ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ರಾಮಕೃಷ್ಣಪರಮಹಂಸರ

ಒಂದೊಂದು ಪದ್ದತಿಯೂ, ಒಂದೊಂದು ಆಚಾರವೂ ಧರ್ಮ ಮೂಲವಾಗಿದೆ.

'ಧರ್ಮ' ವೆಂದರೇನು? ಯಾವುದು ಈಶ್ವರಸಾಕ್ಷಾತ್ಕಾರಕ್ಕೆ ಸಹಕಾರಿಯಾಗುವುದೋ ಅದೇ ಧರ್ಮ, ಈ ಈಶ್ವರಸಾಕ್ಷಾತ್ಕಾರವು ಇಂದ್ರಿಯಗಳ ಮೂಲಕ ಆಗತಕ್ಕದ್ದಲ್ಲ ಎಂದು ವೇದಗಳಿಂದ ಗೊತ್ತಾಗುತ್ತದೆ. ಇಂದ್ರಿಯಾತೀತವಾದ ಆಧ್ಯಾತ್ಮಿಕ ಅನುಭವವನ್ನು ಪಡೆಯುವುದು ಬಹುಕಠಿಣ. ಮೇಲಿನಿಂದ ಕೆಳಕ್ಕೆ ಉರುಳುವುದು ಹೇಗೆ ಸುಲಭವೋ ಹಾಗೆ ಇಂದ್ರಿಯಪರವಶರಾಗಿ ಆ ಮೂಲಕ ಸುಖ ವನ್ನು ಪಡೆಯುವದು ಅತಿಸುಲಭ. ಆದರೆ ಇಂದ್ರಿಯ ನಿಗ್ರಹವನ್ನು ಮಾಡಿ ತನ್ಮೂಲಕ ಈಶ್ವರ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಕಡಿದಾದ ಬೆಟ್ಟವನ್ನು ಏರುವಂತೆ ಬಹುಕಷ್ಟ ಸಾಧ್ಯವಾದ ಕೆಲಸ. ಆದರೆ ಇದು ಅಸಾಧ್ಯವಲ್ಲ ವೆಂದೂ ಪ್ರಯತ್ನ ಮಾಡಿದರೆ ಸಾಧ್ಯ ವೆಂದೂ ಅನಾದಿಕಾಲದಿಂದ ಈಗಿನ ವರೆಗೂ ಅವತಾರಮಾಡಿದ ಮಹಾ ಪುರುಷರು ತಮ್ಮ ಜೀವನ ಚರಿತ್ರೆಯಿಂದ ಬೋಧಿಸಿದ್ದಾರೆ. ವೇದಕಾಲದಲ್ಲಿ ಹೀಗೆ ಈಶ್ವರ ಸಾಕ್ಷಾತ್ಕಾರ ಮಾಡಿ ಕೊಂಡವರನ್ನು ಋಷಿಗಳೆಂದು ಕರೆಯುತ್ತಿದ್ದರು. ಅವರ ಮಾತೇ ವೇದಗಳು; ಅವರ ಅನುಭವವೇ ಉಪನಿಷತ್ತು ; ಅವರು ವಿಧಿಸಿದ ವಿಧಿಗಳೇ ಶಾಸ್ತ್ರ. ಇವರಿಗೆ 'ಆಪ್ತ' ರೆಂದು ಹೆಸರು. ಇಂಥ ('ಆಪ್ತವಾಕ್ಯ' ವೇ ಆಧ್ಯಾತ್ಮಿಕ ವಿಚಾರಗಳಲ್ಲಿ ಪ್ರಮಾಣ, 'ಆಪ್ತ'ರೆಂದರೆ ಪಡೆದವರೆಂದರ್ಥ. ಇಂಥವರೇ ಪ್ರಪಂಚದ ತತ್ವವನ್ನು ಸ್ವಾನುಭವದಿಂದ ತಿಳಿದುಕೊಂಡವರಾದ್ದರಿಂದ ಆಧ್ಯಾತ್ಮಿಕ ಧರ್ಮಕ್ಕೆ ಮೂಲಾಧಾರ. ಅಂಥವರನ್ನೇ ಷಡ್ಡರ್ಶನ ಕಾಲದಲ್ಲಿ ಅಧಿಕಾರಿಕ ಪುರುಷರು, ಪ್ರಕೃತಿಲೀನರು, ಈಶ್ವರಕೋಟಿಗಳೆಂದು ಮುಂತಾಗಿ ಕರೆಯುತಿದ್ದರು. ಅದಾದ ಮೇಲೆ ಪುರಾಣಗಳ ಕಾಲದಲ್ಲಿ ಅಂಥವರನ್ನು ಅವತಾರ ಪುರುಷರೆಂದು ಕರೆಯುತ್ತಿದ್ದರು. ಇಂಥ ಮಹಾಪುರುಷರು ಧರ್ಮಕ್ಷೇತ್ರವಾದ ಈ ಭರತ ಖಂಡದಲ್ಲಿ ಪುನಃ ಪುನಃ ಜನ್ಮ