿಯ ಒಡನಾಡಿಯೊಬ್ಬಳು ಗೊಂಬೆಯಾಟ ಕೋಸುಗ ತಂದಿದ್ದ ಕಡಲೆಯು ನೆಲದಮೇಲೆ ಚೆಲ್ಲಿಹೋಯಿತು. ಆಗ ಸಮೀಪದಲ್ಲಿಯೇ ಒಂದು ಗಿಡದಮೇಲೆ ಕುಳಿತುಕೊಂಡು ನೋಡುತ್ತಿದ್ದ ಒಂದು ಕಾಗೆಯು ಕೆಳಗಿಳಿದುಬಂದು, ಆಹಾರಪದಾರ್ಥವು ದೊರೆತಿರುವು ದೆಂದು ತನ್ನ ಜೊತೆಕಾಗೆಗಳಿಗೆ ತಿಳಿಸುವುದಕ್ಕೋಸುಗ ಕಾ, ಕಾ, ಎಂದು ಕೂಗಲಾರಂಭಿಸಿತು. ತತ್‌ಕ್ಷಣವೇ ಅದರ ಅಭಿಪ್ರಾಯವನ್ನರಿತು ದೂರ ದಲ್ಲಿದ್ದ ಅದರ ಬಂಧುವರ್ಗವೆಲ್ಲ ನಿಮಿಷಮಾತ್ರದಲ್ಲಿ ಅಲ್ಲಿಗೆಬಂದು ಕಾಳು ಗಳನ್ನೆಲ್ಲಾ ತೆಗೆದುಕೊಂಡು ಹೋದುವು. ಅವುಗಳಲ್ಲಿ ಒಂದು ಕಾಗೆಯು ಕೆಲಕಾಳುಗಳನ್ನು ಎತ್ತಿಕೊಂಡುಹೋಗಿ, ಆಹಾರಕ್ಟೋಸುಗ ಬಾಯ್ದೆ ರೆದುಕೊಂಡು ತಾಯಿಯ ಆಗಮನವನ್ನೇ ಇದಿರುನೋಡು ಬಾರಿ ಬಾರಿಗೂ ಕೂಗುತ್ತೆ ಗೂಡಿನಿಂದ ಹೊರಗೆ ಬರುವುದಕ್ಕೆ ಪ್ರಯತ್ನಿಸುತ್ತಿ ರುವ, ತನ್ನ ಮರಿಯ ಬಾಯಲ್ಲಿ ಇಟ್ಟು ತಾನು ಮತ್ತೆ ಹಿಂತಿರುಗಿ ಬಂದು ಕಾಳುಗಳನ್ನಾಯ್ತು ತೆಗೆದುಕೊಂಡಿತು. ಇಷ್ಟು ಹೊತ್ತೂ ಚಂದ್ರಮತಿಯು ಆ ಕಾಗೆಗೆ ತನ್ನ ಮರಿಯಮೇಲಿರುವ ಆದರಾತಿಶಯಕ್ಕೂ ಸ್ವಜಾತಿ ಪಕ್ಷಿ ಗಳಿಗೆಲ್ಲ ಸಾಹಾಯ್ಯವನ್ನು ಮಾಡಬೇಕೆಂದು ಕೂಗಿದ ಮೊದಲನೆಯ ಕಾಗೆಯ ಉಪಕಾರಚಿಂತೆಗೂ ಆಶ್ಚರ್ಯಪಟ್ಟುಕೊಂಡು ನೋಡುತ್ತಿದ್ದಳು ತರುವಾಯ ವಿದ್ಯಾಸಮುದ್ರನು ಇದನ್ನೆಲ್ಲ ಮರೆಯಲ್ಲಿ ನಿಂತು ನೋಡಿ, ನಂಟರ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮವನ್ನು ಬೋಧಿಸುವು ದಕ್ಕೆ ಇದೇ ತಕ್ಕ ಸಮಯವೆಂದೆಣಿಸಿ ಚಂದ್ರಮತಿಯ ಬಳಿಗೆಬಂದು ಇಂತೆಂದನು : ಗುರು--ಮಗೂ ! ನೀನು ಆ ಕಾಗೆಗಳನ್ನು ಇಷ್ಟು ಆಶ್ಚರ್ಯದಿಂದ ನೋಡುತ್ತಿರುವೆಯೇಕೆ ? - ಚಂದ್ರ-ಆ ಕಾಗೆಯು ತನ್ನ ಮರಿಗೆ ಅಷ್ಟು ಪ್ರೇಮದಿಂದ ಗುಟುಕು ಕೊಡುವುದನ್ನೂ ಆ ಮತ್ತೊಂದು ಕಾಗೆಯು ಕಡಲೆಯ ಕಾಳನ್ನು ತಿನ್ನು