ಆರನೆಯ ಅಧ್ಯಾಯ
ಸಾಧನಗಳು ; ಮೊದಲನೆಯಭಾಗ : 1855-1858.
ಪರಮಹಂಸರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರಾಗಿ ಬಹುಮಟ್ಟಿಗೆ ರಾಮಕುಮಾರನ ಲಾಲನೆಪಾಲನೆಗಳಲ್ಲಿಯೇಬೆಳೆದಿದ್ದರು. ಆದ್ದರಿಂದ ಪಿತೃಸಮಾನವಾದ ಅಣ್ಣನು ದೇಹಬಿಟ್ಟಸುದ್ದಿಯನ್ನು ಕೇಳಿ ಅವರಿಗೆ ಹಿಡಿಯಲಾರದಷ್ಟು ದುಃಖವಾಯಿತು.ಈ ಜಗತ್ತಿನಲ್ಲಿ ಸಮಸ್ತವೂ ಅಸತ್ಯವೆಂಬುದು ಮನಸ್ಸಿಗೆ ಮತ್ತಷ್ಟುನಾಟಿತು. ಜಗದಂಬೆಯಲ್ಲಿ ಭಕ್ತಿಯ ಪೂಜೆಯಲ್ಲಿ ಆಸಕ್ತಿಯಹೆಚ್ಚಾದುವು. ಇಲ್ಲಿಂದ ಮುಂದಕ್ಕೆ ಶಾಸ್ತ್ರೀಯವಾಗಿ ದೇವೀಪೂಜೆಮಾಡಿದಮೇಲೆ ದೇವಿಯ ಎದುರಿಗೆ ತನ್ಮಯರಾಗಿ ಕುಳಿತು ಹೊತ್ತುಕಳೆಯುತ್ತಿದ್ದರು. ಆಗಾಗ ರಾಮಪ್ರಸಾದ ಮುಂತಾದ ದಾಸರಕೀರ್ತನೆಗಳನ್ನು ಹಾಡುತ್ತೆ ಹಾಡುತ್ತ ಕೇವಲ ವ್ಯಾಕುಲ ಹೃದಯರಾಗಿ `ತಾಯಾ, ನೀನು ರಾಮಪ್ರಸಾದರಿಗೆ ದರ್ಶನಕೊಟ್ಟೆ ; ನನಗೆಯಾಕೆ ದರ್ಶನಕೊಡುವುದಿಲ್ಲ? ನಾನು ಧನ, ಜನ, ಭೋಗ,ಸುಖ ಇವುಗಳಾವುದನ್ನೂ ಅಪೇಕ್ಷಿಸುವುದಿಲ್ಲ. ನನಗೆ ದರ್ಶನವನ್ನು ಕೊಡು' ಎಂದು ಪ್ರಾರ್ಥಿಸುವರು. ಆಗ ಅವರ ಕಣ್ಣೀರಿಂದಎದೆಯು ತೊಟ್ಟು ಹೋಗುತ್ತಿತ್ತು.ಹೀಗೆ ಕಾತರರಾಗಿ ಅತ್ತಮೇಲೆ ಹೃದಯದ ಭಾರವು ಕಡಿಮೆಯಾಗಿ ಪುನಃ ಕೀರ್ತನೆ ಹೇಳುವುದಕ್ಕೆ ಮೊದಲು ಮಾಡುತ್ತಿದ್ದರು.
ಮಧ್ಯಾಹ್ನದಲ್ಲಿಯೂ ಸಾಯಂಕಾಲದಲ್ಲಿಯೂ ದೇವಸ್ಥಾನದಬಾಗಿಲುಹಾಕಿದಮೇಲೆ ಹತ್ತಿರದಲ್ಲಿದ್ದ ಒಂದು ನಿರ್ಜನವಾದಕಾಡಿಗೆಹೋಗಿ ದೇವಿಯ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದರು. ಹೃದಯನುಅವರ ಜೊತೆಯಲ್ಲಿಯೇ ಯಾವಾಗಲೂ ಇರುತ್ತಿದ್ದನೆಂದು ಹಿಂದೆ